ಮಕ್ಕಳಿಗೆ ಇದು ಕೊರೊನಾ ಗೃಹಬಂಧನವಲ್ಲ | ಮಕ್ಕಳಿಗೆ ಈ ರಜೆ ಸಜೆಯೂ ಅಲ್ಲ…… ಸದ್ಭಳಕೆಯ ವಿದ್ಯೆ ತಿಳಿದಿರಬೇಕಷ್ಟೇ….!

April 17, 2020
4:23 PM

ಪ್ರತೀ ವರ್ಷ ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಹರುಷದ ಸಮಯವಾದರೆಅಮ್ಮಂದಿರಿಗೆ ಪರದಾಟ……

Advertisement

ಯಾಕೇ ಅಂತೀರಾ,

ತುಂಟ ಮಕ್ಕಳನ್ನು ಎರಡು ತಿಂಗಳು ಸುಧಾರಿಸೋದು ಅಂದರೆ ಸುಲಭದ ಮಾತಲ್ಲ. ಮನೆಯಲ್ಲಿನ ಪುಟಾಣಿ ಪಂಟರ್ ಗಳನ್ನು ಬ್ಯುಸಿಯಾಗಿರಿಸೋದೆ ಹೆತ್ತವಳ ಮುಂದಿರೋ ಟಾಸ್ಕ್ ಗಳಲ್ಲೊಂದು.ಕೊರೋನಾ ಮಹಾಮಾರಿಯಿಂದಾಗಿ ಈ ಭಾರಿಯಂತು ಪ್ರೈಮರಿ ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯದೇಇರುವುದರಿಂದ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಹತ್ತನೇ ತರಗತಿ, ಪಿ.ಯು.ಸಿ.ಯಲ್ಲಿ ಓದುತ್ತಿರುವ ಮಕ್ಕಳ ತಾಯಂದಿರಿಗೆ ಎಕ್ಸಾಂನ ವಿಷಯ ಬಹುವಾಗಿ ಕಾಡುತ್ತಿರುವುದಂತು ಸುಳ್ಳಲ್ಲ.

ಪ್ರತಿ ವರ್ಷದ ರಜೆಗಿಂತಲೂ ಈ ಸಲ ಭಿನ್ನವಾದ ವಾತಾವರಣ.ವಿಶ್ವದೆಲ್ಲೆಡೆ ಭಯದ ವಾತಾವರಣ ಮೂಡಿಸಿದ “ಕರೋನಾ”ದಿಂದಾಗಿ ಮಕ್ಕಳಿಗೆ ಬಹುಬೇಗ ರಜೆ ಸಿಕ್ಕಿದೆ.ಅದೂಅಲ್ಲದೆ “ಗೃಹಬಂಧನ” ಎನ್ನುವ ಅನಿಶ್ಚಿತತೆಯ ಸಮಯವಿದು.ಮನೆಯ ಹೊಸ್ತಿಲೆನ್ನುವ ಲಕ್ಷ್ಮಣರೇಖೆಯನ್ನುದಾಟಿ ಹೋಗುವ ಹಾಗಿಲ್ಲ. ನೆರೆಹೊರೆಯಮಕ್ಕಳೊಡನೆ ಜೊತೆಯಾಗಿ ಆಟ, ನೆಂಟರಿಷ್ಟರ ಮನೆಯ ಭೇಟಿ, ಪ್ರವಾಸವೆನ್ನುವ ಮೋಜಿಗೆಅವಕಾಶವಿಲ್ಲ. ಇನ್ನು ಶಾಪಿಂಗ್, ಸಿನೆಮಾ, ಹೋಟೆಲ್‍ಎನ್ನುವುದುದೂರದ ಮಾತು.ಮನೆಯ ನಾಲ್ಕು ಗೋಡೆಗಳ ಮಧ್ಯೆತುಂಟ ಮಕ್ಕಳೊಡನೆ ಅಮ್ಮನ ಬೆವರಿಳಿಯೋದಂತು ಖಚಿತ. ಬೇಸಿಗೆ ರಜೆಯಆರಂಭಕ್ಕೂ ಮೊದಲುಎಲ್ಲೆಲ್ಲಿ ಬೇಸಿಗೆ ಶಿಬಿರ, ಸ್ವಿಮ್ಮಿಂಗ್, ಡಾನ್ಸ್, ಮ್ಯೂಸಿಕ್ ಕ್ಲಾಸ್‍ಗಳಿವೆ ಎನ್ನುವ ಹುಡುಕಾಟ ಮಾಡುತ್ತಿದ್ದ ಹೆತ್ತವರು ಈ ಬಾರಿ ಮಕ್ಕಳನ್ನು ಮನೆಯಲ್ಲೇರಕ್ಷಣೆ ಮಾಡಬೇಕಾದ ಅನಿವಾರ್ಯತೆ.

ರಜೆ ಬಂದೊಡನೆ ಮಕ್ಕಳನ್ನು ದೂರದಅಜ್ಜಿ ಮನೆಗೋ ಅಥವಾ ನೆಂಟರಿಷ್ಟರ ಮನೆಗಳಿಗೆ ಕಳುಹಿಸುತ್ತಿದ್ದವರೂ ಮನೆಯೇ ಸುರಕ್ಷಿತತಾಣ ಎಂದುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸಮಯವನ್ನುಎಂಗೇಜ್ ಮಾಡೋದು ಮನೆಮಂದಿಯಕೈಯಲ್ಲಿದೆ.ಹೆಚ್ಚಾಗಿ ಪುಟ್ಟ ಮಕ್ಕಳಿಗೆ ಮನೆಯ ಹಿರಿಯರು ಮಾಡುವ ಕೆಲಸಗಳಲ್ಲಿ ಪಾಲ್ಗೊಳ್ಳಲು ಉತ್ಸಾಹಇರುತ್ತದೆ.ಅದನ್ನು ಗಮನಿಸಿ ಮನೆಯಹಿರಿಯರು, ಮಕ್ಕಳೊಡನೆ ಸೇರಿ ಕೆಲಸ ಮಾಡಿದರೆಕಿರಿಕಿರಿಎಂದು ಭಾವಿಸದೆ ಸ್ವಲ್ಪ ಉತ್ತೇಜಿಸಿ ಪ್ರೋತ್ಸಾಹಿಸಬೇಕಷ್ಟೆ…

Advertisement

ಮನೆಕೆಲಸಕ್ಕೆ ಜೊತೆಗೂಡಲಿ: 

ಮಕ್ಕಳ ಮನದಿಂದ ಶಾಲೆಗೆ ರಜೆಎಂದರೆ ಬೇಸರಅನ್ನೋದನ್ನು ಅಳಿಸಿ ಹಾಕಲು ಅವರನ್ನೂಜೊತೆಗೂಡಿಕೊಂಡು ಮನೆಕೆಲಸಗಳನ್ನು ಮಾಡಿಸೋದು ಮುಖ್ಯವಾಗಿಅಮ್ಮನಚಾಕಚಕ್ಯತೆಯಲ್ಲಿಅಡಗಿರುವ ವಿಷಯ.

ಮನೆಯ ಸಣ್ಣ ಪುಟ್ಟ ಕೆಲಸಗಳಾದ ಕಸ ಗುಡಿಸೋದು, ನೆಲ ಒರೆಸೋದು, ಜ್ಯೂಸ್‍ತಯಾರಿಸಲು ಹೇಳುವುದು, ಪಾತ್ರೆಗಳನ್ನು ಒಪ್ಪವಾಗಿ ಜೋಡಿಸಿ ಇಡಲು ಸಹಾಯ ಮಾಡುವಂತೆ ಪ್ರೇರೇಪಿಸೋದು, ಬಟ್ಟೆಒಣಗಿಸಲು ಹಾಕೋದು, ಮಡಚಿಇಡುವುದು ಹೀಗೆ ತಮ್ಮ ಕೆಲಸಗಳಿಗೆ ಸಹಾಯ ಮಾಡುವಂತೆ ಪ್ರೇರೇಪಿಸಿ. ಮಾಡಿದ ಕೆಲಸಗಳಿಗೆ ಶಹಭಾಸ್ ಹೇಳುವುದರಿಂದ ಅಥವಾ ಸಣ್ಣಪುಟ್ಟಗಿಫ್ಟ್‍ಕೊಡೋದರಿಂದ ಮಕ್ಕಳಿಗೆ ಕೆಲಸ ಮಾಡಲುಇನ್ನಷ್ಟು ಹುರುಪು ಬರುವುದು.

ಓದುವ ಹವ್ಯಾಸ:

ಬೇಸರ ಕಳೆಯಲು ಓದುವ ಹವ್ಯಾಸ ಬೆಳೆಸಿಕೊಂಡರೆ ಬಹು ಒಳ್ಳೆಯದು.ಮಕ್ಕಳ ಜೊತೆ ತಾಯಿಯೂ ಪುಸ್ತಕಗಳನ್ನು ಓದುತ್ತಾ ಅವರೊಡನೆ ಆ ಪುಸ್ತಕದ ವಿಷಯಕ್ಕೆ ಸಂಭಂದಿಸಿದ ವಿಷಯವನ್ನು ಹಂಚಿಕೊಂಡರೆ ಮಕ್ಕಳಿಗೂ ಓದಲು ಉತ್ತೇಜನ ದೊರಕುವುದು.ಕತೆ ಕಾದಂಬರಿಗಳ ಪುಸ್ತಕಗಳು ಆನ್‍ಲೈನ್‍ಲ್ಲಿಓದಲು ಲಭ್ಯ.ಹೀಗಾಗಿ ಹೊರಹೋಗಲುಆಗದ ಈ ಪರಿಸ್ಥಿತಿಯಲ್ಲಿ ಮನೆಯಲ್ಲೇ ಕುಳಿತುಕೊಂಡು ಜ್ಞಾನಾರ್ಜನೆ ಸಂಪಾದಿಸಿಕೊಳ್ಳಬಹುದು.

Advertisement

ಟಿವಿ- ಮೊಬೈಲ್ ಗೂ ಸಮಯಕೊಡಿ:

ಮಕ್ಕಳಿಗೆ ಟಿವಿ ಮೊಬೈಲ್‍ ಕೊಡಲೇ ಬೇಡಿ ಎನ್ನುವ ಹಾಗಿಲ್ಲ. ಹೀಗಾಗಿ ಟಿವಿ, ಮೊಬೈಲ್ ನೋಡಲು ಸಮಯ ನಿಗದಿಪಡಿಸಿ.ಲಾಕ್‍ಡೌನ್‍ನ ನಡುವೆ ಮನಸ್ಸು ಹಗುರವಾಗಲೆಂದು ಮಹಾಭಾರತ, ರಾಮಾಯಣ, ಚಾಣಾಕ್ಯದಂತಹ ಒಳ್ಳೆಯ ಕತೆಗಳನ್ನು ದೂರದರ್ಶನದಲ್ಲಿ ಪ್ರಸಾರಣವಾಗುತ್ತಿದೆ. ಇದಲ್ಲದೆ ಮನೆಮಂದಿ ಎಲ್ಲಾಒಟ್ಟಿಗೆ ಕುಳಿತು ನೋಡುವಂತಹ ಸಿನೇಮಾ ಗಳನ್ನೂ ವೀಕ್ಷಿಸಬಹುದು.

ಅಮ್ಮನೇ ಮೊದಲ ಗುರುವಾಗಲಿ:

ಪ್ರಸ್ತುತ ಸಂಧರ್ಭದಲ್ಲಿ ಯಾವ ತರಗತಿಗಳಿಗೂ ಮಕ್ಕಳನ್ನು ಕಲಿಸುವಂತಿಲ್ಲ. ಹೀಗಾಗಿ ತಾಯಿಯಾದವಳೇ ಮೊದಲ ಗುರುಆಗಬೇಕಾದ ಅನಿವಾರ್ಯತೆ. ಮಕ್ಕಳ ಮನೋಭಿಲಾಷೆಗೆ ತಕ್ಕಂತಹ ನಾನಾ ಕ್ರಾಫ್ಟ್, ಪೈಟಿಂಗ್‍ಗಳು ಅಂತರ್ಜಾಲದಲ್ಲಿ ಹುಡುಕಿದರೆ ಲಭ್ಯ.ಅನಾವಶ್ಯಕ ವಿಡಿಯೋಗಳನ್ನು ನೋಡುತ್ತಾ ಸಮಯ ಕಳೆಯುವುದರ ಬದಲು ಮಕ್ಕಳ ಬುದ್ದಿಮತ್ತೆಗೆ ಕೆಲಸಕೊಡುವಂತಹ ಸದಬಿರುಚಿಯ ವಿಡಿಯೋಗಳನ್ನು ತೋರಿಸಿ ಚಿತ್ರ ಬಿಡಿಸುವಂತೆ ಪ್ರೇರೇಪಿಸಿ.ಇನ್ನೂ ಸ್ವಲ್ಪದೊಡ್ಡ ಮಕ್ಕಳಾದರೆ ಸೀರೆಗೆಗೊಂಡೆ ಹಾಕುವುದು, ಸ್ಟಿಚ್ಚಿಂಗ್, ಮ್ಯಾಟ್‍ತಯಾರಿಕೆ, ಅಡಿಗೆ ಕಲಿಸುವುದು ಹೀಗೆ ಅಮ್ಮಂದಿರು ಮಕ್ಕಳ ಜೊತೆಗೂಡಿ ಕೆಲಸಮಾಡುವುದರಿಂದ ಬ್ಯುಸಿಯಾಗಿರುವಂತೆ ನೋಡಿಕೊಳ್ಳಬಹುದಾಗಿದೆ.
ಮಕ್ಕಳ ಓದಿಗೂ ಅಮ್ಮನಾದವಳು ಸಮಯ ಮೀಸಲಿಡುವುದುಅತೀಅಗತ್ಯ. ಕೋಪಿ ಬರೆಯಿಸುವುದು, ಕನ್ನಡ ,ಇಂಗ್ಲಿಷ್, ಹಿಂದಿ ಹೀಗೆ ಆಯಾ ವಯಸ್ಸಿಗೆ ಅನುಗುಣವಾಗಿ ಪುಸ್ತಕಗಳನ್ನು ಓದಿಸುವುದರಿಂದ ಭಾಷಾಜ್ಞಾನ ಹೆಚ್ಚಾಗುವುದು. ಇದರಿಂದ ಮಕ್ಕಳಿಗೆ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಮರೆತು ಹೋಗದು.

ಮನೆಯಲ್ಲೇಉದಯವಾಗಲಿ ಪುಟಾಣಿ ಪೇಯಿಂಟರ್

Advertisement

ಮನೆಯಲ್ಲಿರುವ ತುಳಸಿ ಗಿಡದಕಟ್ಟೆಅಥವಾ ಮುಂಭಾಗದಗೇಟ್ ಪೇಯಿಂಟ್ ಕಳೆದು ಕಳೆಗುಂದಿದೆ ಎಂದಾದರೆ ನಿಮ್ಮ ಮಕ್ಕಳ ಕೈಯಿಂದಲೇ ಪೇಯಿಂಟಿಂಗ್ ಮಾಡಿಸಬಹುದು.
ಅದಕ್ಕೆ ಬೇಕಾದ ಪೇಯಿಂಟ್, ಬ್ರಷ್‍ತಂದರೆ ಮನೆಯ ಹಿರಿಯರ ಮುತುವರ್ಜಿಯಲ್ಲಿ ಮಕ್ಕಳೇ ಪೇಯಿಂಟರ್ ಆಗಬಹುದು.ಕೈ, ಮುಖಕ್ಕೆ ಪೇಯಿಂಟ್ ಹಿಡಿದಿದೆಎಂದಾದರೆತೆಂಗಿನಎಣ್ಣೆ, ಟರ್ಪಂಟೈನ್ ಹಚ್ಚುವುದರ ಮೂಲಕ ತೆಗೆಯಬಹುದಾಗಿದೆ. ಹೊಸ ಹೊಸ ಟಾಸ್ಕ್ ಮಕ್ಕಳಲ್ಲಿ ಹೊಸ ಹುರುಪು ಹೆಚ್ಚಿಸುವುದು.

