ಸುಳ್ಯ: ಬಾಲಚಂದ್ರ ಕಳಗಿಯವರ ಹತ್ಯೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕರೊಂದಿಗೆ ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದರು.
ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಹಾಗೂ ಇನ್ನು ಮುಂದೆ ಈ ಪರಿಸರದಲ್ಲಿ ಇಂತಹ ಸಮಾಜಘಾತುಕ ಶಕ್ತಿಗಳು ತಲೆ ಎತ್ತದಂತೆ ಜಾಗೃತಿ ಮೂಡಿಸುವ ಸಲುವಾಗಿ ಸಂಪಾಜೆ ವಲಯ ಜನ ಜಾಗೃತಿ ಸಮಿತಿ ವತಿಯಿಂದ ಕೊಯನಾಡಿನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಬಾಲಚಂದ್ರ ಕಳಗಿಯವರ ಅಗಲಿಕೆಯಿಂದ ರಾಜ್ಯ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಬೇಸರದ ಜತೆಗೆ ಆಕ್ರೋಶವೂ ಇದೆ. ನಾವೆಲ್ಲಾ ನಿಮ್ಮ ಜತೆಗಿದ್ದೇವೆ. ಉನ್ನತ ಮಟ್ಟದ ತನಿಖೆಯ ನಿಮ್ಮ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತೇವೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುರಾನ ಹೇಳಿದರು.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಬಾಲಚಂದ್ರ ಕಳಗಿ ಅವರ ಹತ್ಯೆಯ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹರೀಶ್, ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೇಶ್, ಬಾಲಚಂದ್ರ ಕಳಗಿಯವರ ತಂದೆ ಕಳಗಿ ವೆಂಕಪ್ಪ ಗೌಡ, ಬಾಲಚಂದ್ರ ಕಳಗಿಯವರ ಪತ್ನಿ ರಮಾದೇವಿ ಉಪಸ್ಥಿತರಿದ್ದರು.
ಕೊಡಗು ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಕುಮಾರ್ ಚೆದ್ಗಾರ್ ಸ್ವಾಗತಿಸಿದರು. ಸಭೆಗೆ ಮುನ್ನ ಸಂಪಾಜೆಯಿಂದ ಕೊಯನಾಡು ತನಕ ಬೃಹತ್ ಜನಜಾಗೃತಿ ಜಾಥಾ ನಡೆಯಿತು.
ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷರಾದ ಭಾರತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮಾತನಾಡಿ ” ನನ್ನ ಊರು ನನ್ನ ಸಮಾಜ ಚೆನ್ನಾಗಿರಬೇಕು ಎಂಬ ಆಕಾಂಕ್ಷೆ ಇರುವ ವ್ಯಕ್ತಿಯನ್ನು ಕಳೆದು ಕೊಂಡಿರುವುದು ಬೇಸರದ ಸಂಗತಿ, ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸಮಾಜಕ್ಕೆ ಚೆನ್ನಾಗಿ ಕೆಲಸ ಮಾಡಿರಬಹುದು ಅನ್ನೋದು ಈ ಜನಸಂಖ್ಯೆಯನ್ನು ನೋಡಿ ತಿಳಿದ್ದಿದ್ದೇನೆ. ಸಾಮಾಜಿಕ ಕಳಕಳಿ ಇರುವ ಕಳಗಿಯವರನ್ನು ಹತ್ಯೆ ಮಾಡಿರುವುದು ದುಷ್ಟತನ, ಈ ಕೃತ್ಯ ನಡೆಸಿದ ಆರೋಪಿಗಳನ್ನು ಸಮಾಜದಿಂದ ಸಂಪೂರ್ಣ ಬಹಿಷ್ಕಾರ ಹಾಕುವ ಕೆಲಸ ಈ ಗ್ರಾಮದವರು ಮಾಡಬೇಕು, ಎಲ್ಲಿಯವರೆಗೆ ನಿಮಗೆ ನ್ಯಾಯ ಸಿಗುತ್ತೋ ಅಲ್ಲಿಯವರೆಗೆ ನಿಮ್ಮೊಂದಿಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಇದೆ” ಎಂದು ಭರವಸೆಯನ್ನು ನೀಡಿದರು.
ಸಮಾರಂಭದಲ್ಲಿ ಸುಳ್ಯ ತಾಲೂಕಿನ ಬಿಜೆಪಿ ಪ್ರಮುಖರಾದ ವೆಂಕಟ್ ವಲಳಂಬೆ, ವೆಂಕಟ್ ದಂಬೆಕೋಡಿ, ಹರೀಶ್ ಕಂಜಿಪಿಲಿ, ಗಣಪತಿ ಭಟ್, ಎನ್.ಎ ರಾಮಚಂದ್ರ, ಲತೀಶ್ ಗುಂಡ್ಯ, ಚಂದ್ರಶೇಖರ್, ಎ.ವಿ. ತೀರ್ಥರಾಮ, ಕೆ.ಪಿ.ಜಗದೀಶ್, ಪುಷ್ಪಾಮೇದಪ್ಪ, ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರಾದ ಶಾಂತೇಯಂಡ ರವಿ ಕುಶಾಲಪ್ಪ, ತಳೂರು ಕಿಶೋರ್ ಕುಮಾರ್, ಅಜಿತ್ ಕುಕ್ಕೆರ, ಧನಂಜಯ ಅಗೋಲಿಕಜೆ, ತೆಕ್ಕಡೆ ಶೋಭಾ ಮೋಹನ್, ಕವಿತಾ ಪ್ರಭಾಕರ್, ಅರುಣ್ ಬಿಮಯ್ಯ, ಅಪ್ಪಣ್ಣ, ನಾಗೇಶ್ ಕುಂದಲ್ಪಾಡಿ, ಸುಬ್ರಹ್ಮಣ್ಯ ಉಪಾಧ್ಯಾಯ, ರಾಜಾರಾಮ್ ಕಳಗಿ, ಕುಮಾರ್ ಕೊಡಗು, ಯೋಗೇಶ್ವರಿ ಗೋಪಾಲ್ ಮೊದಲಾದವರು ಇದ್ದರು.