ಮಕ್ಕಳು ಗದ್ದೆ ಇಳಿಯುವುದೇ ಸಂಭ್ರಮ…. ಮಣ್ಣಿನ ಪಾಠ ಬದುಕಿಗೂ ಅಂಟಲಿ…

July 8, 2019
8:00 AM

 ಕೈ ಕೆಸರಾದರೆ ಬಾಯಿ ಮೊಸರು…. , ಲೇಖನಿ ಹಿಡಿಯುವ ಕೈಗಳು ಹಾರೆ ಹಿಡಿದವು…. , ಗದ್ದೆಯಲ್ಲಿ ಸಂಭ್ರಮಿಸಿದ ಪುಟಾಣಿಗಳು…. ಇದೆಲ್ಲಾ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತವೆ. ಕಾಲೇಜು ಮುಗಿದ ಬಳಿಕ ಶೇಕಡಾವಾರು ಗಮನಿಸಿದರೆ ಕೃಷಿಯ ಕಡೆಗೆ, ಮಣ್ಣಿನ ಕಡೆಗೆ ಮರಳುವ ಸಂಖ್ಯೆ ವಿರಳವಾದರೂ ಶಾಲೆ, ಕಾಲೇಜುಗಳ ಈ ಆಸಕ್ತಿ, ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವುದು ಭವಿಷ್ಯದ ಬಗ್ಗೆ ಆಶಾವಾದವನ್ನು  ಮೂಡಿಸುತ್ತದೆ.

Advertisement
Advertisement

 

Advertisement

ಸುಬ್ರಹ್ಮಣ್ಯದ ಎಸ್‍ಎಸ್‍ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ  ಭಾಗವಹಿಸಿದರು. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಉತ್ತ ಗದ್ದೆಯಲ್ಲಿ ನೇಜಿ ನಡುವ ಪ್ರಕ್ರಿಯೆ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದರು. ಹಿರಿಯರು ಹೇಳಿದ ಓ ಬೇಲೆ ಜನಪದ ಪದ್ಯವನ್ನು ಹಾಡುತ್ತಾ ವಿದ್ಯಾರ್ಥಿಗಳು ಸಂತಸದಿಂದ ಭತ್ತ ನಾಟಿ ಮಾಡಿದರು. ಬೇಸಾಯ ಚಟುವಟಿಕೆ ಮರೆಯುತ್ತಿರುವ ಈ ಕಾಲದಲ್ಲಿ ಭತ್ತ ನಾಟಿ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಈ ಪ್ರಾತ್ಯಕ್ಷಿಕೆಯುಕ್ತ ಪಾಠ ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿ ನೀಡುವಲ್ಲಿ ಸಹಕಾರಿಯಾಯಿತು.ಅಲ್ಲದೆ ಮಾದರಿಯಾಗಿ ಕಂಡು ಬಂತು.

ನೇಜಿ ನಡುವ ಮೂಲಕ ಉದ್ಘಾಟನೆ:
ಎನ್‍ಎನ್‍ಎಸ್ ಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಕೈಯಲ್ಲಿ ಪೆನ್ನು,ಪುಸ್ತಕ ಹಿಡಿದು ಬರೆಯುವುದರ ಮೂಲಕ ಪಾಠಪ್ರವಚನ ಆಲಿಸುವ ಕಾಲೇಜು ವಿದ್ಯಾರ್ಥಿಗಳು, ಸಾಂಪ್ರದಾಯಿಕ ಉಡುಗೆ ಧರಿಸಿ ಕೆಸರಿನ ಗದ್ದೆಗಿಳಿದು ನೇಜಿ ನಟ್ಟು ಕೈಕೆಸರಾದರೆ ಬಾಯಿ ಮೊಸರು ಎಂಬ ಪಾಠವನ್ನು ಕಲಿತರು. ರೈತನ ನಿಜ ಜೀವನದ ಕಠಿಣ ಪರಿಶ್ರಮದ ಕುರಿತು ನೈಜ ಅನುಭವ ಪಡೆದುಕೊಂಡರು.ಈ ಕಾರ್ಯದ ಮೂಲಕ ನೇಗಿಲ ಯೋಗಿಯ ನೈಜ ಶ್ರಮ ವಿದ್ಯಾರ್ಥಿಗಳಿಗೆ ತಿಳಿಯಿತು.

Advertisement

ಭಾರತವು ಕೃಷಿ ಪ್ರಧಾನವಾದ ದೇಶ.ರೈತರು ದೇಶದ ಬೆನ್ನೆಲುಬು. ಆದರೆ ಇಂದು ಗದ್ದೆಗಳು ಮಾಯವಾಗಿದೆ. ಗದ್ದೆ ಬೇಸಾಯ ಮೂಲೆಗುಂಪಾಗುತ್ತಿದೆ. ನಗರ ಪ್ರದೇಶದಲ್ಲಿ ಗದ್ದೆಗಳಲ್ಲಿ ದೊಡ್ಡದೊಡ್ಡ ಕಟ್ಟಡಗಳು ತಲೆಎತ್ತಿವೆ.ಅಲ್ಲದೆ ಗದ್ದೆಗಳು ತೋಟಗಳಾಗಿವೆ. ಗ್ರಾಮೀಣ ಭಾಗದಲ್ಲಿ ವ್ಯವಸಾಯದ ಖುಷಿ ಸ್ವಲ್ಪ ಮಟ್ಟಿಗೆ ಇದೆ. ಬೇಸಾಯದ ನೈಜ ಸಂತಸ ಹಾಗೂ ಆವಶ್ಯಕತೆಯ ಕುರಿತು ಯುವ ಪೀಳಿಗೆ ಜಾಗೃತರಾಗಬೇಕು.ಅಲ್ಲದೆ ಅನ್ನದಾತನ ನಿಜ ವೃತ್ತಾಂತ ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಯಬೇಕು. ಗದ್ದೆಯ ಮಣ್ಣು ದೇಹಾರೋಗ್ಯ ವೃದ್ಧಿಗೆ ಅತ್ಯುತ್ತಮ ಔಷಧಿ ಎನ್ನುವ ಅರಿವು ಯುವಜನಾಂಗದಲ್ಲಿ ಮೂಡಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಸೋಮಶೇಖರ ನಾಯಕ್ ಹೇಳಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ಕೃಷಿಯತ್ತ ಆಕರ್ಷಿತರಾಗಬೇಕು.ಅಲ್ಲದೆ ರೈತರ ಕಷ್ಟ ಮತ್ತು ಪರಿಶ್ರಮದ ಅರಿವು ಎಳವೆಯಲ್ಲಿ ತಿಳಿದರೆ ಭವಿಷ್ಯದಲ್ಲಿ ಕೃಷಿಯತ್ತ ಕೂಡಾ ಆಧುನಿಕ ಯುವ ಜನಾಂಗ ಚಿತ್ತ ಹರಿಸಲು ಸಹಕಾರಿಯಾಗುತ್ತದೆ. ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಈ ಬಾರಿ ವಿಶೇಷವಾಗಿ ಗದ್ದೆ ನಾಟಿ ಮಾಡುವ ಅವಕಾಶ ದೊರಕಿದೆ.ಸೇವೆಯಿಂದ ಸವಿಜೇನು ಪಡೆಯುವ ಈ ವಿದ್ಯಾರ್ಥಿಗಳು ಬದುಕಿನಲ್ಲಿ ಕೃಷಿಯತ್ತ ಕೂಡಾ ತಮ್ಮ ಮನಸನ್ನು ಒಲಿಸಿಕೊಳ್ಳಲು ಈ ಕಾರ್ಯಕ್ರಮ ಬುನಾದಿಯಾಗಲಿ ಎಂದರು.

Advertisement

ಹಿರಿಯರು ಭತ್ತ ನಾಟಿಯ ವೇಳೆ ಓಬೇಲೆ.. ಹಾಡನ್ನು ಹಾಡುತ್ತಿದ್ದರು. ಸೇವಾ ಕೈಂಕರ್ಯದಲ್ಲಿ ಇದನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೆ ಹಾಡುತ್ತಿದ್ದರು.ಈ ರೀತಿಯಾಗಿ ಈ ಹಾಡು ಈ ಪರಿಸರದಲ್ಲಿ ಅಧಿಕವಾಗಿ ಅನುರಣಿಸಿತು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 110ಕ್ಕೂ ಅಧಿಕ ವಿದ್ಯಾರ್ಥಿಗಳು ಕೆಸರ ಗದ್ದೆಯಲ್ಲಿ ನಾಟಿ ಮಾಡಿದರು. ಕಾಲೇಜಿನ ಎನ್‍ಎಸ್‍ಎಸ್ ಯೋಜನಾಧಿಕಾರಿ ಸೋಮಶೇಖರ ನಾಯಕ್, ಸಹಯೋಜನಾಧಿಕಾರಿ ಸೌಮ್ಯಾ ದಿನೇಶ್, ಹಿರಿಯ ಉಪನ್ಯಾಸಕ ಮೋಹನ ಗೌಡ.ಎ, ಜಮೀನಿನ ಮಾಲಕ ರೈತ ರಾಮಣ್ಣ ಪರ್ವತಮುಖಿ, ವೆಂಕಮ್ಮ ರಾಮಣ್ಣ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಮೋನಪ್ಪ ಮಾನಾಡು, ರವಿ ನಂದನ್, ಪದ್ಮನಾಭ ಪರ್ವತಮುಖಿ ಗದ್ದೆಗಿಳಿದು ನಾಟಿ ಮಾಡಿ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.

ಉಪನ್ಯಾಸಕ ರತ್ನಾಕರ.ಎಸ್, ಕಾಲೇಜಿನ ಸಿಬ್ಬಂಧಿ ಶಶಿಧರ್, ಸ್ಥಳಿಯರಾದ ನಾರಾಯಣ ಮಾನಾಡು ಸಹಕರಿಸಿದರು.

Advertisement

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror