ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ದ.ಕ.ಜಿ.ಪಂ,ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ„ಕಾರಿಗಳ ಕಛೇರಿ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ ನಡೆಯಿತು.
ಪಂದ್ಯಾಟವನ್ನು ಜಿ.ಪಂ.ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ತಿಗಳು ಪಠ್ಯ ಚಟುವಟಿಕೆಯ ಜತೆಗೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಆವಶ್ಯಕ.ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಉದ್ಯೋಗ ಹುಡುಕಾಟದ ಸಂದರ್ಭದಲ್ಲಿ ಅವಕಾಶಗಳು ದೊರಕುತ್ತದೆ.ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಾಧನೆ ಉತ್ತಮ ಭವಿಷ್ಯಕ್ಕೆ ಹಾದಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ,ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ.ಕ್ರೀಡೆಯಿಂದ ವ್ಯಕ್ತಿಯಾ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದರು.
ತಾ.ಪಂ.ಸದಸ್ಯ ರಾಮ ಪಾಂಬಾರು ಕ್ರೀಡಾಂಗಣ ಉದ್ಘಾಟಿಸಿದರು.ಅತಿಥಿಗಳಾಗಿ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ ಧನಂಜಯ, ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ,ಬೆಳ್ಳಾರೆ ಟೌನ್ ರೋಟರೀಕ್ಲಬ್ ನ ನಿರ್ದೇಶಕ ಎನ್.ಎಸ್.ವೆಂಕಪ್ಪ ಗೌಡ ನಾರ್ಕೋಡು,ಬೆಳ್ಳಾರೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಪೆರ್ಜಿ,ಮಾಜಿ ಸೈನಿಕ ಹರಿಪ್ರಸಾದ್ ಕೆ,ತಾಲೂಕು ಪ್ರಾಥಮಿಕ ಶಾಲಾ ಸಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ,ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ,,ಮಣಿಕ್ಕರ ಸ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ವಿಶಾಲಾಕ್ಷಿ , ಮಣಿಕ್ಕರ ಪ್ರೌಡಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುನೀಲ್ ರೈ ಪಾಲ್ತಾಡು, ತಿ ಮಾಜಿ ಅಧ್ಯಕ್ಷ ಸೈಯ್ಯದ್ ಗಫೂರ್ ಸಾಹೇಬ್,ನಿವೃತ ಶಿಕ್ಷಕ ಶ್ರೀಧರ್ ಭಟ್ ಪುಚ್ಚಪ್ಪಾಡಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಸಲಾಂ,ತಾಲೂಕು ವಾಲಿಬಾಲ್ ಪಂದ್ಯಾಟ ಸಮಿತಿ ಅಧ್ಯಕ್ಷ ಕೆ.ಶೆರೀಫ್,ಮಣಿಕ್ಕರ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಎ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ ಸೈನಿಕರಾದ ಹರಿಪ್ರಸಾದ್ ಕೆ,ಕಬಕ ಸ.ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯಕೆ.,ನಿವೃತ ಯುವ ಸಬಲೀಕರಣ ಮತ್ತು ಕ್ರೀಡಾ„ಕಾರಿ ಮಾಧವ ಬಿ.ಕೆ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.ಹಾಗೂ ವಾಲಿಬಾಲ್ ಪಂದ್ಯಾಟದ 4 ಕ್ರೀಡಾಂಗಣದ ಪ್ರಾಯೋಜಕರಾದ ಸುನೀಶಾ ಅಂಕಣದ ಸುನೀಲ್ ರೈ ಪಾಲ್ತಾಡು,ಅಭ್ಯುದಯ ಅಂಕಣದ ಚೆನ್ನಾವರ ಅಭ್ಯುದಯ ಯುವಕ ಮಂಡಲದ ಪರವಾಗಿ ಪ್ರಜ್ವಲ್ ರೈ ,ಮಾತೃಭೂಮಿ ಅಂಕಣದ ಶ್ರೀ ವಿಷ್ಣುಮಿತ್ರ ವೃಂದದ ಪರವಾಗಿ ಅಧ್ಯಕ್ಷ ಪುರಂದರ ಕೆ,ನ್ಯೂ ಬ್ರದರ್ಸ್ ಅಂಕಣದ ಭವಿತ್ ಕುಲಾಲ್,ಪೃಥ್ವಿ ಅಂಕಣದ ಮಾಧವ ಅವರನ್ನು,,ಪ್ರಾಯೋಜಕರಾದ ಎನ್.ಎಸ್.ವೆಂಕಪ್ಪ ಗೌಡ,ಅಬ್ಬಾಸ್ ಪೆರ್ಜಿ,ಸೈಯ್ಯದ್ ಗಫೂರ್ ಸಾಹೇಬ್, ಪುತ್ತು ಸಾಹೇಬ್ ಪಾಲ್ತಾಡು,ವಾಲಿಬಾಲ್ ಪಂದ್ಯಾಟ ಸಮಿತಿ ಅಧ್ಯಕ್ಷ ಕೆ.ಶೆರೀಫ್‍ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಶಾಲಾ ಮುಖ್ಯಶಿಕ್ಷಕ ಮಹಾಲಿಂಗೇಶ್ವರ ಸ್ವಾಗತಿಸಿ,ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ವಂದಿಸಿದರು.ಶಿಕ್ಷಕಿ ಗೀತಾ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.