ಫೆ 25 ರವರೆಗೆ ಶ್ರಮ ಸಮ್ಮಾನ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶ – ಅಪರ ಜಿಲ್ಲಾಧಿಕಾರಿ

February 20, 2020
6:52 PM

ಮಂಗಳೂರು:- ಶ್ರಮ ಸಮ್ಮಾನ ಪ್ರಶಸ್ತಿ ಅರ್ಜಿ ಆಹ್ವಾನವನ್ನು ಫೆಬ್ರವರಿ 25 ರವರೆಗೆ ಮುಂದೂಡುವ ಮೂಲಕ ಗರಿಷ್ಠ ಅರ್ಜಿಗಳನ್ನು ಸ್ವೀಕರಿಸಿ ಎಂದು ಅಪರ ಜಿಲ್ಲಾಧಿಕಾರಿ ಎಮ್.ಜೆ.ರೂಪ ಹೇಳಿದರು.

Advertisement
Advertisement

ಗುರುವಾರ ಜಿಲ್ಲಾಧಿಕಾರಿ ಕೋರ್ಟ್ ಹಾಲ್‍ನಲ್ಲಿ ನಡೆದ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1 ರಂದು ಕಾರ್ಮಿಕ ಸಮ್ಮಾನ ದಿನ ಆಚರಣೆ ಕುರಿತು ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹಮಾಲಿ ಕಾರ್ಮಿಕರು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಟೈಲರ್‍ಗಳು, ಮೆಕ್ಯಾನಿಕ್ ಕಾರ್ಮಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು, ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಈ ಎಲ್ಲಾ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ನೀಡಲಾಗುವ ಶ್ರಮ ಸಮ್ಮಾನ ಪ್ರಶಸ್ತಿ ಅರ್ಜಿಯನ್ನು ಸಲ್ಲಿಸಲು ಫೆಬ್ರವರಿ 25 ಸಂಜೆಯವರೆಗೆ ಅವಕಾಶವಿದ್ದು, ಗರಿಷ್ಠ ಅರ್ಜಿಯನ್ನು ಸ್ವೀಕರಿಸಿ ಎಂದು ಸೂಚಿಸಿದರು.

ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1 ರಂದು ಶ್ರಮ ಸಮ್ಮಾನ ದಿನ ಆಚರಣೆ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ 13 ವರ್ಗದ ಕಾರ್ಮಿಕರನ್ನು ಗುರುತಿಸಿ ಶ್ರಮ ಸಮ್ಮಾನ ಪ್ರಶಸ್ತಿ ನೀಡಲಾಗುತ್ತದೆ. ಇದರಲ್ಲಿ ಪ್ರಥಮ ಪ್ರಶಸ್ತಿ ರೂ 15,000 ಮೌಲ್ಯದ ಸ್ವರ್ಣ ಪದಕ, ದ್ವಿತೀಯ ಪ್ರಶಸ್ತಿ ರೂ. 10,000 ಮೌಲ್ಯದ ರಜತ ಪದಕ, ತೃತೀಯ ಪ್ರಶಸ್ತಿ ರೂ 8,000 ಮೌಲ್ಯದ ರಜತ ಪದಕವನ್ನು ನೀಡಲಾಗುತ್ತದೆ ಎಂದು ಉಪವಿಭಾಗ-1ರ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಸಭೆಗೆ ತಿಳಿಸಿದರು.

ಸಭೆಯಲ್ಲಿ ಸರ್ಕಾರದ ಆಶಾದೀಪಾ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೆಲಸಗಾರರನ್ನು ನೋಂದಾಯಿಸಿಕೊಂಡ ಮಾಲೀಕರಿಗೆ, ಮಾಲೀಕರ ಪಾಲಿನ ಭವಿಷ್ಯನಿಧಿ ವಂತಿಗೆ ಶೇ.12 ಹಾಗೂ ಇ.ಎಸ್.ಐ ವಂತಿಗೆ ಶೇ.3.25 ಮರುಪಾವತಿಯ ಚೆಕ್‍ನ್ನು ಯುನಿಟಿ ಆಸ್ಪತ್ರೆ, ಫಸ್ಟ್ ನ್ಯೂರೋ, ಫಾದರ್ ಮುಲ್ಲರ್ ಆಸ್ಪತ್ರೆ, ಅನುಪಮಾ ಫೀಡ್ಸ್ ಸಂಸ್ಥೆಯ ಮಾಲೀಕರಿಗೆ ಅಪರ ಜಿಲ್ಲಾಧಿಕಾರಿ ವಿತರಿಸಿದರು.
ಸಭೆಯಲ್ಲಿ ಉಪ ವಿಭಾಗ-2ರ ಕಾರ್ಮಿಕ ಅಧಿಕಾರಿ ಅಮರೇಂದ್ರ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಸಂಘಟಿತ ವಲಯದ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25-07-2025 | ಮಳೆ ಕಡಿಮೆ ಲಕ್ಷಣ – ಈಗ ಗಾಳಿಯೂ ಜೋರು |
July 25, 2025
1:39 PM
by: ಸಾಯಿಶೇಖರ್ ಕರಿಕಳ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವೈಷ್ಣವಿ ಕೆ ಆರ್
July 25, 2025
8:13 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಜಾಹ್ನವಿ, ಬೆಂಗಳೂರು
July 25, 2025
8:07 AM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳನ್ನು ಬಿಡಾಡಿಯಾಗಿ ರಸ್ತೆಗಳಲ್ಲಿ ಬಿಡಬಾರದು
July 25, 2025
7:41 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group