ಬೊಜ್ಜುತನ (ಒಬೆಸಿಟಿ) ತಡೆ ಹೇಗೆ ?

June 25, 2019
2:00 PM

Advertisement

ಡಾ.ಆದಿತ್ಯ ಚಣಿಲ

BHMS(Intern)

 

 

Advertisement

ಈಗೆಲ್ಲಾ ಕೇಳುವುದು  ಬೊಜ್ಜು ಕರಗಿಸುವುದು  ಹೇಗೆ ? ಇದಕ್ಕೇನು ಪರಿಹಾರ ಅಂತ. ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ದೇಹದ ಆರೋಗ್ಯದ ಕಡೆ ಗಮನಹರಿಸುವುದೇ ಕಡಿಮೆ.  ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸುವ ಹೊತ್ತಿಗೆ ಕೆಲಸಕ್ಕೆ ಹೋಗಲು ಸಮಯವಾಗಿರುತ್ತದೆ. ಸಂಜೆ ಮನಗೆ ಬರುವಾಗಲೇ ರಾತ್ರಿ ಊಟದ ಸಮಯವಾಗಿರುತ್ತದೆ.  ಬೊಜ್ಜು ಬೆಳೆಯಲು ಕಾರಣಗಳು ಏನೇ ಇದ್ದರೂ ಅದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕೊಲೆಸ್ಟ್ರಾಲ್, ಅತಿಯಾದ ಒತ್ತಡ, ಬೆನ್ನುನೋವು, ಮಂಡಿನೋವು, ಹೃದಯಸಂಬಂಧಿ ಕಾಯಿಲೆ ಇತ್ಯಾದಿಗಳು ಕಾಣಿಸಿಕೊಳ್ಳುವುದು. ವ್ಯಾಯಾಮ ಮಾಡಲು ಸಮಯವಿಲ್ಲದೆ ಇರುವವರು ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾಗಿದೆ. ಹಾಗಿದ್ದರೆ ಏನೇನು ಮಾಡಬೇಕು, ಏನು ಮಾಡಬಾರದು. ಇಲ್ಲಿದೆ ಟಿಪ್ಸ್ , ಓದಿ.

ವರ್ಲ್ಡ್ ಹೆಲ್ತ್ ಒರ್ಗನೈಸೇಷನ್ ನಲ್ಲಿ ಒಬೆಸಿಟಿ ಅಂದರೆ BMI=ತೂಕ kgಗಳಲ್ಲಿ ಭಾಗಿಸು ಎತ್ತರ (mt)2

BMI 25 ಕ್ಕಿಂತ ಮೇಲೆ ಇದ್ದರೆ ಅದು ಅಧಿಕ ತೂಕ
BMI 30 ಕ್ಕಿಂತ ಮೇಲೆ ಇದ್ದರೆ ಅದು ಬೊಜ್ಜುತನ

WHOಇದನ್ನು ಹೀಗೆ ಕೆಳಕಂಡಂತೆ ವಿಂಗಡಣೆ ಮಾಡಿದೆ

1. BMI ಮುಖಾಂತರ

Advertisement

18.5ಕ್ಕಿಂತ ಕಡಿಮೆ =ಕಡಿಮೆ ತೂಕ
18.5-24.5=ಸಾಧಾರಣ
24.5-29.9=ಅಧಿಕ ತೂಕ
30-34.5= ಬೊಜ್ಜುತನ ಕ್ಲಾಸ್ 1
34.5-39.9=ಬೊಜ್ಜುತನ ಕ್ಲಾಸ್ 2
40-49.9=ಬೊಜ್ಜುತನ ಕ್ಲಾಸ್3

2. ಬ್ರೋಚ್ಚಸ್ ಇಂಡೆಕ್ಸ್

ಎತ್ತರ(cms)-100

ಇಂದರಿಂದ ನಮ್ಮ ದೇಹಕ್ಕೆ ಬೇಕಾದ ಕನಿಷ್ಠ ತೂಕ ತಿಳಿಯಬಹುದು

 

Advertisement

ಯಾಕಪ್ಪಾ ಈ ಬೊಜ್ಜುತನ ಬರೋದು ?

1.ಜೇನೇಟಿಕ್- ಜೀನ್ ನ ಮುಖಾಂತರ ಬರಬಹುದು
2.ಅಧಿಕ ಪ್ರಮಾಣದ ಆಹಾರ ಸೇವನೆ-ಹೊರಗಿನ ಆಹಾರ ಪದಾರ್ಥ ಎಣ್ಣೆ ತಿಂಡಿಗಳು ಇತ್ಯಾದಿ
3.ಕಡಿಮೆ ಅವಧಿಯಲ್ಲಿ ಅಧಿಕ ಪ್ರಮಾಣದ ಆಹಾರ ಸೇವನೆ
4.ಕಡಿಮೆ ದೇಹದ ಚಟುವಟಿಕೆ
5.ಮದ್ದುಗಳು – ಅಧಿಕ ಸಮಯ ಮದ್ದು ತೆಗೆದುಕೊಳ್ಳುವುದರಿಂದ
6.ಮಾನಸಿಕ ಸಮಸ್ಯೆ -ಅಧಿಕ ಒತ್ತಡ, ಬೇಜಾರು ,ಕೋಪ ,ಮಾನಸಿಕ ಅಸಮತೋಲನ
7.ಖಾಯಿಲೆ – ಹೈಪೋಥೈರೋಇಡೀಸ್ಮ್,ಇತ್ಯಾದಿ
8.ಅಧಿಕ ಪ್ರಮಾಣದ ಮದ್ಯ ಮತ್ತು ಬೀಡಿಸೇವನೆ

ಗುಣ ಲಕ್ಷಣಗಳೇನು ಹಾಗಾದ್ರೆ?

  • ದಮ್ಮುಕಟ್ಟುವಿಕೆ
  • ಅಧಿಕ ಪ್ರಮಾಣದಲ್ಲಿ ಬೆವರುವುದು
  • ಬಾಯಿಯ ಮೂಲಕ ಉಸಿರಾಟ
  • ಕಾಲು ಮಂಡಿ ನೋವು
  • ಮಾನಸಿಕ ಅಸಮತೋಲನ (ಏಕೆಂದರೆ ಪ್ರತಿಯೊಬ್ಬರು ತನ್ನ ತೂಕದ ಬಗ್ಗೆ ಮಾತನಾಡುವುದರಿಂದ)

 

ಏನು ಮಾಡೋದು ಹಾಗಿದ್ರೆ?
ಕ್ಯಾಲೋರಿ ಅತ್ಯಂತ ಅವಶ್ಯಕ ಬೊಜ್ಜುತನ ನಿವಾರಣೆಗೆಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಇರುವಂತಹ ಪದಾರ್ಥಗಳನ್ನು ತಿನ್ನುವುದು ಉತ್ತಮ.

Advertisement

 

ಏನೇನೆಲ್ಲಾ ತಿನ್ನಬೇಕು ಹಾಗಿದ್ರೆ ?

  • ಕಾಳುಗಳು (ಗೋಧಿ,ಕಜೆ ಅಕ್ಕಿ ಕುಚುಲಕ್ಕಿ)
  • ಸಾಧ್ಯವಾದಷ್ಟು ತರಕಾರಿಗಳು ಆದರೆ ಬಟಾಟೆ ಮುಂತಾದವುಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು
  • ಹಣ್ಣು ಹಂಪಲು ತಿನ್ನುವುದು ಒಳ್ಳೆಯದು ಆದರೆ ಶರಭತ್ತು (ಜ್ಯೂಸ್) ಮಾಡಿ ಕುಡಿಯುವುದನ್ನು ನಿಲ್ಲಿಸಿ
  • ಸಿರಿಧಾನ್ಯ ,ಬೀನ್ಸ್,ಮೀನು ಮುಂತಾದವುಗಳನ್ನು ಸೇವಿಸಿ
  • ಕ್ಯಾಲೋರಿ ಫ್ರೀ ಆಹಾರ ಸೇವನೆ -ಕ್ಯಾಲೋರಿ ಫ್ರೀ ಪದಾರ್ಥಗಳ ಬಳಕೆ
  • ಹಾಲು ,ಇಸ್ ಕ್ರೀಮ್,ಚಾಕೊಲೇಟ್,ಕ್ರೀಮ್ಸ್,ಕ್ರೀಮ್ ಕ್ಯಾಂಡಿ ಇತ್ಯಾದಿಗಳನ್ನು ನಿಲ್ಲಿಸಿ
  • ಹಂದಿ ಮಾಂಸ ,ಮೊಟ್ಟೆ ಬಳಕೆ ಮಾಡಬಹುದು

