ಪೆರಾಜೆ ಸಹಕಾರ ಸಂಘಕ್ಕೆ ನೂತನ ವರ್ಷದಲ್ಲೇ ರೂ.9.59 ಲಕ್ಷ ಲಾಭ : ನಾಗೇಶ್ ಕುಂದಲ್ಪಾಡಿ

September 24, 2019
5:26 PM

ಪೆರಾಜೆ: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪೆರಾಜೆ ಇದರ 2018-19ರ ನೂತನ ವರ್ಷದಲ್ಲಿ ರೂ. 9.59 ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.

Advertisement
Advertisement

ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪಾರದರ್ಶಕ ಮತ್ತು ಸಕರಾತ್ಮಕ ಸಹಕಾರ ಮನೋಭಾವನೆಯ ಸೇವೆಯೇ ನಮ್ಮ ಮೊದಲ ಗುರಿ. ಸದಸ್ಯರು ಸ್ವಾವಲಂಬಿಗಳಾಗುವಲ್ಲಿ ಸಂಘದ ವತಿಯಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸದಸ್ಯರು ಸಾಲಮನ್ನಾ ಮೊತ್ತವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿಸಿ ಹೊಂದಿಕೊಳ್ಳುವ ಬಗ್ಗೆ ಹಾಗೂ ಕೃಷಿ ಉತ್ಪನ್ನಗಳನ್ನು ಸಂಘದ ಮುಖಾಂತರವೇ ಮಾರಾಟ ಮಾಡಿ ಸಂಘದ ವ್ಯವಹಾರಗಳನ್ನು ಹೆಚ್ಚಿಸುವುದರ ಜೊತೆಗೆ ತಾವೂ ಆರ್ಥಿಕವಾಗಿ ಸದೃಡರಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾ.ಕೃ.ಪ.ಸ ಸಂಘದ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ, ನಿರ್ದೇಶಕರುಗಳಾದ ಅಶೋಕ್ ಪೆರುಮುಂಡ, ಗಾಂಧಿಪ್ರಸಾದ್ ಬಂಗಾರಕೋಡಿ, ದಿನರಾಜ ದೊಡ್ಡಡ್ಕ, ಪ್ರಸನ್ನ ನೆಕ್ಕಿಲ, ರೇಣುಕಾ.ಎಲ್ ಕುಂದಲ್ಪಾಡಿ , ಪ್ರಮೀಳ ಭಾರದ್ವಾಜ್, ಉದಯ ಆಚಾರ್, ದಾಸಪ್ಪ ಮಡಿವಾಳ, ಜಯರಾಮ .ಪಿ.ಟಿ. ಕಿರಣ್ ಬಂಗಾರಕೋಡಿ, ಶೇಷಪ್ಪ ಎನ್.ವಿ, ಜಿಲ್ಲಾ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರು, ಸಂಘದ ಸಿಬ್ಬಂದಿ, ಜನಪ್ರತಿನಿಧಿಗಳು, ಉಪಸ್ಥಿತರಿದ್ದರು.

ಯತೀಶ್ ಪ್ರಾರ್ಥಿಸಿದರು‌‌. ಪ್ರಭಾರ ಮುಖ್ಯ ಕಾರ್ಯನಿರ್ವಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಸ್ವಾಗತಿಸಿ, ಪ್ರಮೀಳಾ ಭಾರದ್ವಾಜ್ ವಂದಿಸಿದರು. ಬ್ಯಾಂಕ್‌ನ ಸಿಬ್ಬಂದಿಗಳಾದ ಜಾನಕಿ ಎನ್.ಎಸ್ ಮತ್ತು ಗೋಪಾಲಕೃಷ್ಣ ಅಡ್ತಲೆ ಅವರು ನಿರೂಪಿಸಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೋವುಗಳಿಂದ ಖಂಡಿತಾ ಅರಣ್ಯಕ್ಕೆ ಅಪಾಯವಿಲ್ಲ – ರಾಘವೇಶ್ವರ ಶ್ರೀ
July 23, 2025
11:31 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಮಳೆ ಮುಂದುವರಿಕೆ | ಉತ್ತರ ಭಾರತದ ಹಲವೆಡೆ ಭಾರಿ ಮಳೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ |
July 23, 2025
10:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-07-2025 | ನಿರಂತರ ಹನಿ ಮಳೆಗೆ ಕಾರಣವೇನು..? | ವಾಯುಭಾರ ಕುಸಿತದ ಪರಿಣಾಮವೂ…ಮಳೆಯ ಆತಂಕವೂ…!
July 23, 2025
3:57 PM
by: ಸಾಯಿಶೇಖರ್ ಕರಿಕಳ
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ | ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
July 23, 2025
2:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group