ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಮುಂಗಾರು ಕ್ರೀಡಾಕೂಟ

August 19, 2019
10:00 AM

ಸುಳ್ಯ: ಬದಲಾದ ಕಾಲಮಾನಕ್ಕೆ ತಕ್ಕಂತೆ ಛಾಯಾಗ್ರಾಹಕರು ತಮ್ಮ ಉದ್ದಿಮೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ನಿತ್ಯವೂ ಚಟುವಟಿಕೆಯಿಂದಿರುವ ವೃತ್ತಿ ಭಾಂಧವರು ಕ್ರೀಡೆಯಂತಹ ಕಾರ್ಯಕ್ರಮಗಳನ್ನು ನಿರಂತರ ನಡೆಸುತ್ತಿರಬೇಕು. ಇದು ಆರೋಗ್ಯ ಕಾಪಾಡಲು ಸೂಕ್ತ ಸಾಧನ ಎಂದು ಎಒಎಲ್‍ಇ ಅಧ್ಯಕ್ಷ ಡಾ.ಚಿದಾನಂದ ಹೇಳಿದರು.

Advertisement
Advertisement
Advertisement

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಸುಳ್ಯ ವಲಯ ಆಶ್ರಯದಲ್ಲಿ ಕೊಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಜಿಲ್ಲಾಮಟ್ಟದ ಮುಂಗಾರು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮುಖ್ಯ ಅತಿಥಿಯಾಗಿದ್ದ ಶಾಸಕ ಎಸ್ ಅಂಗಾರ ಅವರು ವೃತ್ತಿ ಸೇವೆಗಳ ಜತೆ ಕ್ರೀಡಾ ಹಿತಾಶಕ್ತಿ ಅಗತ್ಯ. ಇದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೊಟೋಗ್ರಾಫರ್ ಎಸೋಶೀಯೇಷನ್ ಕ್ರೀಡೆಗೆ ಒತ್ತು ನೀಡಿರುವುದ ಸ್ವಾಗತಾರ್ಹ ಎಂದರು.

ದ.ಕ-ಉಡುಪಿ ಎಸ್.ಕೆ.ಪಿ.ಎ ಅಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯಅತಿಥಿಗಳಾಗಿ ಎಸ್.ಕೆ.ಪಿ.ಎ ಸಂಚಾಲಕ ವಿಠಲ ಚೌಟ, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎ.ಬಿ.ಸದಾಶಿವ, ಪ ಜಿಲ್ಲಾ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಸುಳ್ಯ, ಸುಳ್ಯ ವಲಯಾಧ್ಯಕ್ಷ ಕರುಣಾಕರ ಎಣ್ಣೆಮಜಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೊಕೇಶ್ ಸುಬ್ರಹ್ಮಣ್ಯ, ಸುಳ್ಯ ವಲಯ ಗೌರವಾಧ್ಯಕ್ಷ ಬಾಲಕೃಷ್ಣ ಗುತ್ತಿಗಾರು, ವಲಯ ಕಾರ್ಯದರ್ಶಿ ಪ್ರಕಾಶ್, ಪೂರ್ವಾಧ್ಯಕ್ಷರುಗಳಾದ ವಾಸುದೇವ, ಶಿವರಾಮ ಕಡಬ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಕೊರೆಯಾ, ಜಯಕರ ಸುವರ್ಣ ವೇದಿಕೆಯಲ್ಲಿದ್ದರು.

Advertisement

ಉದ್ಘಾಟನೆಗೆ ಮೊದಲು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಮುಂಭಾಗದಿಂದ ಗೌಡ ಸಮುದಾಯ ಭವನದ ತನಕ ವಾಹನ ಜಾಥ ನಡೆಯಿತು. ಸುಳ್ಯ ಸಬ್ ಇನ್ಸ್ ಪೆ ಕ್ಟರ್ ಹರೀಶ್‍ಕುಮಾರ್ ಜಾಥಕ್ಕೆ ಚಾಲನೆ ನೀಡಿದರು.

ಸನ್ಮಾನ: ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಪ್ರತೀಕ್ ದೇವ ಹಾಗೂ ರಾಷ್ಟ್ರ ಮಟ್ಟ ವೇಟ್ ಲಿಪ್ಟರ್ ಲಾವಣ್ಯ, 179ನೇ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ, ಸ್ಠುಡಿಯೋ ಮಾಲಕ ಗೋಪಾಲಕೃಷ್ಣ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

ಬಳಿಕ ಕ್ರಿಕೆಟ್, ವಾಲಿಬಾಲ್, ಲಗೋರಿ, ಹಗ್ಗಜಗ್ಗಾಟ ತಂಡ ಸ್ಪರ್ಧೆ , 50ವರ್ಷ ಮೇಲ್ಪಟ್ಟ ಸದಸ್ಯರಿಗೆ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ಶಾಟ್ ಪುಟ್ ಕ್ರೀಡಾ ಸ್ಪರ್ಧೇಗಳು ನಡೆಯಿತು.

ಸುಳ್ಯ ವಲಯಾಧ್ಯಕ್ಷ ಕರುಣಾಕರ ಎಣ್ಣೆಮಜಲು ಪ್ರಸ್ತಾವನೆಗೈದು ಸ್ವಾಗತಿಸಿದರು. ತನಂಜಯ್ ರಾವ್ ವಂದಿಸಿದರು. ಸುಧೀರ್ ಕುಮಾರ್ ಶೆಟ್ಟಿ ನಿರೂಪಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?
November 27, 2024
7:40 AM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
November 27, 2024
7:03 AM
by: The Rural Mirror ಸುದ್ದಿಜಾಲ
ಖಾದಿಯನ್ನು ಬೆಂಬಲಿಸಿ-ಉಳಿಸಿ | ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನಕ್ಕೆ ಚಾಲನೆ
November 27, 2024
6:51 AM
by: The Rural Mirror ಸುದ್ದಿಜಾಲ
ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು  ಅಧಿಕಾರಿಗಳಿಗೆ ಸೂಚಿಸಲಾಗಿದೆ | ಸಚಿವ ಕೆ.ಎಚ್. ಮುನಿಯಪ್ಪ
November 27, 2024
6:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror