ಪುತ್ತೂರು: ಪುತ್ತೂರು ತಾಲೂಕಿನ ಮಠಂತಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸನಾತನ ಸಂಸ್ಥೆಯ ವತಿಯಿಂದ ನವರಾತ್ರಿಯ ಪ್ರಯುಕ್ತ ಧಾರ್ಮಿಕ ಪ್ರವಚನ ನಡೆಯಿತು.
ಸನಾತನ ಸಂಸ್ಥೆಯ ಚೇತನಾ ಮಾತನಾಡಿ “ದೇವಿಯನ್ನು ವಿವಿಧ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಕುಲದೇವಿಯಾಗಿ,ಗ್ರಾಮದೇವಿಯಾಗಿ ,ಹಾಗೂ ಶಕ್ತಿ ಪೀಠಗಳಲ್ಲಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ನವರಾತ್ರಿ ಇದು ದೇವಿಯ ಉಪಾಸನೆ ಮಾಡುವ ಹಿಂದೂ ಧರ್ಮದ ಹಬ್ಬ.ನವರಾತ್ರಿಯಲ್ಲಿ ದೇವಿಯನ್ನು ಒಂಭತ್ತು ರೂಪದಲ್ಲಿ ಪೂಜಿಸಲಾಗುತ್ತದೆ.ನವರಾತ್ರಿಯ ಸಪ್ತಮಿಯ ಮೂಲಾ ನಕ್ಷತ್ರದಂದು ಪುಸ್ತಕಗಳು, ಚಿನ್ನ-ಬೆಳ್ಳಿಗಳನ್ನು ಪೂಜೆ ಮಾಡುತ್ತಾರೆ. ಹಾಗೆಯೇ ಅಷ್ಟಮಿಯ ದಿನದಂದು ಮಹಾಲಕ್ಷ್ಮಿಯ ಪೂಜೆಯನ್ನು ಮಾಡಲಾಗುತ್ತದೆ.ನವಮಿಯಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ.ನವರಾತ್ರಿಯ ಕೊನೆಯ ದಿನ ವಿಜಯದಶಮಿಯನ್ನು ಆಚರಣೆ ಮಾಡಲಾಗುತ್ತದೆ ಎಂದರು.
ನವರಾತ್ರಿ ಮೊದಲ ಮೂರು ದಿನಗಳಲ್ಲಿ ತಮೋಗುಣವನ್ನು ಕಡಿಮೆಮಾಡಲು ಮಹಾಕಾಳಿಯ,ನಂತರದ ಮೂರು ದಿನಗಳಲ್ಲಿ ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯ, ಹಾಗೂ ಕೊನೆಯ ಮೂರು ದಿನಗಳಲ್ಲಿ ಸಾತ್ತ್ವಿಕತೆಯನ್ನು ವೃಧ್ದಿಸಲು ಮಹಾಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ.ನವರಾತ್ರಿ ಸಂದರ್ಭದಲ್ಲಿ ಶ್ರೀ ದೇವಿಯ ತತ್ವವು ನಿತ್ಯದ ತುಲನೆಯಲ್ಲಿ ಸಾವಿರ ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳ ಮತ್ತು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮಳಿಗೆಯನ್ನು ಹಮ್ಮಿಕೊಳ್ಳಲಾಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement