ಪ್ರಪಂಚದಲ್ಲೆಲ್ಲಾ ಚಂಡಮಾರುತದ ಭೀತಿ…! ವಾತಾವರಣದ ಉಷ್ಣತೆ ಏರಿಕೆ ಪ್ರಭಾವವೇ …? : ಭಾರತ ಈ ಬಾರಿ ಕಾಣುತ್ತಿದೆ 7 ನೇ ಚಂಡಮಾರುತ..!

November 8, 2019
7:51 AM

ಭಾರತ ಈಗ 7 ನೇ ಚಂಡಮಾರುತ ಬುಲ್ ಬುಲ್ ಈಗ ಕಾಣುತ್ತಿದೆ. ಇಡೀ ಪ್ರಪಂಚದಲ್ಲಿ  ಕೂಡಾ ಚಂಡಮಾರುತ ಕಾಣುತ್ತಲೇ ಇದೆ.  ಕೆನಡಾ ಕರಾವಳಿ ಭೀಕರ ಚಂಡಮಾರುತವನ್ನು ಈಗ ಕಾಣುತ್ತಿದೆ. ಈಚೆಗೆ 2 ವರ್ಷ ವರ್ಷಗಳಿಂದ ಹೀಗೇಕೆ ಎಂಬ ಪ್ರಶ್ನೆ ಕಾಡಲು ಆರಂಭಿಸಿದೆ. ವಾತಾವರಣದ ಉಷ್ಣತೆ ಏರಿಕೆಯೇ ಇದಕ್ಕೆ ಕಾರಣವೇ ಎಂಬ ಸಂದೇಹದಿಂದ ಈಗ ಹವಾಮಾನ ಅಧ್ಯಯನಕಾರರು ಪರಿಶೀಲನೆ ಮಾಡುತ್ತಿದ್ದಾರೆ.

Advertisement
Advertisement

Advertisement

ಸಾಧಾರಣ 3, 4 ದಿನಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಈಗ ಮಹಾ ಚಂಡಮಾರುತವಾಗಿ ಪರಿವರ್ತಿತವಾಗಿದೆ ಮುಂದೆ ಇನ್ನೆರಡು ಮೂರು ದಿನಗಳಲ್ಲಿ ಒಡಿಸ್ಸಾ ಕರಾವಳಿ ಭಾಗಗಳಿಗೆ ಮುನ್ನುಗ್ಗುವ ಮುನ್ಸೂಚೆನೆ ಇದೆ.

ಲೆಕ್ಕಾಚಾರದ ಪ್ರಕಾರ 2018 ರಲ್ಲಿ ಒಟ್ಟಾಗಿ 7 ಚಂಡಮಾರುತಗಳನ್ನು ಭಾರತ ಕಂಡಿದೆ. ಆಗಲೇ ವರದಿಯ ಪ್ರಕಾರ ಸುಮಾರು 35 ವರ್ಷದ ದಾಖಲೆಯನ್ನು ಹಿಂದಿಕ್ಕಿತ್ತು. ಆದರೆ ಈಗ 2019 ರಲ್ಲಿ ಭಾರತ 7 ನೇ ಚಂಡಮಾರುತವನ್ನು ಬುಲ್ ಬುಲ್ ಹೆಸರಿನಲ್ಲಿ ಕಾಣುತ್ತಿದೆ. ಈ ವರ್ಷ ಕೊನೆಗೊಳ್ಳಲು ಇನ್ನೂ ಸುಮಾರು ಒಂದುವರೆ ತಿಂಗಳ ಅವಧಿ ಇದೆ. ಹಾಗಾದರೆ 2019 ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಬಹುದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

Advertisement

ಇನ್ನು ಪ್ರಪಂಚದ ಉಳಿದ ಕರಾವಳಿ ಭಾಗಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಫಿಲಿಪ್ಪೀನ್ಸ್, ಜಪಾನ್, ರಷ್ಯಾ ಹಾಗೂ ಉತ್ತರ ಅಮೇರಿಕಾ ಮತ್ತು ಕೆನಡಾ ಕರಾವಳಿ ಭಾಗಗಳಲ್ಲೂ ಚಂಡಮಾರುತದ ಆತಂಕದಲ್ಲೇ ಇವೆ. ಸಮುದ್ರದ ವಾತಾವರಣ 29-30 ಡಿಗ್ರಿ ಸೆಲ್ಸಿಯಸ್ ಗಿಂತ ಜಾಸ್ತಿ ಆದರೆ ವಾಯುಭಾರ ಕುಸಿತ ಅಥವಾ ಚಂಡಮಾರುತ ಉಂಟಾಗುವ ಸಂಭವ ಅಧಿಕವಾಗಿರುತ್ತದೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ಅಂದರೆ ಇದಕ್ಕೆಲ್ಲಾ ಜಾಗತಿಕ ತಾಪಮಾನ ಏರಿಕೆಯೇ ಕಾರಣವೇ ಎಂಬುದರ ಬಗ್ಗೆ ಈಗ ಅಧ್ಯಯನಗಳು ನಡೆಯುತ್ತಿವೆ. ಹೀಗಾಗಿ ತಾಪಮಾನ ಏರಿಕೆ ತಡೆಗೆ ಏನು ಕ್ರಮ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯುತ್ತಿದೆ.

Advertisement

ಬರಹ :

ಸಾಯಿಶೇಖರ್ , ಕರಿಕಳ
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror