ಸುಬ್ರಹ್ಮಣ್ಯ:ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು-ಬೆಂಗಳೂರು ರೈಲು ಹಳಿಗೆ ಸಿರಿಬಾಗಿಲು ಹಾಗೂ ಇತರ 4 ಕಡೆ ಹಳಿಗೆ ಮಣ್ಣು ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದೆ. ಇಂದು ಬೆಳಗ್ಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಸಕಲೇಶಪುರ ನಡುವಣ ರೈಲು ಹಳಿಯಲ್ಲಿ ಮಣ್ಣು ಕುಸಿತದ ಪರಿಣಾಮ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಸಕಲೇಶಪುರ ನಡುವಣ ರೈಲು ಹಳಿಯ 86 ನೇ ಕಿಮೀ ಹಾಗೂ 83 ಹಾಗೂ ಇತರ ಎರಡು ಕಡೆ ಸೇರಿದಂತೆ 4 ಕಡೆಗಳಲ್ಲಿ ಕುಸಿತವಾಗಿದೆ. ಈವರೆಗೆ 86 ನೇ ಕಿಮೀ ಪ್ರದೇಶದ ಮಣ್ಣು ತೆರವು ಕಾರ್ಯ ಪೂರ್ತಿಗೊಂಡಿಲ್ಲ. ತುರ್ತು ಕಾರ್ಯದ ಹಿನ್ನೆಲೆಯಲ್ಲಿ 50 ಕ್ಕೂ ಅಧಿಕ ಕಾರ್ಮಿಕರು ಹಾಗೂ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಈಗಲೂ ಮಳೆ ಸುರಿಯುತ್ತಿರುವ ಕಾರಣ ಕೆಲಸದ ಪ್ರಗತಿಗೆ ಅಡ್ಡಿಯಾಗಿದೆ. ಮಧ್ಯಾಹ್ನದ ಎರಡೂ ರೈಲುಗಳ ಓಡಾಟ ಸ್ಥಗಿತವಾಗಿತ್ತು. ಇದೀಗ ರಾತ್ರಿ ರೈಲು ಕೂಟಾ ಸ್ಥಗಿತಗೊಳ್ಳುವ ಸೂಚನೆ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel