ಮಳೆ…. ಮಳೆ …..! | ವಾಯುಭಾರ ಕುಸಿತ ಸರಿಯಾಗುವುದೇ….? | ಕಾದು ಕುಳಿತ ಚಂಡಮಾರುತ ದೂರವಾಗುವುದೇ…? |

May 9, 2020
4:18 PM

ಸುಳ್ಯ: ತಾಲೂಕಿನ ಕೆಲವು ಕಡೆ ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮಳೆಯಾಗಿದೆ. ಸುಬ್ರಹ್ಮಣ್ಯ ಬಳಿಯ ಕಲ್ಲಾಜೆ, ಗುತ್ತಿಗಾರಿನ ಕೆಲವು ಕಡೆ , ಏನೆಕಲ್ಲು ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ  ಹನಿ ಮಳೆಯಾಗಿದೆ. ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿತ್ತು.

Advertisement
Advertisement

ಹವಾಮಾನ ಮುನ್ಸೂಚನೆ ಪ್ರಕಾರ ಸುಳ್ಯ, ಸುಬ್ರಹ್ಮಣ್ಯ,  ಪುತ್ತೂರು, ಗುಂಡ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ.

Advertisement

 

Advertisement

ಬಂಗಾಳ ಕೊಲ್ಲಿಯ ಅಂಡಮಾನ್‌ ದ್ವೀಪದ ಬಳಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಇನ್ನೂ ಕೆಲವು ದಿನ ಮಳೆಯಾಗುವ ಮುನ್ಸೂಚನೆ ಇದೆ. ವಾಯುಭಾರ ಮತ್ತಷ್ಟು ಕುಸಿತವಾಗುತ್ತಿದ್ದು  ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದ್ದು ಹವಾಮಾನದ ಸ್ಪಷ್ಟ ಚಿತ್ರಣವು ಭಾನುವಾರ ಸಿಗಲಿದೆ. ಚಂಡಮಾರುತ ಉಂಟಾದರೆ  ಭಾರತದ ಪಶ್ಚಿಮ ಕರಾವಳಿಯಲ್ಲಿ  ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಮೇ.10  ಹಾಗೂ 11 ರಂದು ಮಳೆಯ ಸಾಧ್ಯತೆ ಹೆಚ್ಚಿದೆ.

ಆದರೆ ಭೂ ಮಧ್ಯೆ ರೇಖೆ ಗಿಂತ ಕೆಳ ಭಾಗದಲ್ಲಿ ಚಂಡಮಾರುತ ಉಂಟಾದರೆ  ಬಂಗಾಳಕೊಲ್ಲಿ ಅಥವಾ ಅರಬ್ಬಿ ಸಮುದ್ರಕ್ಕೆ ಹೆಚ್ಚಿನ ಸಂದರ್ಭ ಚಂಡಮಾರುತ ಪ್ರವೇಶಿಸುವುದಿಲ್ಲ. ಹೀಗಾಗಿ ವಾಯುಭಾರ ಕುಸಿತದಿಂದ ಮಳೆ ಮಾತ್ರವೇ ಬರಬಹುದು  ಎಂಬ ವಿಶ್ಲೇಷಣೆಯೂ ಇದೆ.

Advertisement

ಶನಿವಾರ ಮಧ್ಯಾಹ್ನ ಸುರಿದ ಮಳೆ:

Advertisement

 

ಈ ಬಾರಿ ಮುಂಗಾರು ಮಳೆ ನಿಗದಿತ ಸಮಯದಲ್ಲೇ ಆರಂಭವಾಗಲಿದೆ ಎನ್ನುವುದು  ಈಗಿನ ಅಂದಾಜು. ಜೂನ್ ಮೊದಲ ವಾರದಲ್ಲಿ  ಕೇರಳವನ್ನು  ಮುಂಗಾರು ಮಳೆ ಪ್ರವೇಶಿಸಿ ಉತ್ತಮ ಮಳೆಯಾಗಲಿದೆ. ಅದಾದ 4 ದಿನದಲ್ಲಿ ಕರ್ನಾಟಕ ಕರಾವಳಿ ಪ್ರವೇಶ ಮಾಡುವ ಮುಂಗಾರು  ಜೂನ್. 27 ರ ವೇಳೆಗೆ ನವದೆಹಲಿಗೆ ಪ್ರವೇಶವಾಗಬಹುದು , ಅದಕ್ಕೂ ಮುನ್ನ ಜೂ. 11 ರ ಸುಮಾರಿಗೆ ಮುಂಬೈ, ಕೋಲ್ಕತ್ತಾ ಮೊದಲಾದ ಕಡೆಗಳಲ್ಲಿ ಸುರಿಯಬಹುದು ಎನ್ನುವುದು ನಿರೀಕ್ಷೆ.

Advertisement

 

 

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ
April 28, 2024
4:40 PM
by: The Rural Mirror ಸುದ್ದಿಜಾಲ
ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |
April 28, 2024
4:01 PM
by: ಮಹೇಶ್ ಪುಚ್ಚಪ್ಪಾಡಿ
ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ
ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |
April 28, 2024
1:07 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror