ಮಂಗಳೂರಿನಲ್ಲಿ ಮತ್ತೆ 4 ಮಂದಿಗೆ ಕೊರೊನಾ ವೈರಸ್ ಸೋಂಕು | ರಾಜ್ಯದಲ್ಲಿ40 ಪ್ರಕರಣ | ದೇಶದಲ್ಲಿ 519 ಪ್ರಕರಣ ಪತ್ತೆ

March 24, 2020
6:24 PM

ಮಂಗಳೂರು: ಕೊರೊನಾ ವೈರಸ್ ಸೋಂಕು ಮಂಗಳೂರಿನಲ್ಲಿ  ಮತ್ತೆ 4 ಮಂದಿಯಲ್ಲಿ  ಪತ್ತೆಯಾಗಿದ್ದು, ಒಟ್ಟು 5 ಮಂದಿಯಲ್ಲಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 6 ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 4 ಪ್ರಕರಣ ಮಂಗಳೂರಿನಲ್ಲಿ ಪತ್ತೆಯಾಗಿದೆ. ಇಂದು ಪತ್ತೆಯಾದ ಪ್ರಕರಣದಲ್ಲಿ ನಾಲ್ವರು ಕೇರಳ ಮೂಲದವರು ಎಂದು ತಿಳಿದುಬಂದಿದೆ. ಮೂವರು ದುಬೈನಿಂದ ಬಂದಿದ್ದು, ಒಬ್ಬರು ಸೌದಿಯಿಂದ ಬಂದವರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 40 ಪ್ರಕರಣ ಪತ್ತೆಯಾದರೆ ದೇಶದಲ್ಲಿ ಒಟ್ಟು 519 ಕೊರೊನಾ ವೈರಸ್ ಸೋಂಕಾದ ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ  ಒಟ್ಟು 10 ಮಂದಿ ಮೃತಪಟ್ಟಿದ್ದಾರೆ.

Advertisement
Advertisement

32 ವರ್ಷದ ವ್ಯಕ್ತಿ ಕಾಸರಗೋಡು ಮೂಲದವರಾಗಿದ್ದು, ಸ್ಪೈಸ್ ಜೆಟ್ ಮೂಲಕ ದುಬೈನಿಂದ ಮಾರ್ಚ್ 20ರಂದು ಮಂಗಳೂರಿಗೆ ಬಂದಿದ್ದರು. 42 ವರ್ಷದ ವ್ಯಕ್ತಿ ಮಾರ್ಚ್ 19ಕ್ಕೆ ಮಂಗಳೂರಿಗೆ ಬಂದಿದ್ದರು. ಮೂವರನ್ನು ನಗರದ ವೆನ್ ‌ಲಾಕ್‌ ಆಸ್ಪತ್ರೆಯಲ್ಲಿ ಹಾಗೂ ಒಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಜಿಲ್ಲಾಧಿಕಾರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಸ್ಪೈಸ್ ಜೆಟ್ ನಲ್ಲಿ ಬಂದಿದ್ದವರನ್ನು ತಪಾಸಣೆಗೆ ಒಳಪಡಿಸಿದ್ದರು. ಇದೀಗ ಈ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ. ಮಾರ್ಚ್ 22ರಂದು ಕೊರೊನಾ ಪಾಸಿಟಿವ್ ಬಂದಿದ್ದ ವ್ಯಕ್ತಿ ಪಯಣಿಸಿದ್ದ ವಿಮಾನದಲ್ಲೇ ಈ ನಾಲ್ವರು ಪಯಣಿಸಿದ್ದರು ಎಂಬುದು ತಿಳಿದುಬಂದಿದೆ.

ದೇಶದಲ್ಲಿ  ಮಹಾರಾಷ್ಟ್ರದಲ್ಲಿ  ಇದುವರೆಗೆ  101 ಪ್ರಕರಣ ಹಾಗೂ ಕೇರಳದಲ್ಲಿ95  ಪ್ರಕರಣ ಪತ್ತೆಯಾಗಿದ್ದು,  ಕರ್ನಾಟಕ 3 ನೇ ಸ್ಥಾನದಲ್ಲಿದೆ. ಒಟ್ಟಾರೆ  35 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದಿದ್ದಾರೆ.

ಬೆಂಗಳೂರಿನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಈವರೆಗೂ 14, 910 ಮಂದಿಯನ್ನು ಇರಿಸಲಾಗಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವುಗಳಿಂದ ಖಂಡಿತಾ ಅರಣ್ಯಕ್ಕೆ ಅಪಾಯವಿಲ್ಲ – ರಾಘವೇಶ್ವರ ಶ್ರೀ
July 23, 2025
11:31 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಮಳೆ ಮುಂದುವರಿಕೆ | ಉತ್ತರ ಭಾರತದ ಹಲವೆಡೆ ಭಾರಿ ಮಳೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ |
July 23, 2025
10:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-07-2025 | ನಿರಂತರ ಹನಿ ಮಳೆಗೆ ಕಾರಣವೇನು..? | ವಾಯುಭಾರ ಕುಸಿತದ ಪರಿಣಾಮವೂ…ಮಳೆಯ ಆತಂಕವೂ…!
July 23, 2025
3:57 PM
by: ಸಾಯಿಶೇಖರ್ ಕರಿಕಳ
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ | ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
July 23, 2025
2:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group