ಒಳಾಂಗಣ ಆಟ

ನಗರದಲ್ಲಿರುವ ಮಕ್ಕಳು ಮನೆಯ ಹೊರಗಡೆಅಥವಾ ಪಾರ್ಕ್‍ಗೆಓರಗೆಯವರೊಡನೆ ಸೇರಿಆಡುವಂತಿಲ್ಲ. ಹೀಗಾಗಿ ಏನೇ ಆಟವಾಡುದಿದ್ದರೂ ನಾಲ್ಕು ಗೋಡೆಗಳ ಮಧ್ಯೆಯೇಆಡಬೇಕಷ್ಟೆ.ಕೇರಂ, ಚೆನ್ನೆ ಮಣೆ ಆಟ, ಕಣ್ಣ ಮುಚ್ಚಾಲೆ, ಮನೆ ಮಂದಿ ಎಲ್ಲಾ ಸೇರಿ ಹುಲಿ ದನ ಹೀಗೆ ನಾನಾ ಆಟಗಳನ್ನು ಮಕ್ಕಳ ಜೊತೆಗೂಡಿಆಡುವ ಸಮಯವಿದು.
ಹಳ್ಳಿ ಪರಿಸರದಲ್ಲಿ ವಾಸಿಸುವುದಾದರೆ ಮಕ್ಕಳನ್ನೂ ಕೃಷಿ ಕೆಲಸಗಳಲ್ಲಿ, ತರಕಾರಿ ಮಾಡೋದರಲ್ಲಿ, ಹಸುಗಳ ಆರೈಕೆಯ ಕೆಲಸ, ಹಪ್ಪಳ ಸೆಂಡಿಗೆಯಂತಹ ಕೆಲಸಗಳಲ್ಲಿ ಜೊತೆಗೂಡಿ ಮಾಡುವಂತೆಪ್ರೋತ್ಸಾಹಿಸುವುದುಉತ್ತಮ.ಸ್ಥಳ, ಮಕ್ಕಳ ವಯೋಮಿತಿ, ಆಸಕ್ತಿಗೆ ತಕ್ಕಂತಹ ಆಟ ಪಾಠ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸುವಂತೆ ಮಾಡುವುದರಿಂದರಜೆಆರಾಮದಾಯಕವಾಗಿ ಮುಗಿದು ಹೊಸ ಹರುಷತರುವುದು.

  • ವಂದನಾರವಿ ಕೆ.ವೈ.ವೇಣೂರು.
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಎಂ ಜಿ ಸಿದ್ದೇಶ ರಾಮ
July 4, 2025
11:14 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಸಾನ್ವಿ ದೊಡ್ಡಮನೆ
July 4, 2025
10:51 PM
by: ದ ರೂರಲ್ ಮಿರರ್.ಕಾಂ
ಜಾತಿಯ ಶುದ್ಧತೆ ಮತ್ತು ನೈತಿಕ ಮುಕ್ತತೆ ಎರಡು ಜೊತೆಯಲ್ಲಿ ಸಾಧ್ಯವಿಲ್ಲ
July 4, 2025
9:02 PM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅಕುಲ್ ಕಮಿಲ
July 1, 2025
1:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group