ಬ್ಯಾರೀಸ್ ಚೇಂಬರ್ ಆಫ಼್ ಕಾಮರ್ಸ್ ಜುಬೈಲ್ ಘಟಕದ ಉದ್ಘಾಟನೆ

November 24, 2019
10:09 AM

ಜುಬೈಲ್: ಬ್ಯಾರೀಸ್ ಚೇಂಬರ್ ಆಫ಼್ ಕಾಮರ್ಸ್ ಜುಬೈಲ್ ಘಟಕದ‌ ಉದ್ಘಾಟನಾ ಸಮಾರಂಭವು ಇಂಟರ್ ಕನ್ಟಿನೆನ್ಟಲ್ ಹೊಟೇಲ್‌ ಸಭಾಂಗಣದಲ್ಲಿ ನವೆಂಬರ್ 21ರಂದು ಅದ್ಧೂರಿಯಾಗಿ‌ ನಡೆಯಿತು.‌

Advertisement
Advertisement

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಎಸ್ಎಮ್ಆರ್ ಗ್ರೂಪ್ ನ ಸಿ ಇ ಓ ರಶೀದ್ ಹಾಜಿ ಡಿಜಿಟಲ್ ವೀಡಿಯೊ ಪ್ರದರ್ಶನದೊಂದಿಗೆ ಬಿಸಿಸಿಐ ಜುಬೈಲ್ ಘಟಕವನ್ನು ಉದ್ಘಾಟಿಸಿದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಕರಾವಳಿ ಕರ್ನಾಟಕದಲ್ಲಿ ಬ್ಯಾರಿಗಳಿಗಾಗಿ ಹಲವು ಸಂಘಟನೆಗಳಿದ್ದರೂ ವ್ಯಾಪಾರೋದ್ಯಮಿಗಳನ್ನು ಒಂದು ವೇದಿಕೆಯಡಿ ತರುವ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಬಿಸಿಸಿಐ ಈ ಕೊರತೆಯನ್ನು ನೀಗಿಸಿದೆ ಎಂದರು. ಈಗಾಗಲೇ ಕರಾವಳಿ ಕರ್ನಾಟಕ, ದುಬೈಯಲ್ಲಿ ಕಾರ್ಯಚರಿಸುತ್ತಿರುವ ಬಿಸಿಸಿಐ ಜುಬೈಲ್ ನಲ್ಲಿ ತನ್ನ ಘಟಕವನ್ನು ತೆರೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಬೆಳವಣಿಗೆಗೆ ಸೂಚಕವಾಗಿದೆ. ಬ್ಯಾರಿ ವ್ಯಾಪಾರೋದ್ಯಮಿಗಳ ಅತ್ಯುತ್ತಮ ನೆಟ್ ವರ್ಕ್ ಸ್ಥಾಪಿಸಿ ಉದ್ಯಮರಂಗ ದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮುಂದೊಂದು ದಿನ ಬಿಸಿಸಿಐ ಐವತ್ತು ಲಕ್ಷ ಉದ್ಯೋಗವಕಾಶವನ್ನು ಸ್ರುಷ್ಟಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸುಮಾರು ಇನ್ನೂರರಷ್ಟು ವ್ಯಾಪಾರೋದ್ಯಮಿಗಳು ಜುಬೈಲ್, ದಮ್ಮಾಮ್, ಅಲ್ ಖೋಬರ್ ಮತ್ತು ಸುತ್ತಮುತ್ತಲಿನಿಂದ ಭಾಗವಹಿಸಿದ್ದರು.
ಸಮಾರಂಭದಲ್ಲಿ ದುಬೈ ಮತ್ತು ಭಾರತದಿಂದ ಸುಮಾರು 17 ಮಂದಿ ಪ್ರತಿನಿಧಿಗಳು ಆಗಮಿಸಿದ್ದರು. ಸಮಾರಂಭದಲ್ಲಿ ವ್ಯವಹಾರ ನೀತಿಶಾಸ್ತ್ರ ವಿಷಯದ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಖಾಸಿಮ್, ಆಸ್ತಿ ಗಳಿಕೆಯೇ ಮನುಷ್ಯನ ಗುರಿಯಾಗಬಾರದು. ಆಸ್ತಿಯನ್ನು ಅತ್ಯುತ್ತಮ ಉದ್ದೇಶಕ್ಕಾಗಿ ಬಳಸುವುದು ನಮ್ಮ ಗುರಿಯಾಗಿರಬೇಕು. ವ್ಯಾಪಾರದಲ್ಲಿ ನೀತಿಯನ್ನು ಪಾಲಿಸುವುದು ದೀರ್ಘ ವಧಿ ಲಾಭವನ್ನು ತರುತ್ತದೆ. ಮೋಸ ಮತ್ತು ವಂಚನೆ ಕ್ಷಣಿಕ ಲಾಭವನ್ನಷ್ಟೆ ತಂದು ದೀರ್ಘಾವಧಿಯಲ್ಲಿ ಹೆಚ್ಚು ನಷ್ಟ ಉಂಟು ಮಾಡುತ್ತದೆ ಎಂದರು.

