ಬೆಟ್ಟ ಕುಸಿಯುವ ಆತಂಕ : ವಿರಾಜಪೇಟೆ ರಸ್ತೆ ವಿಸ್ತರಣೆಗೆ ಆಕ್ಷೇಪ : ಸಾರ್ವಜನಿಕರಿಂದ ಪ್ರತಿಭಟನೆ

October 3, 2019
7:53 PM

ಮಡಿಕೇರಿ: ರಸ್ತೆ ವಿಸ್ತರಣೆಯ ನೆಪದಲ್ಲಿ ವಿರಾಜಪೇಟೆ ಪಟ್ಟಣ ಪಂಚಾಯತ್ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದೆ ಎಂದು ಆರೋಪಿಸಿ ವಿವಿಧ ಬಡಾವಣೆಗಳ ಕಟ್ಟಡ ಮಾಲಕರು, ನಿವಾಸಿಗಳು, ವಕೀಲರು ಹಾಗೂ ವರ್ತಕರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸುಂಕದಕಟ್ಟೆಯಿಂದ ಮೀನುಪೇಟೆಯವರೆಗೆ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಿರುವ ಪಟ್ಟಣ ಪಂಚಾಯತ್ ಅವೈಜ್ಞಾನಿಕ ಯೋಜನೆಯ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಆರೋಪಿಸಿದರು.  ಜುಲೈ ತಿಂಗಳಿನಲ್ಲಿ ರಸ್ತೆ ವಿಸ್ತರಣೆ ಸಂಬಂಧ ಸರ್ವೆ ಕಾರ್ಯ ನಡೆಸಿ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತು ಅಧಿಕಾರಿಗಳು ಮುನ್ಸೂಚನೆ ನೀಡಿದ್ದರು. ಆದರೆ ಕಟ್ಟಡ ಮಾಲಕರುಗಳಿಗೆ ಸರಕಾರದ ನಿಯಮದಂತೆ ಪರಿಹಾರ ಒದಗಿಸುವ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲವೆಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ವೀರರಾಜೇಂದ್ರ ಪೇಟೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಹದಗೆಡಿಸಲಾಗುತ್ತಿದೆ. ಮಲೆತಿರಿಕೆ ಬೆಟ್ಟವನ್ನು ಕೊರೆದು ರಸ್ತೆ ವಿಸ್ತರಣೆ ಮಾಡಿದರೆ ಮಣ್ಣು ಸಡಿಲಗೊಂಡು ಪೂರ್ಣ ಪ್ರಮಾಣದಲ್ಲಿ ಬೆಟ್ಟ ಕುಸಿದು ಪಟ್ಟಣವನ್ನು ಆವರಿಸುವ ಆತಂಕವಿದೆ ಎಂದು ಹಿರಿಯರಾದ ಡಾ.ಐ.ಅರ್.ದುರ್ಗಪ್ರಸಾದ್ ಗಮನ ಸೆಳೆದರು.

ಕಟ್ಟಡ ಮಾಲಕರಿಗೆ ಪರಿಹಾರ ನೀಡಿದ ನಂತರ ರಸ್ತೆ ವಿಸ್ತರಣೆ ಮಾಡಬೇಕೆನ್ನುವ ನಿಯಮವಿದೆ. ಆದರೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಅದೇಶಗಳನ್ನು ಗಾಳಿಗೆ ತೂರಿ ರಸ್ತೆ ವಿಸ್ತರಣೆಗೆ ಮುಂದಾಗಿದ್ದಾರೆ ಎಂದು ವಕೀಲ ರವೀಂದ್ರಕಾಮತ್ ಆರೋಪಿಸಿದರು.  ವಕೀಲ ಟಿ.ಪಿ.ಕೃಷ್ಣ ಅವರು ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸಾರ್ವಜನಿಕರ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಪ್ರತಿಭಟನಾ ಮೆರವಣಿಗೆ ತೆಲುಗರಬೀದಿ, ಮುಖ್ಯರಸ್ತೆಯ ಮೂಲಕ ಸಾಗಿ ಮೀನುಪೇಟೆಯಿಂದ ತಾಲೂಕು ಕಚೇರಿಯವರೆಗೆ ನಡೆಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ
August 15, 2026
2:07 PM
by: ಸಾಯಿಶೇಖರ್ ಕರಿಕಳ
ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror