ಬೆಳ್ತಂಗಡಿ ನೆರೆ ಸಂತ್ರಸ್ತರಿಗೆ ಆದಿಚುಂಚನಗಿರಿ ಶ್ರೀ ಸಾಂತ್ವನ : ಮಠದಿಂದ ಮಕ್ಕಳಿಗೆ ಉಚಿತ ಶಿಕ್ಷಣ

August 19, 2019
9:03 AM

ಬೆಳ್ತಂಗಡಿ:  ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶದಲ್ಲಿ ತೊಂದರೆಗೀಡಾದ ಕುಟುಂಬದ ಮಕ್ಕಳಿಗೆ ಪೂರ್ಣ ವಿದ್ಯಾಭ್ಯಾಸಕ್ಕೆ ಆದಿಚುಂಚನಗಿರಿ ಮಠದಿಂದ ಉಚಿತ ವ್ಯವಸ್ಥೆ ನೀಡಲಿದೆ. ಬಟ್ಟೆ ಬರೆ ಏನೆ ಸಮಸ್ಯೆಇದ್ದರು ಮಂಗಳೂರು ಶಾಖಾ ಮಠಕ್ಕೆ ಮಾಹಿತಿ ನೀಡಿದರೆ ಸಂಪೂರ್ಣವಾಗಿ ಸವಲತ್ತು ಒದಗಿಸಲಿದೆ. ತತ್‍ಕ್ಷಣ ಪರಿಹಾರಕ್ಕಾಗಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರದಂತೆ ಒದಗಿಸಿದ್ದೇವೆ ನಾವು ಆಯಾಯ ಭಾಗಕ್ಕೆ ವಾಸ್ತವಕ್ಕೆ ಗೋಚರವಾದಂತೆ ಅಲ್ಲೆಲ್ಲ ಆರ್ಥಿಕ ಸಹಾಯ ಒದಗಿಸಿದ್ದೇವೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Advertisement
Advertisement

ಅವರು  ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡಿದರು. ಈ ಸಂದರ್ಭ ಮಾತನಾಡಿದ ಅವರು  1961ರ ಬಳಿಕ ನಾಡುಕಂಡ ಭೀಕರ ಪ್ರವಾಹ ಎದುರಾಗಿದೆ. ದುರಂತಕ್ಕೆ ಕಾರಣ ಹಲವಾರು. ಆದರೆ ಮಲೆನಾಡಲ್ಲಿ ಇರುವವರು ತಾವು ಮಾಡದೆ ಇರುವ ತಪ್ಪಿಗೆ ಹಾನಿ ಎದುರಿಸುವಂತಾಗಿದೆ ಎಂದು  ಹೇಳಿದರು. ಬೆಳ್ತಂಗಡಿ ಪ್ರದೇಶದಲ್ಲಿ ಸಾಕಷ್ಟು ಹಾನಿ ಸಂಭವಿಸಿರುವುದು ಮೇಲ್ನೋಟಕ್ಕೆಕಂಡುಬರುತ್ತಿದೆ. ಬೇರೆಯವರ ಮನೆಯಲ್ಲಿ ಆಶ್ರಯ ಪಡೆದು ಅವರ ಬದುಕನ್ನು ಕಂಡಾಗ ನೋವು, ದುಖಃವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಂತ್ವಾನ ಹಾಗು ಕೈಲಾದ ಮಟ್ಟದಲ್ಲಿ ಸಹಾಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಠದಿಂದ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಭಕ್ತರ ಸ್ಥಿತಿ ನೋಡಿ ಹಾನಿ ತುಂಬಿಕೊಡುವ ಕೆಲಸ ಮಾಡಬೇಕಿದೆ ಎಂದು ಸ್ವಾಮೀಜಿಗಳು ಹೇಳಿದರು.

Advertisement

ಈ ಕಾರ್ಯದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಬೆಳ್ತಂಗಡಿ ಪುತ್ತೂರು, ಸುಳ್ಯ, ವಿಟ್ಲ ಈ ಭಾಗದ ಭಕ್ತರುಕೈಜೋಡಿಸುವು ಅವಶ್ಯ. ಪ್ರತಿಜಾಗಕ್ಕೂ ಭೇಟಿ ನೀಡಿದ್ದೇವೆ. ಮುಖ್ಯವಾಗಿ ಸರಕಾರ ಮೂಲ ಸೌಕರ್ಯಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕುಎಂದುಆದಿಚುಂಚನಗಿರಿ ಸ್ವಾಮೀಜಿಗಳು ಹೇಳಿದರು. ಸರಕಾರ ತಮ್ಮ ನಿರ್ಧಾರ ಪ್ರಕಟಿಸಿದೆ. ಈಗಿರುವ ಅನಾಹುತಗಳಿಗೆ ತಲುಪಬೇಕಾದ ಸವಲತ್ತು ಸರಕಾರದಿಂದ ತಲುಪುವ ಭರವಸೆ ನಮಗಿದೆ. ರಾಜ್ಯ ಸರಕಾರ ಮನೆ ಕಟ್ಟುವ ಭರವಸೆ ನೀಡಿದೆ.

ಈ ಸಂದರ್ಭ ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮಾಜಿ ಸಚಿವ ಗಂಗಾಧರಗೌಡ, ಕಾಲಭೈರವೇಶ್ವರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ರಂಜನ್ ಜಿ. ಗೌಡ, ಪಟ್ಟಣ ಪಂಚಾಯತ್ ಸದಸ್ಯ ಜಯಾನಂದ ಗೌಡ, ಮತ್ತಿತರರು ಇದ್ದರು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ
ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ
ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror