ಭಾವದೊಳೊಂದು ಯಾನ

September 9, 2019
2:00 PM
ಬದುಕು ನಿಂತ ನೀರಲ್ಲ, ಹರಿವ ತೊರೆ. ಚಲಿಸುವ ನೀರಿಗೆ ತಡೆಯೊಡ್ಡಿದರೂ ನಿಲ್ಲಲಾರದು.ನಿಂತರೂ ಅಲ್ಲೇ ಚಲಿಸುತ್ತಿರುವುದು ಅದರ ಗುಣ. ಹರಿವ ನೀರನ್ನೂ ಓಡುವ ಮನಸ್ಸನ್ನೂಕಟ್ಟಿ ಹಾಕುವುದು ಬಲು ಕಷ್ಟ. ಮನಸ್ಸಿನ ವೇಗ ಗಾಳಿಗಿಂತಲೂ ವೇಗವಾದದ್ದು. ಒಂದು ಕ್ಷಣದಲ್ಲಿ ಪ್ರಪಂಚವಿಡೀ ತಿರುಗಿ ಬರುವ  ಸಾಮರ್ಥ್ಯ ಮನಸಿಗಿದೆ. ಕೈ ಕೆಲಸದಲ್ಲಿದ್ದರೂ ಭಾವ ಇನ್ನೆಲ್ಲೋ. ಅಡುಗೆ ಕೆಲಸದಲ್ಲಿ ಕೈ  ನಿರತವಾಗಿದ್ದರೂ ಮನಸು ಮಗದೊಂದೆಡೆಗೆಳೆಯುತ್ತಾ ಸಕ್ಕರೆ ಹಾಕುವಲ್ಲಿ ಉಪ್ಪು , ಉಪ್ಪು ಹಾಕುವಲ್ಲಿ ಸಕ್ಕರೆ ಹಾಕಿ ರುಚಿ ಹಾಳಾಗುವುದು ತಪ್ಪಲ್ಲ ಬಿಡಿ.
ಯಾವುದೋ ಜಾಹೀರಾತಿನಲ್ಲಿ ಕಂಡ ಸೀರೆಯ ಬಗ್ಗೆ ವಿಪರೀತ ತಲೆಕೆಡಿಸಿಕೊಂಡು ನಿದ್ದೆಯೂ ಬರದೆ ಬೆನ್ನುನೋವು ತಿಂದ ದಿನಗಳು ಇನ್ನೂ ನೆನೆಪಿನಲ್ಲಿದೆ.ಟಿ.ವಿ ಯಲ್ಲಿ ಅನ್ ಲೈನ ಬುಕ್ ಮಾಡಿ ಸೀರೆ ಖರೀದಿ ಮಾಡುವ ಬಗ್ಗೆ ಜಾಹೀರಾತು ‌ ಬರುತ್ತಿತ್ತು.೬ ಸೀರೆಗಳು ಕೇವಲ 1200 ರೂಪಾಯಿ ಗಳಿಗೆ. ಈಗಲೇ ಕರೆ‌ಮಾಡಿ ಸೀರೆಯನ್ನು ನಿಮ್ಮದಾಗಿಸಿಕೊಳ್ಳಿ, ಎಂದು ಟಿ.ವಿ ಪರದೆಯ ಮುಂದೆ ಪೋನ್ ನಂಬರ್ ಬರತೊಡಗಿತು .ಆ ನಂಬರ್ ಬರೆದಿಟ್ಟುಕೊಂಡೂ ಆಯಿತು  . ಬಣ್ಣ ಬಣ್ಣದ ಹೂಗಳಿರುವ ಸೀರೆಗಳು ಮನಸೆಳೆಯಿತು. ಕೂತರೂ ನಿಂತರೂ ಅದೇ ಧ್ಯಾನ. ನಿದ್ದೆಯೂ ಮಾಡದೆ ಕಣ್ಣು ಕೆಂಪು ಮಾಡಿಕೊಂಡು ಓಡಾಡುತ್ತಿದ್ದ ನನ್ನನು ನೋಡಿ ಏನಾಗಿದೆ ಮಾರಾಯ್ತಿ ಎಂದು ನನ್ನೆಜಮಾನ್ರು ವಿಚಾರಿಸಿದರು. ,ಹೇಳಿದರೆ ನಕ್ಕು ಬಿಟ್ಟರೆ ಎನಿಲ್ಲ ಅಂದು, ಸುಮ್ಮನಾದೆ. ನನ್ನತ್ತೆ ಬಿಡಬೇಕಲ್ಲಾ. ನನ್ನ ಗುಟ್ಟು ಅತ್ತೆಯಿಂದ ಮುಚ್ಚಿಡುವುದೂ ಸಾಧ್ಯವೇ ಇಲ್ಲ. ಅವರು ಹೇಳೇ ಬಿಟ್ಟರು. ಅದೂ ಏನಾಯ್ತು ಗೊತ್ತಾ , ಯಾವುದೋ ಸೀರೆ ವಿಷಯ ಅವಳ ತಲೆ ಕೊರಿತಿದೆ, ತರ್ಸಿಬಿಡು ಎಲ್ಲಾ ಸರಿ ಯಾಗುತ್ತದೆ. ಅಷ್ಟೆಯಾ ಮಾಡಿದ್ರಾಯಿತಪ್ಪಾ, ನಿದ್ದೆಗೆಡಬೇಕಾಗಿರಲಿಲ್ಲ ಈ ವಿಷಯಕ್ಕೆ , ಎಂದು ಒಂದೇ ಮಾತಾಲ್ಲಿ ಅಂದು ಬಿಟ್ಟರು. ಬುಕ್ ಮಾಡಿದ್ದು ಆಯಿತು, ಸೀರೆ ಬಂದದ್ದೂ ಆಯಿತು , ಉಟ್ಟು ಮೆರೆದದ್ದು ಆಯಿತು. ಅಲ್ಲಿಗೆ ಸೀರೆಯ ಆಸೆ ನೆರವೇರಿದಂತೂ ಆಯಿತು.
ಅದೊಂದು ಕೆಂಪು ಗುಲಾಬಿ ಯಾವಾಗಲೂ ಸೆಳೆಯುತ್ತಿತ್ತು. ಗೆಳತಿ ಮುಡಿದುಕೊಂಡು ಬರುತ್ತಿದ್ದಳು. ನಾವು ಆಕೆ ಮುಡಿದುಕೊಂಡು ಬಂದಾಗ ನನಗೆ ನನಗೆ ಬೇಕು ಎಂದು ಬೆಳಿಗ್ಗೆ ಬುಕ್ ಮಾಡಿ ಸಂಜೆ ಅವಳು ಬಾಡಿದ ಹೂಗಳನ್ನು ಕೊಡುತ್ತಿದ್ದಳು. ಅದುವೇ ಆವಾಗ ಖುಷಿ. ಆದರೆ ಮನಸ್ಸಿನಾಳದಲ್ಲಿ ನನಗೂ ಹೂ ತೋಟ ಮಾಡಬೇಕೆಂಬ ಕನಸು ಚಿಗುರಲಾರಂಭಿಸಿತು. ಮಾರ್ಕೆಟ್ ನಲ್ಲಿ ,ರೋಡ್ ಸೈಡ್ನಲ್ಲಿ  ಎಲ್ಲಿ ಗಿಡ ಕಂಡರೂ ತಗೊಂಡು ಬಿಡಬೇಕು ಅನ್ನಿಸ ತೊಡಗಿತು. ತಂದೂ ಆಯಿತೂ. ಹೇಗೆ ಬೆಳೆಸಬೇಕು ಎಂದರಿಯದೆ ಕೊಂದೂ ಆಯಿತು. ಆದರೂ ಮನಸಿನಾಸೆ ಬದುಕು ಒಂದು ಹಂತಕ್ಕೆ ಬಂದು ನಿಂತಾಗ ಮತ್ತೆ ಚಿಗುರೊಡೆಯಿತು. ಮತ್ತೀಗ ಎಲ್ಲಾ ರೀತಿಯ ಹೂಗಿಡಗಳ ಸಂಗ್ರಹಿಸಿ ಅವುಗಳ ಗುಣವರಿತು ಬೆಳೆಸುವ ಕಲೆಯ ಒಲಿಸಿಕೊಳ್ಳುತ್ತ ಎಲ್ಲರಿಂದ ಸೈ ಎನ್ನಿಸಿಕೊಳ್ಳ ಬೇಕೆಂಬ ಖುಷಿ ಮೊಗದಲ್ಲಿ.
