ಬೆಳ್ಳಾರೆ: ಸಾರ್ವಜನಿಕ ಸಾಂಸ್ಕøತಿಕ ಗಣೇಶೋತ್ಸವ ಸಮಿತಿ ಹಾಗು ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ಇದರ ಜಂಟಿ ಆಯೋಜನೆಯಲ್ಲಿ 48ನೇ ವರ್ಷದ ಗಣೇಶೋತ್ಸವ ಸೆ.02ರಿಂದ ಸೆ.3ರವರೆಗೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ನಡೆಯಲಿದೆ.
ಸೆ.2ರಂದು ಪ್ರಾತಃ ಕಾಲದಲ್ಲಿ ಗಣಪತಿ ಪ್ರತಿಷ್ಠ ಹಾಗು ಹೋಮ ನಡೆಯಲಿದೆ. ನಂತರವಿವಿಧ ಸ್ಪರ್ಧೆಗಳು, ದೇವರ ಪ್ರಸಾದ ಸ್ವೀಕಾರ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಗಂಟೆಯ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಶ್ವ ಹಿಂದೂ ಪರಿಷತ್‍ನ ಖ್ಯಾತ ಮುಖಂಡ ಸತ್ಯಜಿತ್ ಸುರತ್ಕಲ್ ಪ್ರಧಾನ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದಲ್ಲಿ ಪ್ರೈಮ್ ಟಿ.ವಿ ನಿರ್ದೇಶಕ ರೂಪೇಶ್.ವಿ ಕಲ್ಮಾಡಿ, ಜಿಲ್ಲಾ ಪಂಚಾಯತ್ ಅರಂತೋಡು ಕ್ಷೇತ್ರದ ಸದಸ್ಯ ಹರೀಶ್ ಕಂಜಿಪಿಲಿ ಸೇರಿದಂತೆ ಅನೇಕ ಖ್ಯಾತನಾಮರು ಉಪಸ್ಥಿತರಾಗಲಿದ್ದಾರೆ.
ರಾತ್ರಿ 8.30ರ ನಂತರ ತುಳುನಾಡ ಖ್ಯಾತ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯದ ಮಂಜೇಶ್ವರ ಶಾರದಾ ಆಟ್ರ್ಸ್ ಕಲಾವಿದರ ತಂಡದಿಂದ ಹಾಸ್ಯ ಪ್ರಧಾನವದ ಉತ್ತರ ಕೊರ್ಲೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಅಶೋಕ್ ಪಾಟಾಳಿ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.