ಬೆಳೆಗಾರರು ಮತ್ತು ರೈತರಿಗೆ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ : ಸಚಿವ ವಿ.ಸೋಮಣ್ಣ ಸೂಚನೆ

September 24, 2019
9:42 AM

ಮಡಿಕೇರಿ: ಹತ್ತು ಹೆಚ್.ಪಿ. ಒಳಗಿನ ಪಂಪ್‍ಸೆಟ್‍ಗಳ ಮೂಲಕ ವಿದ್ಯುತ್ ಬಳಸುವ ಕೊಡಗಿನ ಬೆಳೆಗಾರರು ಹಾಗೂ ರೈತರಿಗೆ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಸಭೆಗೂ ಮೊದಲು ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಂದರ್ಭ ರೈತ ಸಮುದಾಯ ಬಳಗ ಮತ್ತು ಕಾಫಿ ಕೃಷಿ ಉತ್ಪಾದಕರ ಕೂಟವು ಸಚಿವರಿಗೆ ಮನವಿ ಸಲ್ಲಿಸಿ, ಇತರ ಜಿಲ್ಲೆಗಳಂತೆ ಕೊಡಗು ಜಿಲ್ಲೆಯಲ್ಲಿಯೂ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

Advertisement
Advertisement

ಮನವಿಗೆ ಪೂರಕವಾಗಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕೊಡಗಿನ ಜನ ಶೇ.100 ರಷ್ಟು ವಿದ್ಯುತ್ ಶುಲ್ಕ ಪಾವತಿಸುತ್ತಿದ್ದು, ಪ್ರವಾಹದಿಂದಾಗಿ ಜಿಲ್ಲೆ ಸಂಕಷ್ಟದಲ್ಲಿರುವುದರಿಂದ ಶುಲ್ಕ ವಿನಾಯಿತಿ ನೀಡುವಂತೆ ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ, ಯಾವುದೇ ಕಾರಣಕ್ಕೂ 10 ಹೆಚ್.ಪಿ. ಒ¼ಗಿನ ಮೋಟಾರ್‍ಗಳಿಗೆ ವಿದ್ಯುತ್ ಶುಲ್ಕ ಸಂಗ್ರಹಿಸಬಾರದು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದೆಂದು ಸೂಚನೆ ನೀಡಿದರು.

ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಬೆಳೆಗಾರರು ಹಾಗೂ ರೈತರು ನೋವನ್ನು ಅನುಭವಿಸುತ್ತಿದ್ದು, ವಿದ್ಯುತ್ ಶುಲ್ಕ ಪಾವತಿಸುವಂತೆ ಒತ್ತಡ ಹೇರುವುದು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಸರಿಯಲ್ಲವೆಂದು ಸಚಿವ ಸೋಮಣ್ಣ ಅಧಿಕಾರಿಗಳಿಗೆ ತಿಳಿಸಿದರು. ಮಾಜಿ ಯೋಧರೊಬ್ಬರ ಜಾಗಕ್ಕೆ ಆರ್ ಟಿ ಸಿ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮಂಗಳವಾರ ಸಂಜೆಯ ಒಳಗಾಗಿ ಖಾತೆ ಮಾಡಿಕೊಡುವಂತೆ ಸೂಚನೆ ನೀಡಿದರು. ಎಡಿಎಲ್‍ಆರ್ ಬಳಿ ವಿಲೇವಾರಿಯಾಗದೆ ಉಳಿದಿರುವ ಎಲ್ಲಾ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬೇಕು, ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕೆಂದರು.
ಎಂ.ಬಿ.ದೇವಯ್ಯ ಅವರ ನೇತೃತ್ವದ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ, ಸಂತ್ರಸ್ತರಿಗೆ ಇಲ್ಲಿಯವರೆಗೆ ನೂತನ ಮನೆಗಳು ಹಸ್ತಾಂತರವಾಗದೆ ಇರುವ ಬಗ್ಗೆ ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ಶೀಘ್ರ ಮನೆಗಳನ್ನು ಹಸ್ತಾಂತರಿಸುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ಜಾನುವಾರು ಮೇಯಿಸಲು ಅವಕಾಶ
July 24, 2025
11:13 PM
by: The Rural Mirror ಸುದ್ದಿಜಾಲ
ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು, ಮರಳಿನ ಅಭಾವ | ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರು | ರಾಜ್ಯ ಸರ್ಕಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳಲು ಸಂಸದ ಬ್ರಿಜೇಶ್‌ ಚೌಟ ಒತ್ತಾಯ |
July 24, 2025
10:40 PM
by: The Rural Mirror ಸುದ್ದಿಜಾಲ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ | ಮಳೆಯಲ್ಲೂ ಇವರು ಔಷಧಿ ಸಿಂಪಡಿಸುತ್ತಾರೆ..!
July 24, 2025
4:42 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group