ಮಾತು ಎಲ್ಲರೂ ಬಲ್ಲರು. ಆದರೆ ಆಯಾ ಸಮಯಕ್ಕೆ ಹೇಗೆ ಮಾತಾಡಬೇಕು ಎಂಬುದನ್ನು ಅರಿತವನೇ ಜಾಣ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಆಯಾ ಸಂದರ್ಭಗಳಿಗೆ ಹೊಂದಿದಂತೆ ಮಾತನಾಡುವುದೂ ಒಂದು ಕಲೆ. ಇದರ ಬಗ್ಗೆ ಹಲವು ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಈ ಪುಸ್ತಕ ಗಳನ್ನು ಓದಿ  ಉತ್ತಮ ವಾಗ್ಮಿಯಾಗುವುದು ಸಾಧ್ಯವಿಲ್ಲ. ನಿರಂತರ ‌ಅಭ್ಯಾಸ ಮಾತ್ರ ಒಬ್ಬ ವ್ಯಕ್ತಿಯನ್ನು ಒಳ್ಳೆಯ ಮಾತುಗಾರನಾಗಿವುದು ಸಾಧ್ಯ. ಪ್ರಸಿದ್ಧ ಭಾಷಣಕಾರರ ಮೂಲವನ್ನು ಕೆದಕಿದಾಗ ಈ ವಿಷಯ ತಿಳಿಯುತ್ತದೆ. ಅವರೆಲ್ಲ ನಿರಂತರ ಅಭ್ಯಾಸದಿಂದ ಆ ಎತ್ತರಕ್ಕೆ ಏರಿರುತ್ತಾರೆ. ಅವರನ್ನು ಆ  ಯಶಸ್ವಿನ ಸಂಧರ್ಭದಲ್ಲಿ ಮಾತನಾಡಿಸಿದಾಗ ನಮ್ಮ ರಿವಿಗೆ ಬರುತ್ತದೆ. ತಮ್ಮ ಹೋರಾಟದ ಪಯಣವನ್ನು ವಿವರಿಸುವವಾಗ ಕಣ್ಣಂಚಿನಲಿ ಕಂಡುಕಾಣದಂತೆ ಒಂದೆರಡು ಹನಿ ಕಣ್ಣೀರು  ಬಾವುಕತೆಯ ಸನ್ನಿವೇಶ ವನ್ನು ಸೃಷ್ಟಿಸುತ್ತದೆ.
ಎಲ್ಲವೂ ಎಲ್ಲರಿಗೆ ಸಿಕ್ಕುವುದಿಲ್ಲ. ಸಿಕ್ಕಿದರೂ ಬೇಕು ಎಂದಾಗ ಜೊತೆಯಾಗುವುದಿಲ್ಲ.   ‌‌ ಬಹಳ ಇಷ್ಟಪಟ್ಟದ್ದು   ಮತ್ತೆ ಯಾವಾಗಲಾದರೂ ಕಣ್ಣ ಮುಂದೆ ಅನಿರೀಕ್ಷಿತವಾಗಿ    ಬಂದು ನಿಂತಾಗಾ ಏನು ಮಾಡಬೇಕೆಂದು ಅರಿಯದೆ ಕಣ್ಣು ಕಣ್ಣು ಬಿಡುವ ಪರಿಸ್ಥಿತಿ. ಅವಾಗ ಸ್ವೀಕರಿಸುವ ಸಂದರ್ಭವೂ ನಮ್ಮದಾಗಿರುವುದಿಲ್ಲ. ಮನಸು ತುಂಬಿದ ಭಾವನೆಗಳನ್ನು ನಿಯಂತ್ರಿಸುವ ಕೆಲಸವು ಕಷ್ಟದ್ದೇ. ಸಾಧನೆಯ ಹಾದಿಯಲ್ಲಿ ಮುನ್ನಡೆಯುವಾಗ ಭಾವನೆಗಳು ಪ್ರಮುಖ ಅಡ್ಡಿ. ಗುರಿ ಮುಖ್ಯವಾದಾಗ ಉಳಿದೆಲ್ಲಾ ವಿಷಯಗಳು ಗೌಣ. ತನ್ನ ಸಾಧನೆಯ ಮೆಟ್ಟಿಲುಗಳತ್ತ ಹೆಜ್ಜೆ ಇಡಲಾರಂಭಿಸಿದಾಗ ಸಂಪೂರ್ಣ ಗಮನ ಗುರಿಯತ್ತಲೇ ಇರಬೇಕಾಗುತ್ತದೆ. ಭಾವನೆಗಳಿಗಲ್ಲಿ ಜಾಗವಿಲ್ಲ. ಒಂದೇ ಮನಸ್ಸಿನಿಂದ ಗುರಿಯತ್ತ ಹೆಜ್ಜೆ ಇಟ್ಟಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಭಾವಯಾನ ದಲ್ಲಿಯೇ ಮುಳುಗಿ ಪ್ರಚಲಿತವನ್ನು ಮರೆತರೆ ಸೋಲೆ ಗತಿ. ಭದ್ರ ಭವಿಷ್ಯಕ್ಕೆಗಟ್ಟಿ ಪಂಚಾಂಗವೇ ಇರಬೇಕು. ಹಾಗಾಗಿ ಸರಿಯಾದ ಸಮಯಕ್ಕೆ ಒಳ್ಳೆಯ ನಿರ್ಧಾರ ವನ್ನು ತೆಗೆದುಕೊಂಡು ಮುನ್ನಡೆದಾಗ ಗೆಲುವು ಕಟ್ಟಿಟ್ಟದ್ದು.
ಬರಹ:
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ
July 5, 2025
11:10 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಚನ್ನ ಬೋಂಡಾ
July 5, 2025
7:00 AM
by: ದಿವ್ಯ ಮಹೇಶ್
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಎಂ ಜಿ ಸಿದ್ದೇಶ ರಾಮ
July 4, 2025
11:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group