ಮಡಿಕೇರಿ : ಇಲ್ಲಿನ ಮ್ಯಾನ್ಸ್ ಕಾಂಪೌಂಡ್ ಕ್ಲಬ್‍ನ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಮಿಡ್ ಸಿಟಿ ಸುಂಟಿಕೊಪ್ಪ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
ಈ ಸಂದರ್ಭ ಮಡಿಕೇರಿಯ ಕೂರ್ಗ್ ಸ್ಟಂಟರ್ಸ್ ತಂಡದ ವತಿಯಿಂದ ಬೈಕ್ ಸ್ಟಂಟ್ ಆಯೋಜಿಸಲಾಗಿತ್ತು. ಡಿಯೋ, ಪಲ್ಸರ್ ಬೈಕ್‍ನಲ್ಲಿ ಸ್ಟಂಟ್ ಪ್ರೇಕ್ಷಕರ ಗಮನ ಸೆಳೆಯಿತು. ಸಿಂಗಲ್ಸ್ ಮತ್ತು ಡಬ್ಬಲ್ಸ್ ಸ್ಟಂಟ್ ಮೈ ಜುಂ ಎನಿಸುವಂತಿತ್ತು. ಸುಮಾರು 15 ನಿಮಿಷಗಳ ಕಾಲ ವಿವಿಧ ಬಂಗಿಯಲ್ಲಿ ಬೈಕ್ ಸ್ಟಂಟ್‍ಮನ್‍ಗಳು ರೈಡ್ ನಡೆಸಿ, ಪ್ರೇಕ್ಷರಿಂದ ಶಿಳ್ಳೆ ಹಾಗೂ ಚಪ್ಪಾಳೆ ಗಿಟ್ಟಿಸಿಕೊಂಡರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel