ನಾಗಪುರ: ಭಾರತವು ದೇಶದ ಎಲ್ಲಾ ಭಾರತೀಯರಿಗೆ, ಎಲ್ಲಾ ಧರ್ಮದವರಿಗೆ ಸೇರಿದ್ದಾಗಿದೆ. ಭಾರತ ಎನ್ನುವುದೇ ಒಂದು ಪ್ರೀತಿ. ಭಾರತೀಯರು ಸೋದರತ್ವವವನ್ನು ನಂಬಿರುವವರಾಗಿದ್ದಾರೆ. ಹೀಗಾಗಿ ಪ್ರತೀ ವ್ಯಕ್ತಿಯಲ್ಲಿ ಪ್ರೀತಿ ಅಡಗಿದೆ. ವಿರೋಧ ಎನ್ನುವುದು ಇಲ್ಲ. ಆದರೆ ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ವಿಷಯಗಳಿಂದ ಇಂದು ಕೆಲ ಪದಗಳ ಹೇರಿಕೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಜಿ ಭಾಗವತ್ ಹೇಳಿದರು.
ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹತ್ಯೆ ಎಂಬ ಪದ ಭಾರತೀಯ ನೀತಿಗಳಲ್ಲೇ ಇಲ್ಲ. ಭಾರತೀಯತೆ ಒಪ್ಪುವವರು ಹತ್ಯೆಯನ್ನು ಒಪ್ಪಲಾರರು. ಈ ಪದದ ಮೂಲ, ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ಕಥೆಯಿಂದ ಬಂದಿರುವುದಾಗಿದೆ. ಭಾರತೀಯರು ಸೋದರತ್ವವವನ್ನು ನಂಬಿರುವವರಾಗಿದ್ದೇವೆ. ಭಾರತೀಯರು ಹಾಗೂ ಹಿಂದೂಗಳ ಮೇಲೆ ಇಂತಹ ಪದಗಳನ್ನು ಹೇರಿಕೆ ಮಾಡಬೇಡಿ ಎಂದರು.ಸಂವಿಧಾನ ವಿರೋಧ ಚಟುವಟಿಕೆಗಳ ವಿರುದ್ಧ ಜನರನ್ನು ಸಂಘ ಪರಿವಾರ ಎಂದಿಗೂ ಬೆಂಬಲಿಸಿಲ್ಲ. ಯಾವುದೇ ಹಲ್ಲೆ ಪ್ರಕರಣಗಳ ವಿರುದ್ಧ ಸಂಘ ಪರಿವಾರ ನಿಂತಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರ ಕೆಲಸ ಮಾಡುತ್ತಿದೆ. ಭಾರತ ಎಲ್ಲಾ ಭಾರತೀಯರಿಗೆ, ಎಲ್ಲಾ ಧರ್ಮದವರಿಗೆ ಸೀಮಿತವಾಗಿದೆ. ಧರ್ಮ, ಜಾತಿ ಮೇಲೆ ಯಾರೊಬ್ಬರೂ ತಾರತಮ್ಯ ಮಾಡದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದರಂತೆ ಜನರನ್ನು ನಿರೀಕ್ಷೆಯನ್ನು ಈಡೇರಿಸಿದೆ. ಈ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವ ಧೈರ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ವ್ಯಾಪಾರ ಮತ್ತು ಇತರ ಸಂಬಂಧಿತ ವಿಚಾರಗಳ ಕುರಿತು ವ್ಯಾಪಾರ ಒಪ್ಪಂದಗಳನ್ನು ನಮ್ಮದೇ ಆದ ನಿಯಮಗಳಿಗೆ ಅನುಗುಣವಾಗಿ ರೂಪಿಸಬೇಕು. ನಾವು ಸ್ವದೇಶಿಯನ್ನು ನಂಬುತ್ತೇವೆ. ಆದರೆ, ಅಂತರಾಷ್ಟ್ರೀಯ ಸಂಬಂಧಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಭಾರತಕ್ಕೆ ಹೊಸ ಆರ್ಥಿಕತೆಯ ಮಾದರಿಯ ಅವಶ್ಯಕವಿದ್ದು, ಇದರಿಂದ ಕಡಿಮೆ ಶಕ್ತಿಯಿಂದ ಉತ್ತಮ ಕಾರ್ಯಗಳು ಹೊರಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಜಿ ಭಾಗವತ್ ಹೇಳಿದ್ದಾರೆ.