ಎಲ್ಲಾ ಹಬ್ಬಗಳಂತಲ್ಲ. ಇದಕ್ಕೆ ಜಾತಿ, ಧರ್ಮ ಗಳ ಹಂಗಿಲ್ಲ. ದೇಶದ ಎಲ್ಲರೂ ಆಚರಿಸಿ ಸಂಭ್ರಮಿಸುವ ಹಬ್ಬ, ಬಿಡುಗಡೆಯ ಹಬ್ಬ, ವಿದೇಶಿಯರ ಹಿಡಿತದಿಂದ ಬಿಡುಗಡೆಯಾದ ದಿನದ ನೆನಪಿನ ಹಬ್ಬ. ಅದುವೇ ಸ್ವಾತಂತ್ರ್ಯ ದಿನಾಚರಣೆಯ ಹಬ್ಬ. ಆಗಸ್ಟ್ 15 ರಂದು ದೇಶದೆಲ್ಲೆಡೆ ಸಂತೋಷದಿಂದ ಈ ದಿನವನ್ನುಆಚರಿಸಲಾಗುತ್ತ ದೆ.
Advertisement
ಈ ಬಾರಿ ಎಂದಿನಂತಿಲ್ಲ ಸ್ವಾತಂತ್ರ್ಯ ದಿನಾಚರಣೆ. ಮಳೆಯ ತೀವ್ರತೆಗೆ ನಲುಗಿದ ರಾಜ್ಯಗಳು ,ಇದರ ನಡುವೆ ಸ್ವಾತಂತ್ರ್ಯ ದಿನಾಚರಣೆ . ಮತ್ತೊಂದೆಡೆ ಕಾಶ್ಮೀರ ಕಣಿವೆಯಲ್ಲಿ ಹಾರಲಿರುವ ತಿರಂಗ. ಅಲ್ಲಿ 1947 ರಲ್ಲಿ ಹಾರಿದ ಧ್ವಜ ಮತ್ತೆ ಈ ಬಾರಿಯೇ ಹಾರುತ್ತಿರುವುದು. ದೇಶದೆಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರ ಗೀತೆಯನ್ನು ಹಾಡಿ ನಮ್ಮ ನಾಡು ನುಡಿಗೆ ಗೌರವಿಸುತ್ತಾ ಎಲ್ಲರೂ ಆನಂದಿಸುತ್ತಾರೆ.
Advertisement
ಆಗಸ್ಟ್ 15 ಬಂತೆಂದರೆ ನಮ್ಮ ದೇಶ ಸಂಭ್ರಮದಲ್ಲಿ ಮುಳುಗೇಳುತ್ತದೆ. ಬ್ರಿಟಿಷ್ ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಚರಣೆಯ ಉತ್ಸವಕ್ಕೆ ಸಂಬಂಧಿಸಿದ ಖುಷಿ . ಯಾವತ್ತೂ ಸ್ವಾತಂತ್ರ್ಯ ಯೋತ್ಸವೆಂದರೆ ಖುಷಿಯೇ, ಆದರೆ ಈ ಬಾರಿ ಇದು ದುಪ್ಪಟ್ಟು. ಯಾಕೆಂದರೆ ೭೩ನೇಯ ಸ್ವಾತಂತ್ರ್ಯಯೋತ್ಸವಕ್ಕೆ ನಮ್ಮ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು ಭರ್ಜರಿ ಉಡುಗೊರೆ ಯನ್ನು ದೇಶದ ಜನತೆಗೆ ನೀಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿ ಅಲ್ಲಿನ ಜನರಿಗೆ ಸ್ವಾತಂತ್ರ್ಯ ದ ನಿಜವಾದ ಅನುಭವವನ್ನು ಪಡೆಯು ಅವಕಾಶಕ್ಕೆ ಅಡಿಪಾಯ ಹಾಕಿದ್ದಾರೆ. ಇನ್ನೂ ಮುಂದಿರುವ ಅಡ್ಡಿಗಳ ನಿವಾರಣೆಯಾದರೆ ಹಲವು ವರ್ಷಗಳ ಕನಸು ನನಸಾದಂತೆ.
ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾಡುವ ಭಾಷಣ ಮಹತ್ವವಾದು ದಾಗಿದೆ. ದೇಶದ ಮುಂದಿರುವ ಸವಾಲುಗಳು, ಸಾಧನೆಗಳು, ಯೋಜನೆಗಳ ಅನಾವರಣ ಪ್ರಧಾನ ಮಂತ್ರಿಯವರ ಭಾಷಣದಲ್ಲಿ ಉಲ್ಲೇಖವಾಗುತ್ತವೆ. ಪ್ರತೀ ಬಾರಿಯಂತೆ ಈ ಬಾರೀಯೂ ಹಲವು ನಿರೀಕ್ಷೆಗಳೊಂದಿಗೆ ಪ್ರಧಾನ ಮಂತ್ರಿ ಮೋದಿಯವರ ಭಾಷಣವನ್ನು ಇಡೀ ಭಾರತ ಇದಿರು ನೋಡುತ್ತಿದೆ.
ನಾವೆಲ್ಲರೂ ಒಂದೇ. ನಮ್ಮಲ್ಲಿ ಭಾಷೆ, ವೇಷ ಭೂಷಣ, ಪದ್ಧತಿ , ಆಚರಣೆಗಳಲ್ಲಿ ವಿಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ ಭಾರತೀಯರು ಎಂದು ಒಕ್ಕೋರಲಿಂದ ಹೇಳುವ ಸಮಯ ಬಂದಿದೆ. ದುಷ್ಟಶಕ್ತಿಗಳನ್ನು ಎದುರಿಸು ವಲ್ಲಿ ಎಲ್ಲರೂ ಒಗ್ಗೂಡುವ ಸಂಧರ್ಭ ಎದುರಾಗಿದೆ. ಈ ಕಾರ್ಯ ಕ್ಕೆ ಕೈ ಜೋಡಿಸುತ್ತಾ ಒಂದಾಗಿ ಹೇಳೋಣ’ ಭಾರತ್ ಮಾತಾಕಿ ಜೈ’
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement