ಪುತ್ತೂರು: ಪುತ್ತೂರಿನ ಹೆಸರಾಂತ ಜ್ಯುವೆಲ್ಲರಿಯಾದ ಮುಳಿಯ ಜ್ಯುವೆಲ್ಲರಿ ಮಳಿಗೆಯಲ್ಲಿ ಪುತ್ತೂರು ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಸಿಬ್ಬಂದಿ ವರ್ಗದವರಿಗೆ ಸಂಚಾರಿ ನಿಯಮಗಳ ಅಗತ್ಯತೆ, ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀ ಕೃಷ್ಣ ನಾರಾಯಣ ಮುಳಿಯ ಅವರು ಈಗಿನ ವಾಸ್ತವದಲ್ಲಿ ಸಂಚಾರಿ ನಿಯಮಗಳ ಅರಿವು ಮತ್ತು ಪಾಲನೆ ಅತ್ಯಗತ್ಯವಾಗಿದ್ದು ಇದನ್ನು ಎಲ್ಲರೂ ಪಾಲಿಸುವಂತವರಾಗೋಣ ಎಂದರು.
ಪುತ್ತೂರು ಪೋಲಿಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಎಮ್.ವಿ. ಚೆಲುವಯ್ಯ ಅವರು ಸಂಚಾರಿ ನಿಯಮಗಳ ಮಾಹಿತಿ ನೀಡಿದರು. ನಿಯಮಗಳು ನಮ್ಮ ನಮ್ಮ ರಕ್ಷಣೆಯ ಅವಿಭಾಜ್ಯ ಅಂಗವಾಗಿದ್ದು, ನಾವು ನಮ್ಮ ಸುರಕ್ಷತೆಗಾಗಿ ಪಾಲಿಸಬೇಕಾಗಿದೆ. ಪೋಲಿಸರು ಹಿಡಿಯುತ್ತಾರೆ ಎಂದು ನಿಯಮ ಪಾಲಿಸುವುದರಲ್ಲಿ ತಿರುಳಿಲ್ಲ ಎಂದರು. ಅಲ್ಲದೆ ಈ ಮಾಹಿತಿಯನ್ನು ಇತರರಿಗೂ ತಿಳಿಸಿ. ಅವರಲ್ಲಿಯೂ ಅರಿವು ಮೂಡಿಸಿ ಎಂದು ಮನವಿ ಮಾಡಿದರು. ಸಂಸ್ಥೆಯ ಗುರುರಾಜ್ ಅವಭೃತರವರು ಸ್ವಾಗತಿಸಿದರು. ನಾಮ್‌ದೇವ್ ಮಲ್ಯ ಅವರು ವಂದಿಸಿದರು. ಪವಿತ್ರ. ಯು. ಅವರು ಕಾರ್ಯಕ್ರಮ ನಿರೂಪಿಸಿದರು.