ಮಂಗಳೂರು: ಕೊರೊನಾ ವೈರಸ್ ಗೆ ಭಾರತದಲ್ಲಿ ಶನಿವಾರ ರಾತ್ರಿ ಬಿಹಾರದಲ್ಲಿ 38 ವರ್ಷದ ಯುವಕ ಮೃತಪಟ್ಟಿದ್ದಾರೆ. ಈ ಮೂಲಕ 6 ಮಂದಿ ಭಾರತದಲ್ಲಿ ಕೊರೊನಾ ವೈರಸ್ ಗೆ ಬಲಿಯಾದರೆ ಇಟಲಿಯ ಪ್ರಜೆಯೋರ್ವ ರಾಜಸ್ಥಾನದ ಜೈಪುರದಲ್ಲಿ ಸಾವನ್ನಪ್ಪಿದ ಪ್ರಕರಣವನ್ನೂ ಸೇರಿಸಿ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ ಮೂಲದ 63 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ.ಅವರು ಮಾ. 1 ರಂದು ಕೊರೋನಾ ಶಂಕೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲೂ ಕೊರೊನಾ ವ್ಯಾಪಕವಾಗಿ ಹರಡಿದ್ದು ಭಾನುವಾರ ಒಂದೇ ದಿನ 10 ಮಂದಿಗೆ ಸೋಂಕು ದೃಢವಾಗಿದ್ದು, ಒಟ್ಟು 74 ಮಂದಿಗೆ ಸೋಂಕು ಇರುವುದು ದೃಢವಾಗಿದೆ.
ಇದೀಗ ಬಿಹಾರಾದ 38 ವರ್ಷದ ಯುವಕ ಪಾಟ್ನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಕತಾರ್ ಪ್ರವಾಸ ಮಾಡಿದ್ದರು.
ಭಾರತದಲ್ಲಿ ಒಟ್ಟು 335 ಮಂದಿಗೆ ಸೋಂಕು ಇರುವುದು ದೃಢವಾಗಿದೆ. ಪ್ರಪಂಚದಲ್ಲಿ ಒಟ್ಟು 3,05,066 ಪ್ರಕರಣ ಪತ್ತೆಯಾಗಿದ್ದರೆ ಒಟ್ಟು 12,987 ಮಂದಿ ಸಾವನ್ನಪ್ಪಿದ್ದಾರೆ. ಈಚೆಗೆ ವಾರದಿಂದ ಪ್ರಪಂಚದಲ್ಲಿ ಪ್ರತೀ ದಿನ 30,000 ಪ್ರಕರಣ ಹೆಚ್ಚಾಗುತ್ತಿದೆ. ಕೊರೊನಾ ಕಾರಣದಿಂದ 1 ಬಿಲಿಯನ್ ಜನರು ಲಾಕ್ ಡೌನ್ ಆಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಚೀನಾದಲ್ಲಿ ವೈರಸ್ ಹರಡುವುದು ಕಡಿಮೆಯಾಗಿದೆ ಎಂದು ಚೀನಾ ಘೋಷಿಸಿಕೊಂಡ ಬೆನ್ನಲ್ಲೇ ಭಾನುವಾರದಂದು 46 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕುವೈಟ್ ನಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದ್ದರೆ , ಇಟಲಿಯಲ್ಲಿ ನಿನ್ನೆ ಒಂದೇ ದಿನ 793 ಮಂದಿ ಸಾವನ್ನಪ್ಪಿದ್ದಾರೆ , ಇಲ್ಲಿ ಕೊರೊನಾ ಪ್ರಕರಣದಲ್ಲಿ ಏರಿಕೆ ಕಂಡುಬರುತ್ತಿದೆ. ಯು ಎಸ್ , ಸ್ಪೇನ್ , ಜರ್ಮನಿ , ಫ್ರಾನ್ಸ್ , ಯು ಕೆ , ಸ್ವಿಜರ್ ಲ್ಯಂಡ್ ನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ.