ಮಜ್ಜಿಗೆ ಅನ್ನದಲ್ಲಿ ಈರುಳ್ಳಿಯನ್ನು ತಿಂದರೆ ನಡೆಯುವ ಅದ್ಭುತಗಳನ್ನು ತಿಳಿದರೆ ಯಾರೂ ತಿನ್ನದೆ ಇರಲಾರರು..!!

March 24, 2023
11:11 AM

ಈರುಳ್ಳಿ ಮಾಡುವಷ್ಟು ಒಳಿತನ್ನು ತಾಯಿಯೂ ಮಾಡುವುದಿಲ್ಲ ಅನ್ನೋ ಮಾತಿದೆ. ಈರುಳ್ಳಿ ಸೇವನೆಯಿಂದ ಶರೀರಕ್ಕೆ ಶೀತವಾಗುತ್ತದೆ ಎನ್ನುತ್ತಾರೆ. ಆದರೆ ಮಜ್ಜಿಗೆಯಲ್ಲಿ ಸ್ವಲ್ಪ ಈರುಳ್ಳಿಯನ್ನು ಸೇವಿಸಿದರೆ ಸಂಪೂರ್ಣ ಆರೋಗ್ಯಕ್ಕೆ ಒಳ್ಳೆಯದಾಗುವುದೆಂದು ಪರಿಶೋಧನೆಯಲ್ಲಿ ತಿಳಿದುಬಂದಿದೆ. ಮಜ್ಜಿಗೆ ಅಥವಾ ಮೊಸರಿನಲ್ಲಿ ಈರುಳ್ಳಿಯನ್ನು ಬೆರೆಸಿ ಸೇವಿಸಿದರೆ ಶರೀರಕ್ಕೆ ಆರೋಗ್ಯ ನೀಡುವ ಹಲವು ಪೋಷಕಾಂಶಗಳು ನೀಡುತ್ತದೆ ಎಂದು ತಿಳಿದಿದೆ. ಅಷ್ಟೇ ಅಲ್ಲದೆ ಈರುಳ್ಳಿಯನ್ನು ಕ್ರಮವಾಗಿ ಸೇವಿಸುವವರಿಗೆ ಮೂಳೆಗಳು ದೃಢವಾಗಿರುತ್ತವೆಯಂತೆ. ಎರಡೂ ಹೊತ್ತಿನ ಊಟದಲ್ಲಿ ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ಸೇವಿಸುವವರು ನಿತ್ಯ ಆರೋಗ್ಯವಂತರಾಗಿ ಮುಂದುವರೆಯುತ್ತಾರೆ. ಇನ್ನು ನಿಮಗೆ ತಿಳಿಯದ ಎಷ್ಟೋ ಆರೋಗ್ಯ ಪ್ರಯೋಜನಗಳನ್ನು ಒಮ್ಮೆ ನೋಡಿ.

Advertisement

🌹 ಈರುಳ್ಳಿಯಲ್ಲಿ ಆಂಟಿಬಯೋಟಿಕ್, ಆಂಟಿ ಸೆಪ್ಟಿಕ್, ಆಂಟಿ ಮೈಕ್ರೋಬಿಯಾಲ್ ಲಕ್ಷಣಗಳು ಇರುವುದರಿಂದ ಇನ್ಫೆಕ್ಷನ್ ಬರದಂತೆ ರಕ್ಷಿಸುತ್ತದೆ.

Advertisement

🌹 ಈರುಳ್ಳಿಯಲ್ಲಿ ಸಲ್ಫರ್, ಫೈಬರ್, ಪೊಟಾಷಿಯಂ, ವಿಟಮಿನ್ ಬಿ, ವಿಟಮಿನ್ ಸಿ ಯತೇಚ್ಚವಾಗಿರುತ್ತವೆ. ಹಾಗೆಯೇ ಕೊಬ್ಬು, ಕೊಲೆಸ್ಟ್ರಾಲ್ ಹಾಗೂ ಸೊಡಿಯಂ ಕಡಿಮೆಯಾಗಿರುತ್ತದೆ.

🌹 ಈರುಳ್ಳಿ ರಸ ಮತ್ತು ಜೇನು ತುಪ್ಪದ ಮಿಶ್ರಣವನ್ನು ತೆಗೆದು ಕೊಂಡರೆ ಜ್ವರ, ಸಾಧಾರಣ ನೆಗಡಿ, ಕೆಮ್ಮು, ಗಂಟಲು ನೋವು, ಅಲರ್ಜಿಯಂತಹ ಸಮಸ್ಯೆಗಳಿಗೆ ತಕ್ಷಣ ಉಪಶಮನವಾಗುತ್ತದೆ.

Advertisement

🌹 ಈರುಳ್ಳಿಯ ತುಂಡನ್ನು ಹಣೆಯ ಮೇಲಿಟ್ಟರೆ ಜ್ವರದಿಂದ ಬರುವ ದುಷ್ಪ್ರಭಾವಗಳಿಗೆ ವಿರುದ್ಧವಾಗಿ ಕೆಲಸ ನಿರ್ವಹಿಸುತ್ತದೆ.

🌹 ಈರುಳ್ಳಿಯ ವಾಸನೆ ಸೇವನೆಯಿಂದ ಮೂಗಿನಿಂದ ಬರುವ ರಕ್ತಸ್ರಾವವನ್ನು ನಿಲ್ಲಿಸ ಬಹುದು. ಅಥವಾ ಅತಿಯಾಗಿ ರಕ್ತ ಸೋರುವುದನ್ನು ಕಡಿಮೆ ಮಾಡಬಹುದು.

🌹ಈರುಳ್ಳಿ ನಿದ್ರಾಹೀನತೆ ಅಥವಾ ನಿದ್ರೆ ಖಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ತಪ್ಪದೆ ಒಳ್ಳೆಯ ನಿದ್ರೆಯನ್ನು ತರುತ್ತದೆ.

🌹 ಜೀರ್ಣಕ್ರಿಯೆಯ ಸಮಸ್ಯೆಗಳಿದ್ದಲ್ಲಿ ಈರುಳ್ಳಿಯನ್ನು ತಿಂದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೀರ್ಣ ರಸಗಳ ಉತ್ಪತ್ತಿಗೆ ಸಹಾಯವಾಗುತ್ತದೆ.

🌹 ಈರುಳ್ಳಿ ರಸವನ್ನು ಸುಟ್ಟ ಚರ್ಮ ಅಥವಾ ಕ್ರಿಮಿಗಳ ಕಡಿತ ಅಥವಾ ಜೇನು ನೊಣಗಳ ಕಡಿತವನ್ನು ಗುಣಪಡಿಸುವಲ್ಲಿ ಸಹಾಯವಾಗುತ್ತದೆ.

Advertisement

🌹 ಈರುಳ್ಳಿ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯವಾಗುತ್ತದೆ. ಇದು ತಲೆ, ಕತ್ತು ಹಾಗೂ ದೊಡ್ಡಕರುಳು ಕ್ಯಾನ್ಸರ್ ಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತದೆ.

🌹 ಪ್ರತಿ ದಿನ ಆಹಾರದಲ್ಲಿ ಈರುಳ್ಳಿಯನ್ನು ತೆಗೆದು ಕೊಂಡರೆ ಅಸ್ಟಿಯೋ ಫೋರೋಸಿಸ್ ಮತ್ತು ಅಥೆರೋಸ್ಕೆರೋಸಿಸ್ ನಿಂದ ರಕ್ಷಣೆ ನೀಡುತ್ತದೆ.

🌹 ಈರುಳ್ಳಿ ದೇಹದಲ್ಲಿ ಇನ್ಸುಲಿನ್ ಹಂತವನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿ ಸಕ್ಕರೆ ಹಂತವನ್ನು ನಿಯಂತ್ರಿಸುವುದರ ಮೂಲಕ ಮಧುಮೇಹ ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ.

🌹 ಪ್ರತಿದಿನ ಈರುಳ್ಳಿ ತಿಂದರೆ ಹೃದಯ ಖಾಯಿಲೆಗೆ ಕಾರಣವಾದ ಕೆಟ್ಟ ಕೊಲೆಸ್ಟ್ರಾಲ್ ನಶಿಸುತ್ತದೆ, ಅಷ್ಟೇ ಅಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಕೊರೋನರೀ ಖಾಯಲೆಯಿಂದ ನಮ್ಮನ್ನು ರಕ್ಷಿಸುತ್ತದೆ.

🌹 ಕೀಲುಗಳಲ್ಲಿ ಆರ್ಥರೈಟಿಸ್ ಕಡಿಮೆ ಮಾಡಲು ಈರುಳ್ಳಿ ಸಹಾಯವಾಗುತ್ತದೆ.

Advertisement

🌹 ಎಳ್ಳೆಣ್ಣೆ ಅಥವಾ ಅರಳೆಣ್ಣೆಯಲ್ಲಿ ಈರುಳ್ಳಿಯನ್ನು ಬೇಯಿಸಿ ಉಪಯೋಗಿಸಿದರೆ ಮೈ ನೋವು ಮಾಯವಾಗುತ್ತದೆ.

🌹ಈರುಳ್ಳಿ ರಸದಲ್ಲಿ ಹರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಅಥವಾ ಪಿಗ್ಮೆಂಟ್ ತೊಲಗಿಸಲು ಸಹಾಯವಾಗುತ್ತದೆ.

🌹 ಈರುಳ್ಳಿ ರಸವನ್ನು ಕಿವಿ ಮತ್ತು ಕಣ್ಣಿನ ಸಮಸ್ಯೆಗಳನ್ನು ಗುಣಪಡಿಸಲು ಉಪಯೋಗಿಸುತ್ತಾರೆ.

🌹 ಹಲ್ಲು ನೋವು ಮತ್ತು ಹುಳುಕು ಹಲ್ಲಿನ ನೋವು ನಿವಾರಣೆಗೆ ಈರುಳ್ಳಿ ರಸವನ್ನು ಉಪಯೋಗಿಸುತ್ತಾರೆ.

🌹 ಕೆಲವು ವಿಧವಾದ ಹುಟ್ಟು ಮಚ್ಚೆಗಳಿಗೆ ಈರುಳ್ಳಿ ರಸವನ್ನು ಲೇಪಿಸುವುದರಿಂದ ಬಹುಮಟ್ಟಿಗೆ ತೊಲಗಿಸಬಹುದು.

Advertisement

🌹ಈರುಳ್ಳಿಯನ್ನು ಉಪಯೊಗಿಸುವುದರಿಂದ ಒಳ್ಳೆಯ ಜ್ಞಾಪಕ ಶಕ್ತಿ ಮತ್ತು ಬಲವಾದ ನಾಡಿ ವ್ಯವಸ್ಥೆ ಉಂಟಾಗುತ್ತದೆ.

🌹 ಈರುಳ್ಳಿ ರಸವನ್ನು ತಲೆ ಮೇಲಿನ ಚರ್ಮಕ್ಕೆ ಲೇಪಿಸಿದರೆ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.

ಈರುಳ್ಳಿಯಿಂದ ಸಿಗುವ ಈ ಅಗಾಧವಾದ ಪ್ರಯೋಜನದ ಬಗ್ಗೆ ಹೊಸಪೇಟೆಯ ಕೆ, ಶಾಂತರಾಜ್, ಮೇದಾರ್ ಅವರು ಆಯುರ್ವೇದ ಗ್ರಂಥಗಳಿಂದ ಸಂಗ್ರಹಿಸಿದ ಮಾಹಿತಿಯಿದು.

 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಂಜದಲ್ಲಿ ಜನರೇಟರ್ ಕ್ಯಾಂಪ್ | ಆ. 22, 23ರಂದು ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್
August 20, 2025
9:37 PM
by: ದ ರೂರಲ್ ಮಿರರ್.ಕಾಂ
ಎಲ್ಲೇ ಇದ್ದರೂ ಸ್ವಭಾಷೆ, ಸಂಸ್ಕೃತಿ ಮರೆಯಬೇಡಿ : ರಾಘವೇಶ್ವರ ಶ್ರೀ
August 20, 2025
9:31 PM
by: The Rural Mirror ಸುದ್ದಿಜಾಲ
ಮುಂದುವರಿದ ಮಳೆ ಆತಂಕ | ರಾಜ್ಯದಲ್ಲೂ ನಿರಂತರ ಮಳೆ | ಜನಜೀವನ ಅಸ್ತವ್ಯಸ್ತ
August 20, 2025
9:25 PM
by: The Rural Mirror ಸುದ್ದಿಜಾಲ
ಬಿಮಾ ಯೋಜನೆಗಳ ನೋಂದಣಿಗೆ ಆ.25 ರ ವರೆಗೆ ಅಭಿಯಾನ
August 20, 2025
8:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group