ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೊಬ್ಬರು ‘ಜನಮೆಚ್ಚುಗೆ’ಯ ಡಾಕ್ಟರ್

July 3, 2019
8:00 AM

ಪುತ್ತೂರು: ಸರಕಾರಿ ಆಸ್ಪತ್ರೆಗಳಲ್ಲಿ  ಇರುವ ಸೌಲಭ್ಯ ಬಳಸಿಕೊಂಡು ಉತ್ತಮ ಸೇವೆ ನೀಡಲು ಸಾಧ್ಯವಿದೆ. ಹೀಗೆ ಸೇವೆ ಬೀಡುವ ವೈದ್ಯರು ಹಲವರು ಇದ್ದಾರೆ. ಇದರಲ್ಲಿ  ಪುತ್ತೂರು  ತಾಲೂಕು ಸರಕಾರಿ ಆಸ್ಪತ್ರೆಯ ಡಾ. ಜಗದೀಶ್ ಒಬ್ಬರು.

Advertisement
Advertisement

ದಿನವೊಂದಕ್ಕೆ 150 ರಿಂದ 200 ಮಂದಿ ರೋಗಿಗಳನ್ನು  ಪರೀಕ್ಷೆ ಮಾಡುವ ಡಾ.ಜಗದೀಶ್ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲೂ ತಮ್ಮ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಬೆಳಿಗ್ಗೆ 9 ಗಂಟೆ ಬದಲಿಗೆ 8.15 ಕ್ಕೆ ಆಸ್ಪತ್ರೆಗೆ ಹಾಜರಾಗುವ ಇವರ ಕೊಠಡಿಯ ಮುಂದೆ ಸಾಲು ಸಾಲು ರೋಗಿಗಳ ಸರದಿ. ‘ಡಾ. ಜಗದೀಶ್ ಉಲ್ಲೆರಾ..!’ ಎಂದು ಕೇಳಿಯೇ ಸರದಿ ಸಾಲಿನಲ್ಲಿ ನಿಲ್ಲುವ ರೋಗಿಗಳ ಸಂಖ್ಯೆ ಹೆಚ್ಚಿದೆ.  ಸರಕಾರಿ ಆಸ್ಪತ್ರೆಯಲ್ಲಿ  ವೈದ್ಯರು ಉತ್ತಮ ಕೆಲಸ ಮಾಡುವುದಿಲ್ಲ ಎಂದು ಎಲ್ಲರಿಗೂ ಹೇಳಿಬಿಡುತ್ತಾರೆ. ಆದರೆ ಸೂಕ್ತವಾಗಿ ಸ್ಪಂದಿಸುವ ವೈದ್ಯರು ಎಲ್ಲಾ ತಾಲೂಕುಗಳಲ್ಲಿ ಇದ್ದಾರೆ. ಇದಕ್ಕೆ ಉದಾಹರಣೆ ಪುತ್ತೂರಿನ ಡಾ.ಜಗದೀಶ್.

Advertisement

 

