ಮಂಗಳೂರು ಹಿಂಸಾಚಾರ : ಉನ್ನತ ಮಟ್ಟದ ತನಿಖೆಗೆ ಡಿವೈಎಫ್ಐ ಒತ್ತಾಯ

December 19, 2019
10:06 PM

ಮಂಗಳೂರು:  ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ಕಾರಣವಾದ ಅಂಶಗಳ ಬಗ್ಗೆ ಬಲವಾದ ಗುಮಾನಿಗಳಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು. ತಕ್ಷಣವೇ ಪೊಲೀಸ್ ಕಮೀಷನರ್  ಅವರನ್ನು ಅಮಾನತುಗೊಳಿಸಿ ದಕ್ಷ ಅಧಿಕಾರಿಯೊಬ್ಬರನ್ನು  ಮಂಗಳೂರಿಗೆ ನೇಮಿಸಬೇಕು ಎಂದು ಅವರು ಮುಖ್ಯ ಮಂತ್ರಿಗಳನ್ನು ಡಿವೈಎಫ್ಐ ಅಧ್ಯಕ್ಷ  ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ನಿಷೇಧಾಜ್ಞೆ  ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದವರನ್ನು ಮನವೊಲಿಸುವ, ರಾಜ್ಯದ ವಿವಿದೆಡೆ ನಡೆದಂತೆ ಶಾಂತಿಯುತ ಧರಣಿಗೆ ಅವಕಾಶ ಮಾಡಿಕೊಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವ ಸಾಧ್ಯತೆಗಳಿದ್ದರೂ, ನಿಷೇಧಾಜ್ಞೆ ಉಲ್ಲಂಘನೆಯ ನೆಪವನ್ನೇ ಮುಂದಿಟ್ಟು ಪ್ರತಿಭಟನೆಗಾಗಿ ಗುಂಪು ಸೇರಿದ್ದ ಜನರ ಮೇಲೆ ತೀವ್ರತರದ ಬಲ ಪ್ರಯೋಗಿಸಿದ್ದು  ಸಂಘರ್ಷಕ್ಕೆ ಕಾರಣವಾಗಿದೆ.  ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಸಣ್ಣ ಭಾಗದಲ್ಲಷ್ಟೇ ನಡೆದ  ಹಿಂಸಾಚಾರ, ಕಲ್ಲು ತೂರಾಟವನ್ನು ದೊಡ್ಡ ಪ್ರಮಾಣದಲ್ಲಿದ್ದ ಪೊಲೀಸರಿಗೆ ಗೋಲಿಬಾರ್ ನಡೆಸದೆ ನಿಯಂತ್ರಿಸಲು ಸಾಕಷ್ಟು ಅವಕಾಶಗಳಿದ್ದವು. ಕಮೀಷನರ್ ಅವರ ಹಠಮಾರಿತನ, ತಪ್ಪು ಗ್ರಹಿಕೆ, ಪೂರ್ವಾಗ್ರಹಗಳು ಪ್ರತಿಣಭಟನಾಕಾರರ ಮೇಲೆ ಗುಂಡು ಹಾರಾಟಕ್ಕೆ, ಇಬ್ಬರು ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಎಚ್ಚರಿಕೆ – ಉಡುಪಿ, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ, ಗಂಟೆಗೆ 50 ಕಿ.ಮೀ. ವೇಗದ ಗಾಳಿ ಸಾಧ್ಯತೆ
July 18, 2026
8:36 AM
by: ದ ರೂರಲ್ ಮಿರರ್.ಕಾಂ
ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror