ಮಳೆಯದೊಂದು ಲೆಕ್ಕಾಚಾರ… ನಾವೇಕೆ ಹೀಗೆ ಮಾಡಬಾರದು ?

June 28, 2019
8:00 AM

ಸುಳ್ಯ: ಪ್ರತಿನಿತ್ಯವೂ ನೀರಿಲ್ಲ ಅಂತ ನಾವು ಹೇಳುತ್ತಲೇ ಇದ್ದೇವೆ. ನಾವ್ಯಾಕೆ ನೀರು ಸಂರಕ್ಷಣೆಯತ್ತ ಚಿತ್ತವಿಡಬಾರದು ? ಮಳೆ ನೀರನ್ನೇ ಸಂರಕ್ಷಣೆ ಮಾಡಿದರೆ, ಇಂಗುವಂತೆ ಮಾಡಿದರೆ ಬರ ಬಾರದಂತೆ ಸ್ವಲ್ಪ ತಡೆಯಬಹುದು. ಈ ಬಗ್ಗೆ ಪಿ ಜಿ ಎಸ್ ಎನ್ ಪ್ರಸಾದ್ ಒಂದು ಲೆಕ್ಕ ನೀಡಿದ್ದಾರೆ. ಅದು ಮಳೆ ಲೆಕ್ಕ,

Advertisement

ಒಂದು ಚದರ ಮೀಟರ್ ಪ್ರದೇಶದಲ್ಲಿ ಬೀಳುವ ಒಂದು ಮಿ.ಮೀ.ಮಳೆ ಅಂದರೆ ಒಂದು ಲೀಟರ್ ನೀರು. ಎಕ್ರೆಗೆ 4046.856 ಚದರ ಮೀಟರ್. ಇಲ್ಲಿ ಮಳೆಯ ಅಗಾಧತೆಯನ್ನು ಗಮನಿಸೋಣ.

ಮಳೆ ಇಲ್ಲ ,ಹೀಗಾದರೆ ಹೇಗಾದೀತು,ಅದು ಇದು – ಅಂತ ಮಾತಾಡುತ್ತೇವೆ. ಈ ತನಕ ಬಂದಿರುವ ಮಳೆ ಒಂದು ಎಕರೆ ಪ್ರದೇಶದಲ್ಲಿ 15,13,524 ಲೀ. ಪ್ರಕೃತಿಯನ್ನು ದೂರದೆ ಅಭ್ಯಸಿಸೋಣ. ವಾರ್ಷಿಕ ಸರಾಸರಿ ಮಳೆ 4456 ಮಿ.ಮೀ. ಚದರ ಮೀಟರ್ ಒಂದರ 4456 ಲೀ.ನೀರು. ಇದನ್ನು ಸಂಗ್ರಹಿಸಿ ಇಟ್ಟಲ್ಲಿ ಒಬ್ಬನ 45 ದಿನಗಳ ಅಗತ್ಯಕ್ಕೆ ಸಾಕಾಗಬಲ್ಲುದು.!

ಮುಂದಿನ ದಿನಗಳಲ್ಲಿ ಇದು ಬೇಕಾದೀತು.

ಇಂದಿನ ದಿನವನ್ನು ಗಮನಿಸಿದರೆ, ಈಗಿನ ವಾತಾವರಣ ಗಮನಿಸಿದರೆ ಮಳೆ ಗಮನಿಸಿದರೆ ಜಲಸಂರಕ್ಷಣೆಯತ್ತ ಎಲ್ಲರೂ ಚಿತ್ತಹರಿಸಲೇಬೇಕಾದ ಅನಿವಾರ್ಯತೆ ಇದೆ. ಯಾವೆಲ್ಲಾ ಮಾದರಿಯನ್ನು ನೀರನ್ನು ಸಂರಕ್ಷಣೆ ಮಾಡಬಹುದು ಹಾಗೂ ಹೇಗೆ ಮಾಡಬಹುದು  ಎಂಬುದರ ಬಗ್ಗೆ ಯೋಚನೆ ಮಾಡಲೇಬೇಕಿದೆ. ಇದುವರೆಗೆ ಮಳೆ ಇಲ್ಲ ಮಳೆ ಇಲ್ಲ ಎಂದು ಮಾತನಾಡಿದ್ದಾಯಿತು. ಮುಂದೇನು ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ. ಇದಕ್ಕಾಗಿ ಜಲಸಂರಕ್ಷಣೆಯ ಯಶೋಗಾಥೆಗಳು ಇದ್ದರೆ, ಮಳೆಕೊಯ್ಲು , ನೀರಿನ ಬಗೆಗಿನ ಯಾವುದೇ ಯಶೋಗಾಥೆಗಳು ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ. (sullianews@gmail.com ಅಥವಾ ವ್ಯಾಟ್ಸಪ್- 9449125447)  ನಾವು ಅದನ್ನು ಪ್ರಕಟ ಮಾಡಿ ಇನ್ನೂ ಕೆಲವಾರು ಜನರಿಗೂ ತಿಳಿಯುವಂತೆ ಮಾಡುತ್ತೇವೆ.

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗೆ ಉತ್ತಮ ಧಾರಣೆಯ ಸಂತಸದಲ್ಲಿ ಚಾಮರಾಜನಗರ ರೈತರು | ಚಾಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಮಲೆನಾಡು ಭಾಗದ ಬೆಳೆಗಾರರು | ಧಾರಣೆ ಏರಿಕೆಯ ಬಗ್ಗೆ ತಜ್ಞರ ಅಭಿಪ್ರಾಯ |
May 3, 2025
7:01 AM
by: ದ ರೂರಲ್ ಮಿರರ್.ಕಾಂ
ಮುಂದಿನ 7 ದಿನಗಳಲ್ಲಿ ರಾಜ್ಯ ಹಲವೆಡೆ ಸಾಧಾರಣ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
May 3, 2025
6:23 AM
by: The Rural Mirror ಸುದ್ದಿಜಾಲ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಅವಕಾಶ
May 3, 2025
6:17 AM
by: The Rural Mirror ಸುದ್ದಿಜಾಲ
2026 ರ ವೇಳೆಗೆ ಭಾರತ ಸಂಪೂರ್ಣ ನಕ್ಸಲ್ ಮುಕ್ತ | ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ
May 3, 2025
6:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group