ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಖರೀದಿ ನಡೆಸಲು ಕ್ಯಾಂಪ್ಕೋ ಮುಂದಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಕಾರಣದಿಂದ ಬದಿಯಡ್ಕ ಮತ್ತು ಕಾಞಂಗಾಡ್ ಕ್ಯಾಂಪ್ಕೊ ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದೆ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.
ಎ.15 ರಿಂದ ಸೀಮಿತವಾಗಿ ಬದಿಯಡ್ಕ ಮತ್ತು ಕಾಞಂಗಾಡ್ ಕ್ಯಾಂಪ್ಕೊ ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದೆ. ಇಲ್ಲಿ ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000/- ದ ಅಡಿಕೆ ಮಾರಾಟಕ್ಕೆ ಅವಕಾಶ , ಪ್ರತಿದಿನ 30 ಸದಸ್ಯರಿಗೆ ಮಾತ್ರ ಅವಕಾಶ.
ಆಯಾ ಶಾಖಾಧಿಕಾರಿಗಳ / ನಮೂದಿಸಲ್ಪಟ್ಟ ನೌಕರರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು, ಬೆಳಿಗ್ಗೆ ಗಂಟೆ 11.00 ರಿಂದ ,ಸಂಜೆ 5.00 ರ ವರೆಗೆ ಖರೀದಿ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ ಕ್ಯಾಂಪ್ಕೊ ಕಾರ್ಡು, ಜಾಗದ ಪೊಸೆಶನ್ ಸರ್ಟಿಫಿಕೇಟ್ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು ( ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಆರೋಗ್ಯ ಇಲಾಖೆ ತಿಳಿಸಿದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.
ಅಡಿಕೆ ಖರೀದಿ ನಡೆಸುವ ಶಾಖೆಗಳು:
ಬದಿಯಡ್ಕ :
ಸಂಪರ್ಕ : ಪ್ರದೀಪ್ ಕುಮಾರ್ PH : 8200693185 ಮತ್ತು 8105764906
ಕಾಞಂಗಾಡ್ :
ಸಂಪರ್ಕ : ಕುಂಞಂಬು. PH : 8921390124