ಮಡಪ್ಪಾಡಿ ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳ ಮುಂದೆ ಸಮಸ್ಯೆ ಬಿಚ್ಚಿಟ್ಟ ಗ್ರಾಮಸ್ಥರು

January 5, 2020
5:16 PM

ಸುಳ್ಯ: ಮಡಪ್ಪಾಡಿಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನೇತೃತ್ವದ ಅಧಿಕಾರಿಗಳು ಮಡಪ್ಪಾಡಿ ಗ್ರಾಮಸ್ಥರ ಸಂವಾದ ಕಾರ್ಯಕ್ರಮದಲ್ಲಿ ಜನರು ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಮುಂದಿಟ್ಟರು.

Advertisement
Advertisement

ಪ್ರಮುಖವಾಗಿ ಹಳದಿ ಎಲೆ ರೋಗ, ನೆಟ್‍ವರ್ಕ್ ಸಮಸ್ಯೆ, ರಸ್ತೆಗಳ ಅಭಿವೃದ್ಧಿ ಕುರಿತು ಗ್ರಾಮಸ್ಥರು ಬೇಡಿಕೆ ಪಟ್ಟಿಯನ್ನೇ ಹೇಳಿದರು.

ಕೃಷಿಕ ಎಂ.ಡಿ.ವಿಜಯಕುಮಾರ್, ಎಲಿಮಲೆ-ಸೇವಾಜೆ-ಮಡಪ್ಪಾಡಿ-ಕಂದ್ರಪ್ಪಾಡಿ ಗ್ರಾಮದ ಪ್ರಮುಖ ರಸ್ತೆಯ ಕುರಿತು ಪ್ರಸ್ತಾಪಿಸಿದರಲ್ಲದೆ ರಸ್ತೆ ಅಭಿವೃದ್ಧಿಗೆ 15 ಕೋಟಿ ಒದಗಿಸಿಕೊಡುವಂತೆ ವಿನಂತಿಸಿದರು. ಅವರ ಪ್ರಶ್ನೆಗೆ ಉತ್ತರಿಸಿದ ಸಿಂಧೂ ಇಲ್ಲಿಗೆ ಬರುವಾಗ ರಸ್ತೆಯ ಸ್ಥಿತಿ ತಿಳಿಯಿತು. ಈ ಕುರಿತು ಚರ್ಚಿಸಿ ಯಾವ ಅನುದಾನದಲ್ಲಿ ಸರಿಪಡಿಸಬಹುದೆಂದು ಹೇಳಿದರು.

ನೆಟ್‍ವರ್ಕ್ ಸರಿಪಡಿಸಿ: ಮಪ್ಪಾಡಿಯ ಜಯರಾಮ ಹಾಡಿಕಲ್ಲು ಮಾತನಾಡಿ ನಮ್ಮಲ್ಲಿ ನೆಟ್‍ವರ್ಕ್ ಸಮಸ್ಯೆ ಪ್ರಮುಖವಾದದ್ದು. ಇದಕ್ಕಾಗಿ ಲಿಂಕಿಂಗ್ ಟವರ್ ವ್ಯವಸ್ಥೆಯಾಗಬೇಕು. ಈಗಾಲೇ ನಮಗೆ ನಕ್ಸಲ್ ಪ್ರದೇಶ ಎಂಬ ಹಣೆಪಟ್ಟಿ ಇದೆ. ಅದನ್ನು ಕೂಡ ಹೋಗಲಾಡಿಸಬೇಕು ಎಂದು ಪ್ರಸ್ತಾಪಿಸಿದರು. ಇಲ್ಲಿ ಕರೆಂಟ್ ಇದ್ದರೆ 24 ಗಂಟೆಯೂ ಬಿಎಸ್‍ಎನ್ನೆಲ್ ರೇಂಜ್ ಸಿಗಬಹುದು. ವಿದ್ಯುತ್ ಕೊಡಿಸಲು ಮೆಸ್ಕಾಂ ಎಂ.ಡಿ.ಜತೆ ಮಾತನಾಡುತ್ತೇನೆ. ಲಿಂಕಿಂಗ್ ಟವರ್ ಬಗ್ಗೆ ಸಂಬಂಧಿಸಿದವರಲ್ಲಿ ಮಾತನಾಡಿಸಲಾಗುವುದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.

ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ, ಸಾಲಮನ್ನಾದಲ್ಲಿ ಆಗಿರುವ ಸಮಸ್ಯೆಯನ್ನು ನಿವಾರಿಸಿ ಎಲ್ಲಿರಿಗೂ ಹಣ ಬರುವಂತೆ ಕ್ರಮ ಆಗಬೇಕು, ಸಹಕಾರಿ ಕಾಯಿದೆಗೆ ತಿದ್ದುಪಡಿ ತಂದು ಸಹಕಾರಿ ಸಂಘದ ಸದಸ್ಯರಾದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಂದೆ ಅಹವಾಲು ಸಲ್ಲಿಸಿದರು.
ಸಾಲಮನ್ನಾದ ದೂರುಗಳು ಸಾಕಷ್ಟು ಬಂದಿವೆ. ಈ ಕುರಿತು ಸಹಕಾರಿ ಇಲಾಖೆಯ ಅಧಿಕಾರಿಯವರಲ್ಲಿ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಕುರಿತು ಗ್ರಾ.ಪಂ.ಸದಸ್ಯ ವಿನಯಕುಮಾರ್ ಮುಳುಗಾಡು ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಸುಳ್ಯದಿಂದ ಮಡಪ್ಪಾಡಿಗೆ ಸಂಜೆ ಶಾಲೆ ಬಿಡುವ ವೇಳೆಯಲ್ಲಿ ಹಾಗೂ ಸುಬ್ರಹ್ಮಣ್ಯಕ್ಕೆ ಬೆಳಗಿನ ಶಾಲಾ ಸಮಯ ಬಸ್‍ನ ವ್ಯವಸ್ಥೆ ಒದಗಿಸುವಂತೆ ಸಹಕಾರಿ ಸಂಘದ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ಹೇಳಿದರು. ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಡಿಕೆ ಎಲೆ ಹಳದಿರೋಗ ಸರ್ವೆ ಜನವರಿ 31ರ ಒಳಗೆ ಪೂರ್ಣ: ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ ಈ ಭಾಗದ ಜನರು ಅಡಿಕೆಯಿಂದಲೇ ಜೀವನ ನಡೆಸುವವರು. ಆದರೆ ಈಗ ಅಡಿಕೆ ಹಳದಿರೋಗದಿಂದ ಕೈಸುಟ್ಟುಕೊಂಡಿದ್ದಾರೆ. ಆದ್ದರಿಂದ ಅಡಿಕೆ ಕೃಷಿಕರ ಸಾಲ ಪೂರ್ಣ ಮನ್ನಾ ಮಾಡಬೇಕು, ಅಡಿಕೆ ಎಲೆ ಹಳದಿರೋಗಕ್ಕೆ ವಿಜ್ಞಾನಿಗಳನ್ನು ಕರೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದರು. ಅದಕ್ಕೆ ಉತ್ತರಿಸಿದ ಜಿ.ಪಂ.ಸಿಎಸ್ ಸೆಲ್ವಮಣಿ ಯಾವ ಪ್ರದೇಶ ಈ ರೋಗಕ್ಕೆ ತುತ್ತಾಗಿದೆ ಎಂಬದನ್ನು ಜನವರಿ 31ರ ಒಳಗೆ ಸರ್ವೆ ನಡೆಸಿ ವರದಿ ತಯಾರಿಸುತ್ತೇವೆ. ಜತೆಗೆ ಈಗಾಲೇ ಚರ್ಚಿಸಿದಂತೆ ಪರ್ಯಾಯ ಬೆಳೆಗೆ ಪ್ಯಾಕೇಜ್ ನೀಡುವ ಬಗ್ಗೆಯೂ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ ಎಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷೆ ಶಕುಂತಲಾ ಕೇವಳ ಮಾತನಾಡಿ 94ಸಿ, ರಸ್ತೆ ಅಭಿವೃದ್ಧಿಗೆ ಅರಣ್ಯ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಅವರ ಮಾತಿಗೆ ತಾ.ಪಂ.ಸದಸ್ಯ ಉದಯ ಕುಮಾರ್ ಕೊಪ್ಪಡ್ಕ ಧ್ವನಿಗೂಡಿಸಿದರು. ಕಸ್ತೂರಿ ರಂಗನ್ ವರದಿ ವಿಚಾರ ಸ್ಪಷ್ಟವಾಗಿಲ್ಲ. ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯ ಗ್ರಾಮಗಳ ಜನರ ಆತಂಕವನ್ನು ದೂರ ಮಾಡುವಂತೆ ಜಿ.ಪಂ.ಮಾಜಿ ಸದಸ್ಯ ಭರತ್ ಮುಂಡೋಡಿ ಹೇಳಿದರು. ಗುತ್ತಿಗಾರಿನಲ್ಲಿ ನಾಡಕಚೇರಿ ಮಾಡುವಂತೆಯೂ ಅವರು ಕೇಳಿಕೊಂಡರು.

ಹೊಸ ಗನ್ ಲೈಸೆನ್ಸ್ ಪಡೆಯಲು ನಿಯಮ ಸರಳೀಕರಣಗೊಳಿಸಬೇಕು ಮತ್ತು ಲೈಸೆನ್ಸ್ ನವೀಕರಣದ ಶುಲ್ಕ ಕಡಿತಗೊಳಿಸಬೇಕು. ಚುನಾವಣಾ ಸಂದರ್ಭದಲ್ಲಿ ಕೋವಿ ಡೆಫಾಸಿಟ್ ಇಡುವ ವಿಚಾರದಲ್ಲಿ ವಿನಾಯಿತಿ ನೀಡಬೇಕೆಂದು ಸೋಮಶೇಖರ ಕೇವಳ ಹೇಳಿದರು. ಗ್ರಾ.ಪಂ.ಉಪಾಧ್ಯಕ್ಷ ಎನ್.ಟಿ.ಹೊನ್ನಪ್ಪ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ಮತ್ತು ಮಡಪ್ಪಾಡಿಗೆ ಬರಲು ಇಲಾಖೆಯಿಂದಲೇ ವಾಹನ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡರು. ಪಂಚಾಯತ್ ಎದುರು ನಿರ್ಮಿಸಲಾಗಿರುವ ಕುಡಿಯುವ ನೀರಿನ ಘಟಕದ ಅಪೂರ್ಣತೆಯ ಬಗ್ಗೆ ಸಚಿನ್ ಬಳ್ಳಡ್ಕ ಕೇಳಿದರು. ಆಧಾರ್ ಕಾರ್ಡ್‍ಗೆ ಸಂಚಾರಿ ಘಟಕ ಮಾಡುವಂತೆ ರಾಮಚಂದ್ರ ಬಳ್ಳಡ್ಕ ಬೇಡಿಕೆ ಇಟ್ಟರು. ಅಕ್ರಮ-ಸಕ್ರಮ ಕಡತ ಪೋಡಿ ಸರ್ವೆ ಆಗಲು ಬಾಕಿ ಇದೆ ಎಂದು ವಸಂತ ಬಳ್ಳಡ್ಕ ಹೇಳಿದರೆ, ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮ ಜರುಗಿಸುವಂತೆ ಹೇಮಕುಮಾರ್ ಹಾಡಿಕಲ್ಲು ಹೇಳಿದರು.

ಮಡಪ್ಪಾಡಿ ಆರೋಗ್ಯ ಉಪಕೇಂದ್ರದಲ್ಲಿ ವಾರವಿಡೀ ವೈದ್ಯರು ಇರುವಂತಾಗಾಬೇಕು ಎಂದು ಲೋಹಿತ್ ಬಳ್ಳಡ್ಕ ಹೇಳಿದರೆ, ಘನತ್ಯಾಜ್ಯ, ಸ್ಮಶಾನದ ಕುರಿತು ಚೇತನ್ ಕುಚ್ಚಾಲ, ಪಡಿತ ವಿತರಣೆಯಲ್ಲಿ ಬಯೋಮೆಟ್ರಿಕ್ ಸಮಸ್ಯೆ ಬಗ್ಗೆ ಧನ್ಯಕುಮಾರ್ ದೇರಮಜಲು, ಮಪ್ಪಾಡಿ ಶಾಲೆಯ ಕೊಠಡಿ ಶಿಥಿಲಗೊಂಡಿರುವ ಕುರಿತು ನಾಗೇಶ್ ಕುಚ್ಚಾಲ ಪ್ರಸ್ತಾಪಿಸಿದರು. ಗಣೇಶೋತ್ಸವಕ್ಕೆ 10ಲಕ್ಷ ಬಾಂಡ್ ಪಡೆದುಕೊಳ್ಳುವುದಕ್ಕೆ ಸಡಿಲೀಕರಣ ಮಾಡಬೇಕು ಎಂದು ಉದಯಕುಮಾರ್ ಕೊಪ್ಪಡ್ಕ ಪ್ರಸ್ತಾಪಿಸಿದರೆ, ಗುತ್ತಿಗಾರಿನಲ್ಲಿ ಪೊಲೀಸ್ ಹೊರಠಾಣೆ ಆರಂಭಿಸುವಂತೆ ನಿತ್ಯಾನಂದ ಮುಂಡೋಡಿ ಕೇಳಿಕೊಂಡರು. ಸಹಕಾರಿ ಸಂಘದಲ್ಲೂ ಮುದ್ರಾಯೋಜನೆ ಸ್ಕೀಮ್ ಆರಂಭಿಸುವಂತೆ ವಿನೋದ್ ಪೂಂಬಾಡಿ ಹೇಳಿದರು.

ನಾಲ್ಕು ದಶಕಗಳ ಬಳಿಕ ಮಡಪ್ಪಾಡಿ ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ:
ಅಧಿಕಾರಿಗಳೊಂದಿಗೆ ಸಂವಾದ ಆರಂಭಗೊಳ್ಳುತ್ತಿದ್ದಂತೆ ಪ್ರಥಮ ಪ್ರಶ್ನೆ ಕೇಳಿದ ಎಂ.ಡಿ.ವಿಜಯಕುಮಾರ್ ಕಳೆದ ನಾಲ್ಕು ದಶಕಗಳಲ್ಲಿ ಪ್ರಥಮ ಬಾರಿಜಿಲ್ಲಾಧಿಕಾರಿಗಳು ಮಡಪ್ಪಾಡಿ ಗ್ರಾಮಕ್ಕೆ ಬಂದಿದ್ದಾರೆ. ಈ ಭಾರಿ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗಳು ಬರುವಂತೆ ಮಾಡಿದ್ದಾರೆಂದರು.
ವೇದಿಕೆಯಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಳ್, ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್, ಜಿಲ್ಲಾ ಆರೋಗ್ಯವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಪತ್ರಕರ್ತರಾದ ಶಿವಪ್ರಸಾದ್ ಕೇರ್ಪಳ ಸ್ವಾಗತಿಸಿ, ರಫೀಕ್ ಚೆಂಗಳ ವಂದಿಸಿ, ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group