ಪೌರತ್ವ ತಿದ್ದುಪಡಿ ಮಸೂದೆಯಿಂದ ದಲಿತ ಆದಿವಾಸಿ ಸಮುದಾಯಗಳ ಬದುಕಿಗೆ ಅತಂತ್ರ – ರವಿಚಂದ್ರ ಕೊಂಚಾಡಿ

January 13, 2020
9:20 PM

 

Advertisement
Advertisement

ಮಂಗಳೂರು: ದೇಶವನ್ನು ಆಳುತ್ತಿರುವ ಜನವಿರೋಧಿ ಬಿಜೆಪಿ ನೇತೃತ್ವದ ಸರಕಾರವು ದಲಿತ ಆದಿವಾಸಿ ಸಮುದಾಯದ ಬದುಕಿನ ಮೇಲೆ ನಿರಂತರ ಕುದುರೆ ಸವಾರಿ ಮಾಡುತ್ತಿದ್ದು ಪ್ರಸ್ತುತ ಪೌರತ್ವ ತಿದ್ದುಪಡಿ ಮಸೂದೆಯಿಂದ ಈ ದೇಶದ ಮೂಲನಿವಾಸಿಗಳಾದ ದಲಿತ ಆದಿವಾಸಿ ಬುಡಕಟ್ಟು ಸಮುದಾಯಗಳ ಬದುಕು ಅತಂತ್ರವಾದಂತೆ ಎಂದು ರವಿಚಂದ್ರ ಕೊಪ್ಪಲಕಾಡು ಹೇಳಿದರು. ಅವರು ದಲಿತ ಹಕ್ಕುಗಳ ಸಮಿತಿಯ ಕೊಂಚಾಡಿ ಘಟಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.

ಸರ್ವ ಜನಾಂಗದ ಶಾಂತಿಯ ತೋಟ ಆಗಿರುವ ಭಾರತವನ್ನು ಮತ ಧರ್ಮಗಳ ಆಧಾರದ ಮೇಲೆ ವಿಘಟನೆ ಮಾಡುವ ಸಂಘ ಪರಿವಾರದ ಕುತಂತ್ರವನ್ನು ಈ ಮಣ್ಣಿನ ಮೂಲನಿವಾಸಿಗಳಾದ ದಲಿತರು ಆದಿವಾಸಿಗಳು ಸೋಲಿಸಬೇಕೆಂದು ಕರೆನೀಡಿದರು. ಬಿಜೆಪಿ ಆಳ್ವಿಕೆ ಪ್ರಾರಂಭವಾದ ಮೇಲೆ ದಲಿತರ ಮೇಲೆ ದೌರ್ಜನ್ಯದ ಘಟನೆಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ, ನಗರ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಡಿವೈಎಫ್‌ಐ ನಗರಾಧ್ಯಕ್ಷರಾದ ನವೀನ್ ಬೊಲ್ಪುಗುಡ್ಡೆ, ಕಟ್ಟಡ ಕಾರ್ಮಿಕರ ಮುಂದಾಳುಗಳಾದ ಚಂದ್ರಹಾಸ್, ದಯಾನಂದ ಶೆಟ್ಟಿಗಾರ್, ಶಶಿಕುಮಾರ್ ಗುಂಡಳಿಕೆ ಮಾತನಾಡಿದರು.
ಗತ ವರ್ಷದ ವರದಿಯನ್ನು ಡಿಎಚ್‌ಎಸ್ ನಗರ ಸಮಿತಿ ಸದಸ್ಯರಾದ ಪ್ರವೀಣ್ ಕೊಂಚಾಡಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ನಾರಾಯಣ ಕೊಂಚಾಡಿ ವಹಿಸಿದರು. ಪ್ರಾರಂಭದಲ್ಲಿ ಪಾಂಡುರಂಗ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ದೊಂಬಯ್ಯ ಕೆ. ವಂದಿಸಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದಿಶಾಂತ್‌ ಕೆ ಎಸ್
July 23, 2025
7:46 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಮ್ಯ ಡಿ
July 23, 2025
7:39 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group