ಪುತ್ತೂರು: ಕೃಷಿ ಉಳಿಯಲು ಕೃಷಿಯಲ್ಲಿ ಲಾಭ ಗಳಿಕೆಯೂ ಮುಖ್ಯವಾಗುತ್ತದೆ. ಹೀಗಾಗಿ ಕೃಷಿಕರಿಗೆ ಆದಾಯ ತರುವ ಉದ್ಯಮ, ಮೌಲ್ಯವರ್ಧನೆಗಳ ಕಡೆಗೆ ಗಮನಹರಿಸಲು ಯುವಕರು ತಾಂತ್ರಿಕತೆ ಬೆಳೆಸಿ ಯುವಕರು ಕೃಷಿ ಉದ್ಯಮ ಸ್ಥಳೀಯವಾಗಿ ತೆರೆಯಬೇಕಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರದಂದು ಪುತ್ತೂರು ಸುದಾನ ವಸತಿಯುತ ಶಾಲಾ ವಠಾರದಲ್ಲಿ ಕರ್ನಾಟಕ ಸರಕಾರ, ಐಐಎಚ್‍ಆರ್, ತೋಟಗಾರಿಕಾ ಇಲಾಖೆ, ನವತೇಜಟ್ರಸ್ಟ್, ಪುತ್ತೂರು ಜೇಸಿಐ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಮೇ 23 ರಿಂದ 25 ರವರೆಗೆ ನಡೆಯುವ ಹಣ್ಣು ಮೇಳದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದರು. ಮಿಶ್ರ ಕೃಷಿಯ ಮೂಲಕ ಕೃಷಿಕರ ಆದಾಯ ಹೆಚ್ಚು ಮಾಡಬಹುದು. ಅಂತಹ ಮಿಶ್ರ ಕೃಷಿಗಳಲ್ಲಿ ಹಣ್ಣುಗಳು, ತರಕಾರಿಯೂ ಸೇರುತ್ತದೆ. ಹಣ್ಣುಗಳ ಮೌಲ್ಯವರ್ಧನೆ, ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿಗಳು ಅಗತ್ಯವಾಗಿ ಬೇಕಿದೆ. ಈ ಕಾರಣದಿಂದ ಪ್ರೋತ್ಸಾಹ ಅಗತ್ಯವಿದೆ. ರಾಜ್ಯಮಟ್ಟದ ಇಂತಹ ಮೇಳಗಳ ಮೂಲಕ ರಾಜ್ಯದ ಕೃಷಿಕರಿಗೆ ಉತ್ತಮ ಸಂದೇಶ ಪುತ್ತೂರಿನಿಂದ ನೀಡಬೇಕಿದೆ ಎಂದರು.
ವೇದಿಕೆಯಲ್ಲಿ ಸುದಾನ ಶಾಲಾ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ,ಪುತ್ತೂರು ಹಣ್ಣುಮೇಳ ಕಾರ್ಯಕ್ರಮ ನಿರ್ದೇಶಕ ಪ್ರಜ್ವಲ್ ರೈ ಉಪಸ್ಥಿತರಿದ್ದರು.
ನವತೇಜ ಟ್ರಸ್ಟ್ ನವತೇಜ ಟ್ರಸ್ಟ್ ಕಾರ್ಯದರ್ಶಿ ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.