ಎಷ್ಟು ತಿನ್ನಬಹುದು
ತನ್ನ ದೇಹದ ತೂಕ ಪ್ರಾಯ ಮತ್ತು ದೈಹಿಕ ಚಟುವಟಿಕೆಗನುಸಾರವಾಗಿತಿನ್ನಬೇಕು

ತೂಕ ಇಳಿಸುವ ವ್ಯಾಯಾಮ:

ವ್ಯಾಯಾಮ
ಭಾರ ಎತ್ತುವುದು
ಏರೋಬಿಕ್ ವ್ಯಾಯಾಮ
ಮನೆಕೆಲಸ
ದಿನನಿತ್ಯದ ನಡಿಗೆ

Advertisement

 ನೆನಪಿಡಬೇಕಾದ ಅಂಶ :

-ಅತ್ಯಂತ ತಿನ್ನುವುದನ್ನು ನಿಲ್ಲಿಸಿ
-ಬೆಳಗಿನ ತಿಂಡಿ ತಪ್ಪಿಸುವುದನ್ನು ನಿಲ್ಲಿಸಿ-ಬೆಳಗಿನ ತಿಂಡಿ ಬಿಡುವುದರಿಂದ ಮದ್ಯಾನ ಹೆಚ್ಚಾಗಿ ಹಸಿವಾಗುವುದರಿಂದ ಒಂದೇ ಸಮನೆ ತಿನ್ನ ಬೇಕಾಗುತ್ತದೆ ಇದೆ ತರಹ ತುಂಬಾ ದಿನ ಮಾಡುವುದರಿಂದ ಬೆಜ್ಜುತನ ಬರೋ ಸಾಧ್ಯತೆ ಇದೆ
-ನಿಧಾನವಾಗಿ ಆಹಾರ ಸೇವನೆ
-ಮನೆಯಲ್ಲಿ ಮಾಡಿದ ಅಡಿಗೆಗೆ ಮೊದಲ ಆದ್ಯತೆ
-T.V ಮುಂತಾದವುಗಳನ್ನು ನೋಡುವುದನ್ನು ಕಡಿಮೆ ಮಾಡಿ ದೈಹಿಕ ವ್ಯಾಯಾಮದ ಕಡೆಗೆ ಗಮನ
-ನಿದ್ರೆ(ಪ್ರತಿದಿನ ಕನಿಷ್ಠ 7-8ಗಂಟೆ ನಿದ್ರೆ ,ಮಕ್ಕಳಲ್ಲಿ ಕನಿಷ್ಠ 7-9 ಗಂಟೆ ನಿದ್ದೆ)
-ಪ್ಯಾಕೆಟ್ ಆಹಾರ ಪದಾರ್ಥಗಳು ಮತ್ತು ಜ್ಯೂಸ್ ಗಳನ್ನು ನಿಲ್ಲಿಸಿ
-ಸಕ್ಕರೆ ,ಉಪ್ಪು ,ಮದ್ಯ ,ತಂಬಾಕು ಇನ್ನಿತರೆ ಅಭ್ಯಾಸವನ್ನು ನಿಲ್ಲಿಸಿ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಚನ್ನ ಬೋಂಡಾ
July 5, 2025
7:00 AM
by: ದಿವ್ಯ ಮಹೇಶ್
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಎಂ ಜಿ ಸಿದ್ದೇಶ ರಾಮ
July 4, 2025
11:14 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಸಾನ್ವಿ ದೊಡ್ಡಮನೆ
July 4, 2025
10:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group