ಬೆಳ್ಳಾರೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಈರಯ್ಯ ಡಿ.ಎನ್.ರವರಿಗೆ ಬೀಳ್ಕೊಡುಗೆ

November 20, 2019
2:23 PM

ಸುಳ್ಯ:ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸುಮಾರು 2 ವರ್ಷಗಳಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಯ್ಯ ಡಿ.ಎನ್.ರವರಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು ಅವರಿಗೆ ಬೆಳ್ಳಾರೆ ಠಾಣೆಯ ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವು ಪೆರುವಾಜೆಯ ಜೆ.ಡಿ.ಅಡಿಟೋರಿಯಂನಲ್ಲಿ ನಡೆಯಿತು.

Advertisement
Advertisement

ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ಈರಯ್ಯ ಡಿ.ಎನ್-ಚಂಪಲತಾ ದಂಪತಿಗಳನ್ನು ಶಾಲುಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈರಯ್ಯ ಅವರನ್ನು ಬೆಳ್ಳಾರೆ ಠಾಣೆಯ ಹೋಂಗಾರ್ಡಗಳ ವತಿಯಿಂದ ಮತ್ತು ಪಿಗ್ಮಿ ಸಂಗ್ರಾಹಕರ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಈರಯ್ಯರವರು ಸುಮಾರು 2 ವರ್ಷಗಳ ಕಾಲ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಸೇವೆ ದಿನಗಳನ್ನು ಸ್ಮರಿಸಿ ಸಹಕರಿಸಿದ ಹಿರಿಯ ಅಧಿಕಾರಿಗಳಿಗೆ, ಸಹೋದ್ಯೋಗಿ ಮಿತ್ರರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಸುಳ್ಯ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಂ.ಆರ್.ಹರೀಶ್, ಸುಬ್ರಹ್ಮಣ್ಯ ಠಾಣೆಯ ಎ.ಎಸ್.ಐ.ಚಂದಪ್ಪ, ಸುಳ್ಯ ನ್ಯಾಯಾಲಯದ ಎ.ಪಿ.ಪಿ.ಸಂತೋಷ್,ಬೆಳ್ಳಾರೆ ಠಾಣೆಯ ಎ.ಎಸ್.ಐ.ಮಧುಕುಮಾರ್, ಸುಳ್ಯ ವಲಯ ಅರಣ್ಯಾಧಿಕಾರಿ ಎನ್‌.ಮಂಜುನಾಥ್ ಮಾತನಾಡಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ, ಮಹಾದೇವ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಎ.ಎಸ್.ಐ.ಭಾಸ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಮಹಾದೇವ ಪ್ರಸಾದ್ ವಂದಿಸಿದರು. ಬೆಳ್ಳಾರೆ ಠಾಣೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.

Advertisement

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದಿಶಾಂತ್‌ ಕೆ ಎಸ್
July 23, 2025
7:46 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಮ್ಯ ಡಿ
July 23, 2025
7:39 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group