ಸುಳ್ಯ: ಸುಳ್ಯದ ಜ್ಯೋತಿಷಿ, ಸಂಘಟಕ, ಗಾಯಕ, ಚಿತ್ರನಿರ್ದೇಶಕ ಮತ್ತು ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ, ನಿರ್ಮಾಣ ಮಾಡಿ ಹಾಡಿದ ‘ಅಯ್ಯೋ ಮಳೆಯೇ’ ಮ್ಯೂಸಿಕ್ ಆಲ್ಬಮ್ ನ್ನು ಕುಂಬ್ರದ ಶಾರದಾ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಯವರ 150 ನೇ ಜಯಂತಿ ಮತ್ತು ದಸರಾ ಹಬ್ಬದ ಪ್ರಯುಕ್ತ ನಡೆದ ಸ್ನೇಹ ಸಮ್ಮಿಲನ-2019 ಸಾಹಿತ್ಯ ಸಮಾರಂಭದಲ್ಲಿ ಅಪ್ಪೆ ಟೀಚರ್ ಖ್ಯಾತಿಯ ಪ್ರಸಿದ್ಧ ಗಾಯಕ ಮಿಥುನ್ ರಾಜ್ ವಿದ್ಯಾಪುರ್ ರವರು ಬಿಡುಗಡೆ ಮಾಡಿದರು .
ಸಮಾರಂಭದಲ್ಲಿ ಶ್ರೀ ಪ್ರಶಾಂತ್ ರೈ ಮರವಂಜ, ಸುದಾನ ಶಾಲೆಯ ಸಂಚಾಲಕರಾದ ರೇ|ಫಾ|ವಿಜಯ್ ಹಾರ್ವಿನ್, ದ ಕ ಜಿಲ್ಲೆಯ ಮಾನವರು ಸಹೋದರರು ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ ಪುಣಚ, ಕವಯತ್ರಿ ಶಾಂತಾ ಕುಂಟಿನಿ, ಶಾರದಾ ವಿದ್ಯಾಲಯದ ಶಾಂತಾ ಮೇಡಂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಸುಳ್ಯದ ಚಂದನ ಸಾಹಿತ್ಯ ವೇದಿಕೆ, ಸುಳ್ಯದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಸಂಘ ಮತ್ತು ಮಾನವರು ಸಹೋದರರು ವೇದಿಕೆ ಹಾಗೂ ಪುತ್ತೂರು ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಈ ಸಮಾರಂಭ ನಡೆದಿತ್ತು. ನಂತರ ಅಯ್ಯೋ ಮಳೆಯೇ ಮ್ಯೂಸಿಕ್ ಆಲ್ಬಮ್ ನ್ನು ಪ್ರದರ್ಶನ ಮಾಡಲಾಯಿತು ಎಂದು ವಾಷ್ಠರ್ ತಿಳಿಸಿದರು .
Attachments area
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement