ಮಂಗಳೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಿಸಲು ಸಂಸದ ನಳಿನ್ ಕುಮಾರ್ ಕಟೀಲು ಅಧಿವೇಶನದಲ್ಲಿ ಒತ್ತಾಯ

July 2, 2019
7:45 PM

ಮಂಗಳೂರು: ಲೋಕಸಭಾ ಅಧಿವೇಶನದ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರು ವಿಮಾನ ನಿಲ್ದಾಣದ ರನ್-ವೇಯನ್ನು ವಿಸ್ತರಿಸುವ ವಿಚಾರದ ಬಗ್ಗೆ ಪ್ರಸ್ತಾಪಿಸಿದರು.

Advertisement
Advertisement

ಕನ್ನಡದಲ್ಲೇ ಮಾತನಾಡಿದ ನಳಿನ್ ಕುಮಾರ್ ಕಟೀಲು ಮಂಗಳೂರು ವಿಮಾನ ನಿಲ್ದಾಣದಲ್ಲಿ  ಭಾನುವಾರ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ತನ್ನ ಲಯವನ್ನು ತಪ್ಪಿ ರನ್-ವೇಯಿಂದ ಹೊರಗಡೆ ಜಾರಿ ಸಂಭವನೀಯ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಿಮಾನ ಇನ್ನೂ 20 ಅಡಿ ಮುಂದಕ್ಕೆ ಚಲಿಸಿದ್ದರೆ, ಈ ಹಿಂದೆ 2010ರ ಮೇ 22ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಕಿರಿದಾದ ರನ್- ವೇಯಿಂದಾಗಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದು ವಿಮಾನದಲ್ಲಿದ್ದ 158 ಪ್ರಯಾಣಿಕರು ಮೃತಪಟ್ಟಿದ್ದರು. ಇದಲ್ಲದೆ ಇದೇ ರೀತಿ 1981 ಆಗಸ್ಟ್ 19ರಂದು ಇಂಡಿಯನ್ ಏರ್ ಲೈನ್ಸ್ ವಿಮಾನವು ರನ್-ವೇಯಿಂದ ಜಾರಿ ಕಂದಕದ ಸಮೀಪ ನಿಂತಿತ್ತು. ಈ ಎಲ್ಲಾ ದುರ್ಘಟನೆಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಕಿರಿದಾದ ರನ್ ವೇ ಕಾರಣವಾಗಿರುತ್ತದೆ. ಈ ಕೂಡಲೇ ಕೇಂದ್ರ ಸರಕಾರವು ಮಂಗಳೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಹಾಗೂ ಈ ಘಟನೆಯ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು  ಸಂಸದರು ಆಗ್ರಹಿಸಿದರು.

Advertisement

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿನ್ನದ ದರದಲ್ಲಿ ಭಾರಿ ಇಳಿಕೆ | ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ..!
May 1, 2024
4:10 PM
by: The Rural Mirror ಸುದ್ದಿಜಾಲ
Rain Alert | ದೇಶದಲ್ಲಿ ಹೆಚ್ಚುತ್ತಿದೆ ಹವಾಮಾನದಲ್ಲಿ ವೈಪರೀತ್ಯ | ಚಂಡಮಾರುತ, ಬಲವಾದ ಗಾಳಿಯೊಂದಿಗೆ ಮಳೆ ಸಾಧ್ಯತೆ | ದಕ್ಷಿಣದಲ್ಲಿ ಬಿಸಿ ಶಾಖ ಮುಂದುವರಿಕೆ |
April 30, 2024
8:48 AM
by: The Rural Mirror ಸುದ್ದಿಜಾಲ
20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror