ಸವಣೂರು : ತಿಂಗಳಾಡಿ ಸ.ಉ. ಹಿ.ಪ್ರಾ.ಶಾಲೆಯಲ್ಲಿ ನಡೆದ ಕೆಯ್ಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಚೆನ್ನಾವರ ಕಿ.ಪ್ರಾ.ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪ್ರತಿಭಾ ಕರಂಜಿ ಸ್ಪರ್ಧೆಯ ಕಿರಿಯರ ವಿಭಾಗದದಲ್ಲಿ ಬಹುಮಾನ ವಿಜೇತರ ವಿವರ:
ತಮಿಳು ಕಂಠಪಾಠದಲ್ಲಿ ಪಾತಿಮತ್ ಸಫಾ,ಭಕ್ತಿಗೀತೆಯಲ್ಲಿ ಪ್ರೇಕ್ಷಿತಾ ,ಅಭಿನಯ ಗೀತೆಯಲ್ಲಿ ಯಕ್ಷಿತಾ,ರಸಪ್ರಶ್ನೆ ಗುಂಪು ಸ್ಪರ್ಧೆಯಲ್ಲಿ ಆಯಿಷತ್ ನಾಝಿಯಾ,ಆಯಿಷತುಲ್ ಜಂಶೀರಾ,ಫಾತಿಮತ್ ಸಫಾ,ಆಯಿಷತುಲ್ ಹುದಾ,ಫಾತಿಮತ್ ಸೈಮಾ,ಮಹಮ್ಮದ್ ಅಮೀರ್,ದೇಶಭಕ್ತಿಗೀತೆಯಲ್ಲಿ ಪ್ರೇಕ್ಷಿತಾ,ಅಸ್‍ಲಹತ್,ಫಾತಿಮತ್ ಆತಿಫಾ,ಫಾತಿಮತ್ ಸಫಾ,ಆಯಿಷತುಲ್ ಹುದಾ,ಫಾತಿಮತ್ ಸೈಮ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಲಘು ಸಂಗೀತದಲ್ಲಿ ಪ್ರೇಕ್ಷಿತಾ ,ತೆಲುಗು ಕಂಠಪಾಠ ಅಸ್‍ಲಹತ್,ಮರಾಠಿ ಕಂಠಪಾಠ ಮಹಮ್ಮದ್ ಆಮೀರ್,ಕೋಲಾ ಟ ಗುಂಪು ಸರ್ಧೆಯಲ್ಲಿ ಮಹಮ್ಮದ್ ಆಮೀರ್,ಮಹಮ್ಮದ್ ಝಿಯಾದ್,ಫಾತಿಮತ್ ಸೈಮಾ,ಆಯಿಷತುಲ್ ನಾಝಿಯಾ, ಅಸ್‍ಲಹತ್,ಆಯಿಷತ್ ಹುದಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡ ಕಂಠಪಾಠದಲ್ಲಿ ಆಯಿಷತುಲ್ ನಾಝಿಯಾ ,ಕೊಂಕಣಿ ಕಂಠಪಾಠ ಅಬೀಲ್, ಕ್ಲೇ ಮಾಡಲಿಂಗ್ ನಿತಿನ್,ಆಶುಭಾಷಣ ಮಹಮ್ಮದ್ ಝಿಯಾದ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಹಿರಿಯರ ವಿಭಾಗದಲ್ಲಿ ಅಭಿನಯ ಗೀತೆಯಲ್ಲಿ ಪ್ರಜ್ಜನ್ ,ದೇಶಭಕ್ತಿ ಗೀತೆ ಗುಂಪು ಸ್ಪರ್ಧೆಯಲ್ಲಿ ಫಾತಿಮತ್ ಅಷ್ಪಾನ,ಫಾತಿಮತ್ ಅಲಿಯಾ,ಮಹಮ್ಮದ್ ಸಹದ್,ರೋಹಿತ್,ಪ್ರಜ್ಜನ್ ,ಅಹ್ಮದ್ ಫಾಯಿಝ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಶಾಲಾ ಮುಖ್ಯಗುರು ಶಾಂತಾ ಕುಮಾರಿ ಎನ್ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಶ್ವೇತಾ,ರಂಝೀನಾ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದಾರೆ.ವಿಜೇತ ವಿದ್ಯಾರ್ಥಿಗಳನ್ನು ಶಾಲಾಭಿವೃದ್ದಿ ಸಮಿತಿ,ಹಿರಿಯ ವಿದ್ಯಾರ್ಥಿ ಸಂಘ,ಅಭ್ಯುದಯ ಯುವಕ ಮಂಡಲ ಅಭಿನಂದಿಸಿದೆ.