ಬೆಳ್ಳಾರೆ: ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾವೈಕ್ಯ ಯುವಕ ಮಂಡಲದ ವತಿಯಿಂದ 2ನೇ ವರ್ಷದ ಮೊಸರು ಕುಡಿಕೆ ಉತ್ಸವ ಪೆರುವಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಮುಖ್ಯ ಶಿಕ್ಷಕಿ ತುಳಸಿ ಮೊಸರು ಕುಡಿಕೆ ಉತ್ಸವವನ್ನು ಉದ್ಘಾಟಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಭಾವೈಕ್ಯ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮನಾಥ ರೈ, ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಭಾವೈಕ್ಯ ಯುವತಿ ಮಂಡಲದ ಅಧ್ಯಕ್ಷೆ ಆಶಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಹರ್ಷಿತ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.
ಬೆಳ್ಳಾರೆ ಹಿಂದು ಜಾಗರಣ ವೇದಿಕೆ, ಚಾಮುಂಡೇಶ್ವರಿ ಗೆಳೆಯರ ಬಳಗ, ಶ್ರೀರಾಂ ಫ್ರೆಂಡ್ಸ್, ಸಂಕಲ್ಪ ಫ್ರೆಂಡ್ಸ್ ಕಳಂಜ, ಭಾವೈಕ್ಯ ಯುವಕ ಮಂಡಲ, ಪವರ್ ಗಾಯ್ಸ್ ಬೆಳ್ಳಾರೆ ಸೇರಿದಂತೆ ಇಪ್ಪತ್ತಕೂ ಅಧಿಕ ತಂಡಗಳು ಮೊಸರು ಕುಡಿಕೆಯಲ್ಲಿ ಭಾಗವಹಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel