ಬಿಎಸ್ಎನ್ಎಲ್ ಉಪವಿಭಾಗೀಯ ಅಧಿಕಾರಿ ಆರ್ ಕೆ ಭಟ್ ಸೇವಾ ನಿವೃತ್ತಿ

October 31, 2019
3:04 PM

ಸುಳ್ಯ: ಸುಳ್ಯ ತಾಲೂಕಿನಲ್ಲಿ ಬಿ ಎಸ್ ಎನ್ ಎಲ್ ನಲ್ಲಿ  17 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಉಪವಿಭಾಗೀಯ ಅಧಿಕಾರಿಯಾಗಿದ್ದ ರಾಮಕೃಷ್ಣ ಭಟ್ ಪಿ. ಸೇವಾ ನಿವೃತ್ತಿಯಾಗುತ್ತಿದ್ದಾರೆ.

ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪೈರುಪುಣಿಯ ನಾರಾಯಣ ಭಟ್ಟ ಮತ್ತು ತಾಯಿ ಸರಸ್ವತಿಯವರ ಹಿರಿಯ ಪುತ್ರನಾದ ರಾಮಕೃಷ್ಣ ಭಟ್ ಅವರು  ಪುತ್ತೂರು ಫಿಲೋಮಿನ ಕಾಲೇಜಿನಲ್ಲಿ ಬಿಯಸ್ಸಿ ಪದವೀಧರರಾದ ಬಳಿಕ 1983 ರಲ್ಲಿ ಅಂದಿನ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕಾರವಾರ ವಿಭಾಗಲ್ಲಿ ನಿಯುಕ್ತರಾದರು. ನಂತರ  ಉಡುಪಿಯಲ್ಲಿ 6 ವರ್ಷ,  ಕೊಡಗಿನಲ್ಲಿ 5 ವರ್ಷ,  ಉಪ್ಪಿನಂಗಡಿಯಲ್ಲಿ 8 ವರ್ಷ ಮತ್ತು ಸುಳ್ಯ ತಾಲೂಕಿನಲ್ಲಿ 17 ವರ್ಷ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಉಪವಿಭಾಗೀಯ ಅಧಿಕಾರಿಯಾಗಿ ನಿವೃತ್ತಿಯಾಗುತ್ತಿದ್ದಾರೆ. ಒಟ್ಟು ಸುಮಾರು 36 ವರ್ಷಗಳ ಕಾಲ ಟೆಲಿಕಾಂ ಸೇವೆಯಲ್ಲಿದ್ದರು.  ಈ  ನಡುವೆ ಕಳೆದ 10 ವರ್ಷಗಳಿಂದ ತಮ್ಮ ಬಿಡುವಿನ ಸಮಯದಲ್ಲಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾಗಿಗೂ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಿಯಮಗಳು ಇದ್ದರೂ ಅಭದ್ರತೆ ಕಟ್ಟಿಟ್ಟದ್ದು….!
March 11, 2025
7:51 AM
by: ರಮೇಶ್‌ ದೇಲಂಪಾಡಿ
ಕುಂಭಮೇಳದ ಪಯಣ ದೇಶದ ಇಣುಕುನೋಟ | ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ |
March 11, 2025
7:00 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
3 ರಾಶಿಗಳಿಗೆ ಅದೃಷ್ಟ, ರಾಜಯೋಗ ಮತ್ತು ಸಂಪತ್ತಿನ ದೃಷ್ಟಿಯಿಂದ ಅತ್ಯುತ್ತಮ ಸಮಯ
March 11, 2025
6:33 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ರೈತರು ಬೆಳೆದ ಸಾಗುವಾನಿ, ಹುಣಸೆ ಮರಗಳನ್ನು ಕಟಾವು ಮಾಡಲು ಅನುಮತಿ | 2 ವರ್ಷದಲ್ಲಿ 189241 ಮರ ಕಡಿಯಲು ಅನುಮತಿ |
March 10, 2025
11:01 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...