Advertisement

ನೆಟ್ ವರ್ಕಿಂಗ್ ಮತ್ತು ಸಂಶೋಧನೆ ಎಂಬ ವಿಷಯದ ಕುರಿತು ಮಾತನಾಡಿದ ಕಾರ್ಯಕಾರಿ ಸಮಿತಿ ಸದಸ್ಯ ಆಸಿಫ಼್ ಅಮ್ಯಾಕೊ ಬಿಸಿಸಿಐ ವಿಸ್ತಾರವಾದ ಅಧ್ಯಯನದ ಮೂಲಕ ಹೊಸ ಉದ್ಯಮ ರಂಗಗಳಲ್ಲಿ ಹೂಡಿಕೆ ಮಾಡಲು ಉತ್ತೇಜಿಸಲಿದೆ. ಬ್ಯಾರಿಗಳ ಬ್ಯುಸಿನೆಸ್ ನೆಟ್ ವರ್ಕ್ ಅಭಿವೃದ್ಧಿ ಪಡಿಸಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ಼್ ರವರು ಆರಂಭದಲ್ಲಿ ಬಿಸಿಸಿಐ ಪರಿಚಯವನ್ನು ನೀಡಿ ಅದರ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಅಖಿಲ್ ಫ಼ಾರೂಕ್ ರವರ ಕಿರಾಅತ್ ಪಠಣ ಮತ್ತು ದಾನಿಶ್ ಅಹ್ಮದ್ ರವರ ಅನುವಾದದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು.

ಬಿಸಿಸಿಐ ದುಬೈ ಘಟಕದ ಅಧ್ಯಕ್ಷ ಎಸ್ಎಮ್ ಬಶೀರ್, ಬಿಸಿಸಿಐ ಉಪಾಧ್ಯಕ್ಷ ಝಕರಿಯಾ ಅಲ್ ಮುಝೈನ್, ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ಼್ ಎಕ್ಸ್ ಪರ್ಟಯಿಸ್ ಮಾತನಾಡಿದರು. ಬಿಸಿಸಿಐ ಉಪಾಧ್ಯಕ್ಷ ರವೂಫ಼್ ಪುತ್ತಿಗೆ, ಶೇಖ್ ಎಕ್ಸ್ ಪರ್ಟೈಸ್, ಬಿಸಿಸಿಐ ಕೋಶಾಧಿಕಾರಿ ಮನ್ಸೂರ್, ಮುಮ್ತಾಝ್ ಅಲಿ, ಇಫ಼್ತಿಕಾರ್ ಯು.ಟಿ, ಬಹ್ರೈನ್ ಪ್ರತಿನಿಧಿ ರಝಾಕ್, ಕುವೈಟ್ ಪ್ರತಿನಿಧಿ ಅಬ್ದುಲ್ ಹಮೀದ್, ಕತಾರ್ ಪ್ರತಿನಿಧಿ ಅಬ್ದುಲ್ಲಾ ಮೋನು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಶೀರ್ ಎನ್ ಸಿ ಎಮ್ ಎಸ್ ಸ್ವಾಗತಿಸಿ, ಹಿದಾಯ ಫ಼ೌಂಡೇಶನ್ ಜುಬೈಲ್ ಘಟಕದ ಅಧ್ಯಕ್ಷ ಫ಼ಾರೂಕ್ ಅಸಿಸ್ಕೊ ವಂದಿಸಿದರು. ಮುಹಮ್ಮದ್ ಫ಼ಿರೋಝ್, ದಾನಿಶ್ ಮತ್ತು ನಯಾಝ್ ಕೈಸರ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 24-07-2025 | ಜು.29 ರಿಂದ ಮಳೆ ಕಡಿಮೆ ನಿರೀಕ್ಷೆ..? | ಕೃಷಿಕರಿಗೆ ಪೂರಕವಾಗಬಹುದೇ ಹವಾಮಾನ..?
July 24, 2025
11:54 AM
by: ಸಾಯಿಶೇಖರ್ ಕರಿಕಳ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ನಿಮ್ಮ ಆರೋಗ್ಯವನ್ನು ಪುನರುಜ್ಜೀವನಗೊಳಿಸಿ | 10 ಆಶ್ಚರ್ಯಕರ ಆಯುರ್ವೇದ ಉಪಾಯಗಳು !
July 24, 2025
7:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group