Advertisement

ಪುತ್ತೂರು ಸರಕಾರಿ  ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಮಾಡುತ್ತಿರುವ ಇವರು ಕೆಲವು ಸಮಯದಿಂದ ನಿಯೋಜನೆಯಡಿಯಲ್ಲಿ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯಲ್ಲೂ ವಾರದಲ್ಲಿ 2 ದಿನ ರೋಗಿಗಳ ಆರೋಗ್ಯ ತಪಾಸಣೆಗೆ ಲಭ್ಯವಾಗುತ್ತಿದ್ದಾರೆ.
ಮೂಡುಶೆಡ್ಡೆಯ ಟಿ.ಬಿ ಆಸ್ಪತ್ರೆಯಲ್ಲಿ ಮೊದಲು ವೃತ್ತಿ ಆರಂಭಿಸಿದ ಡಾ.ಜಗದೀಶ್ ಅವರು ಸರಳ ಸಜ್ಜನಿಕೆ ವ್ಯಕ್ತಿ. ರೋಗಿಗಳ ಜತೆ ಆತ್ಮೀಯತೆಯಿಂದ ಬೆರೆಯುವ ಇವರ ಗುಣ ರೋಗಿಗಳ ಪ್ರೀತಿ ಗಳಿಸಲು ಅತೀ ಮುಖ್ಯ ಕಾರಣ. ಎಲ್ಲಾ ಜನರಲ್ ಕಾಯಿಲೆಗಳಿಗೆ ಔಷಧಿ ನೀಡುವ ಅವರು ರೋಗಿಗಳ ಒತ್ತಡದ ಹಿನ್ನಲೆಯಲ್ಲಿ ಎಷ್ಟೋ ದಿನಗಳು ಮಧ್ಯಾಹ್ನ ಊಟವೇ ಮಾಡುವುದಿಲ್ಲ. ಕೇವಲ 2 ಬಿಸ್ಕತ್ತು ತಿಂದು ನೀರು ಕುಡಿದು ರೋಗಿಗಳ ಆರೋಗ್ಯ ತಪಾಸಣೆ ಮಾಡುವ ಈ ವೈದ್ಯರು ಸೇವೆಗೆ ಮತ್ತೊಂದು ಪರ್ಯಾಯ ಹೆಸರು.
ದಿನದ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ತಮ್ಮಲ್ಲಿ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ಡಾ.ಜಗದೀಶ್ ಕರ್ತವ್ಯಕ್ಕಿಂತಲೂ ಸೇವೆ ದೊಡ್ಡದೆಂದು ನಂಬಿದವರು. ದಿನವೊಂದರಲ್ಲಿ 270 ಮಂದಿ ರೋಗಿಗಳ ತಪಾಸಣೆ ಮಾಡಿದ ದಾಖಲೆಯೂ ಇವರದ್ದಾಗಿದೆ. ಮಮತೆ ಪ್ರೀತಿ ವಾತ್ಸಲ್ಯ ರೋಗಿಗಳ ಸಮಸ್ಯೆಯನ್ನು ಅರ್ಧದಷ್ಟು ಪರಿಹಾರ ಮಾಡುತ್ತದೆ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ಡಾ.ಜಗದೀಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿಯೇ ಪೂರ್ಣಕಾಲಿಕ ವೈದ್ಯರಾಗಿರಬೇಕು ಎಂಬುವುದು ಇವರ ಬಳಿ ಚಿಕಿತ್ಸೆ ಪಡೆದ, ಪಡೆಯುತ್ತಿರುವ ಜನತೆಯ ಮಹದಾಸೆಯಾಗಿದೆ.

ಅನೇಕ ಬಾರಿ ಸಾಮಾಜಿಕ ಕಾಳಜಿಯ , ಸೇವೆಯೇ ಮುಖ್ಯ ಎಂದು ಕೆಲಸ ಮಾಡುವ  ವೈದ್ಯರುಗಳನ್ನು ಹಿರಿಯ ಅಧಿಕಾರಿಗಳು, ಕೆಲವು ಜನಪ್ರತಿನಿಧಿಗಳು ತಮ್ಮ ಪ್ರತಿಷ್ಠೆಗಾಗಿ ತರಾಟೆಗೆ ತೆಗೆದುಕೊಂಡು ಉತ್ಸಾಹವನ್ನು ಕುಂದಿಸುವುದನ್ನು  ಕಂಡಿದ್ದೇವೆ. ಇದರಿಂದ ಮತ್ತೆ ಸಂಕಷ್ಟಕ್ಕೆ ಒಳಗಾಗುವುದು  ರೋಗಿಗಗಳೆ. ಹೀಗಾಗಿ ಉತ್ತಮ ವೈದ್ಯರನ್ನು, ಜನಮೆಚ್ಚುಗೆಯ ವೈದ್ಯರನ್ನು  ಗುರುತಿಸಿ ಗೌರವಿಸಬೇಕಾದ್ದು ಸಮಾಜದ ಕರ್ತವ್ಯವೂ ಹೌದು.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror