ಭಾರತೀಯ ಸಂಸ್ಕೃತಿ-ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ

July 19, 2019
10:41 PM

ಬೆಂಗಳೂರು: ಶ್ರೀಶಂಕರ ಪೀಠದ ಸಂಕಲ್ಪ- ಧ್ಯೇಯಕ್ಕೆ ಬದ್ಧರಾಗುವುದೇ ನಿಜವಾದ ಸೇವೆ. ವರ್ಧಂತಿ ಉತ್ಸವದ ಈ ಸಂದರ್ಭದಲ್ಲಿ ಭಾರತೀಯ ಪರಂಪರೆ- ಸಂಸ್ಕೃತಿ, ಧರ್ಮದ ವರ್ಧಂತಿಗೆ ಪಣತೊಡೋಣ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

Advertisement
Advertisement

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶುಕ್ರವಾರ ನಡೆದ ಶ್ರೀಗಳ ವರ್ಧಂತ್ಯುತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಪೀಠದ ಸಂಕಲ್ಪ, ಧ್ಯೇಯಕ್ಕೆ ಬದ್ಧರಾಗುವುದು ನಿಜವಾದ ಸೇವೆ. ವಿಶ್ವದ ಏಕೈಕ ಗೋಸ್ವರ್ಗ, 1300 ವರ್ಷದ ಶಂಕರ ಪರಂಪರೆಗೇ ಗೌರವ ತರುವಂಥ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಂಥ ಸಾರ್ಥಕ ಕಾರ್ಯಗಳಿಗೆ ಕೈಜೋಡಿಸುವ ಮೂಲಕ ಸಮಾಜವನ್ನು ನಂದನವನವನ್ನಾಗಿ ಪರಿವರ್ತಿಸೋಣ ಎಂದು ಸಲಹೆ ಮಾಡಿದರು. ವರ್ಧಂತಿ ಎಂದರೆ ವೃದ್ಧಿ- ವಿಕಾಸವನ್ನು ಸೂಚಿಸುವ ಪದ; ಪ್ರತಿ ವರ್ಷ ದಾಟಿದಾಗಲೂ ವೃದ್ಧಿ- ಬೆಳವಣಿಗೆಗಳು ಆಗಬೇಕು. ಇಲ್ಲದಿದ್ದರೆ ಅದು ವ್ಯರ್ಥ. ಆದರೆ ನಮಗೆ ಎಲ್ಲ ದಿನದಂತೆ ಒಂದು ದಿನ. ಭೂಮಿಗೆ ಬಂದ ಕಾರ್ಯವನ್ನು ನೆನಪಿಗೆ ತಂದುಕೊಳ್ಳುವ ದಿನ. ನಾವು ಮಾಡಬೇಕಾದ ಕಾರ್ಯದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ನೈಜ ಆಚರಣೆ ಎಂದು ಬಣ್ಣಿಸಿದರು.

Advertisement

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ದಂಪತಿಗಳು ಶ್ರೀಗುರುಭಿಕ್ಷಾಸೇವೆ ಮತ್ತು ಅಕ್ಕಿಯಿಂದ ತುಲಾಭಾರ ಸೇವೆ ನೆರವೇರಿಸಿದರು. ಅಕ್ಕಿ ಅನ್ನಪೂರ್ಣೇಶ್ವರಿಯ ಪ್ರಸಾದದ ಸಂಕೇತ. ಅದರಿಂದ ತುಲಾಭಾರ ನೆರವೇರಿಸುವುದು ಎಂದರೆ, ಅನ್ನಪೂರ್ಣೇಶ್ವರಿ ಸಂತೃಪ್ತಳಾಗಿ ಶ್ರೀಪೀಠವನ್ನು ಮೇಲೆತ್ತುವ ಸಂಕೇತ ಎಂದು ಅವರು ಅಭಿಪ್ರಾಯಪಟ್ಟರು.

ಧಾರ್ಮಿಕ ಕಾರ್ಯಕ್ರಮ:

Advertisement

ವರ್ಧಂತ್ಯುತ್ಸವ ಅಂಗವಾಗಿ ಬೆಳಿಗ್ಗೆ ಅರುಣ ಹೋಮ, 48 ಅರುಣ ನಮಸ್ಕಾರ, ಮಾತೆಯರಿಂದ ಮಂಗಳಾರತಿ, ರಾಜರಾಜೇಶ್ವರಿಗೆ ಬಾಗಿನ ಅರ್ಪಣೆ, ಅಷ್ಟೋತ್ತರ ಶತಕುಂಭ ಗಂಗಾಭಿಷೇಕ, ಶ್ರೀರಾಮದೇವರಿಗೆ ಅಷ್ಟಾವಧಾನ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀಪೀಠಕ್ಕೆ ನೀಡಿದ ರಜತ ಪೀಠಾರೋಹಣ ಕೂಡಾ ಈ ಸಂದರ್ಭದಲ್ಲಿ ನೆರವೇರಿತು.

 

Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ
ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ
April 28, 2024
12:20 PM
by: ದ ರೂರಲ್ ಮಿರರ್.ಕಾಂ
ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ದಂಡು | ರಾಮನ ದರ್ಶನ ಪಡೆದ 1.5 ಕೋಟಿ ಜನ – ಚಂಪತ್‌ ರಾಯ್‌
April 22, 2024
5:17 PM
by: The Rural Mirror ಸುದ್ದಿಜಾಲ
’ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಮೇ 6 ರಂದು ಸಂಕಲ್ಪ ಆರಂಭ |
April 22, 2024
1:28 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror