ಬಿಜೆಪಿಯದ್ದು ಅಸಹಕಾರದ ನಾಟಕ: ಎಂ. ವೆಂಕಪ್ಪ ಗೌಡ ಲೇವಡಿ

September 3, 2019
6:27 PM

ಸುಳ್ಯ: ಕಾರ್ಯಕರ್ತರ ಮುಂದೆ ಅಸಹಕಾರ ಚಳವಳಿಯ ನಾಟಕ ಮಾಡುವ ಬಿಜೆಪಿ ನಾಯಕರು ಕದ್ದು ಮುಚ್ಚಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಇದೆಲ್ಲವನ್ನು ನೋಡುವಾಗ ಬಿಜೆಪಿಗರು ಒಳಗೊಂದು – ಹೊರಗೊಂದು ಮಾತನಾಡುವವರು. ಇವರಿಗೆ ಕಾರ್ಯಕರ್ತರ, ಜನರ ಬಗ್ಗೆಯಾಗಲೀ ಅಥವಾ ಶಾಸಕ ಅಂಗಾರ ಅವರ ಬಗ್ಗೆ ಆಗಲೀ ಕಾಳಜಿ ಇಲ್ಲ. ಬದಲಾಗಿ ಇವರಿಗೆ ಇರುವುದು ಸ್ವಾರ್ಥ ಲಾಭದ ರಾಜಕೀಯ ಎಂದು ಕೆ.ಪಿ‌.ಸಿ.ಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಆರೋಪಿಸಿದ್ದಾರೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಸಹಾಕಾರ ಚಳುವಳಿ ಕಾಂಗ್ರೆಸ್ ನವರ ಸೃಷ್ಠಿ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಖಂಡಿಸಿದರು. ಬಿಜೆಪಿ ಕಚೇರಿಯಲ್ಲಿ 300ರಷ್ಟು ಮಂದಿ ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ನಿರ್ಧಾರ ಕೈಗೊಂಡು ಅಸಹಕಾರ ಚಳವಳಿ ಎಂದು ಘೋಷಿಸಿದ್ದು ಬಿಜೆಪಿಗರೋ ಅಥವಾ ಕಾಂಗ್ರೆಸ್-ಜೆಡಿಎಸ್ ನವರೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಮೊದಲು ತಿಳಿದುಕೊಳ್ಳಲಿ. ಆ ಬಳಿಕ ಕಾಂಗ್ರೆಸ್ ಮೇಲೆ ಆರೋಪ ಮಾಡಲಿ ಎಂದು ಹೇಳಿದರು. ಅಂಗಾರರು ಮಂತ್ರಿ ಪದವಿಯಿಂದ ವಂಚಿತರಾದಾಗ ಬಿಜೆಪಿಯವರು ಅಸಹಕಾರದ ನಿರ್ಣಯ ಕೈಗೊಂಡ ಸಂದರ್ಭ ನೀವು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಚಳವಳಿ ಮಾಡಿ ಎಂದು ನಾವು ಸಲಹೆ ನೀಡಿದ್ದೆವು. ಆದರೆ ಬಿಜೆಪಿಯವರ ಚಳವಳಿ ಕೇವಲ ನಾಟಕ ಎಂದು ಈಗ ಸಾಬೀತಾಯಿತು ಎಂದು ಅವರು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್, ನ.ಪಂ.ಸದಸ್ಯ ಶರೀಫ್ ಕಂಠಿ, ಲಕ್ಷ್ಮಣ ಶೆಣೈ, ಕೆ.ಕೆ.ಹರಿಪ್ರಸಾದ್ ಇದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ…!
June 21, 2026
12:20 PM
by: ದ ರೂರಲ್ ಮಿರರ್.ಕಾಂ
Gen Z ಮತದಾರರತ್ತ ಬಿಜೆಪಿ ಕಣ್ಣು- 18-25 ವಯೋಮಾನದ ಯುವಕರಿಗಾಗಿ ‘ತರುಣ ಮೋರ್ಚಾ’ ರಚನೆಗೆ ಚಿಂತನೆ
June 17, 2026
8:21 PM
by: ದ ರೂರಲ್ ಮಿರರ್.ಕಾಂ
‘We the Leaders’ | ಬಿಜೆಪಿಗೆ ವಿದಾಯ ಹೇಳಿದ ಮಾಜಿ ಐಪಿಎಸ್ ಅಧಿಕಾರಿ, ‘ವಿ ದಿ ಲೀಡರ್ಸ್’ ಮೂಲಕ ಹೊಸ ಪಯಣ
June 5, 2026
3:46 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror