ಮಳೆಯೊಂದಿಗೆ ಮಾತುಕತೆ ನಡೆದಾಗ…. ಸೋಲು-ಗೆಲುವು ಕಂಡಿತು , ನಿರೀಕ್ಷೆಗಳು ತಲೆಕೆಳಗಾಯಿತು…!

August 16, 2019
8:00 AM

ಮಳೆಯೊಂದಿಗೆ ಮಾತುಕತೆ..!. ಈ ಮಾತುಕತೆಯಲ್ಲಿ ನಾವೆಲ್ಲರೂ ಮೊನ್ನೆ ಮೊನ್ನೆ ಭಾಗಿಯಾಗಿದ್ದೆವು.ಈಗ ಮತ್ತೆ ಮಳೆಯ ಜೊತೆಗಿನ ಮಾತುಕತೆಯ ಸಾರಾಂಶವನ್ನು ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ. ಮಳೆ, ಪ್ರಕೃತಿಯ ಜೊತೆ ಮಾತನಾಡುವುದು ಎಂದರೆ ಅದೊಂದು ಸೂಕ್ಷ್ಮ ಸಂವೇದನೆ. ಪಿ ಜಿ ಎಸ್ ಎನ್ ಪ್ರಸಾದ್ ಜೊತೆ ಹಲವಾರು ಮಂದಿ ಈಗ ಸೇರಿಕೊಂಡಿದ್ದಾರೆ. ಪ್ರತಿದಿನವೂ ಮಳೆಯ ಬಗ್ಗೆ ಲೆಕ್ಕ ಬರೆಯುತ್ತಾರೆ, ಪರಿಸರವನ್ನು ವಾಚ್ ಮಾಡುತ್ತಾರೆ. ಮಳೆ ಲೆಕ್ಕ ಅಂತಹೇ ಒಂದು ಗ್ರೂಪ್ ಇದೆ. ಇಲ್ಲೆಲ್ಲಾ ಮಳೆಯದ್ದೇ ಮಾತುಕತೆ ಇರುತ್ತದೆ. ಸಾಯಿಶೇಖರ್ ಕರಿಕಳ ಅವರು ಮಳೆ ಯಾವಾಗ ಬರುತ್ತದೆ ಎಂದರೆ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಳೆಯ ಜೊತೆ ಮಾತಾಡಿ ನಮಗೆ ವಿವರ ನೀಡುತ್ತಾರೆ. ಹೀಗಾಗಿ ಈ ಬಾರಿಯ ಆಶ್ಲೇಷ ನಕ್ಷತ್ರವನ್ನು ಬೆಂಬೆತ್ತಿ ಮಾತನಾಡಿದಾಗ ಜನರ ನಿರೀಕ್ಷೆ ತಲೆಕೆಳಗಾದ ಬಗ್ಗೆ, ಸೋಲು-ಗೆಲುವಿನ ಬಗ್ಗೆ ಅವರು ತಿಳಿಸಿದ್ದಾರೆ, ಈ ಕಡೆಗೆ ನಮ್ಮ ಇಂದಿನ ಬೆಳಕು….

Advertisement
Advertisement

ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾತುಕತೆಯ  ಆರಂಭ ಹೀಗಾಗುತ್ತದೆ

Advertisement

ಗುಡ್ಡ ಗುಡ್ಡ ಸ್ಥಾವರ ಲಿಂಗ
ಅದಕಭ್ಯಂಗ ಎರಿತಾವನ್ನೋ ಹಂಗ
ಕೂಡ್ಯಾವ ಮೋಡ ಸುತ್ತಲೂ ನೋಡ ನೋಡ
                                                         …. ವರಕವಿ ದ.ರಾ.ಬೇಂದ್ರೆ

ಈಗ ಕರಾವಳಿ, ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯನ್ನು ಕಣ್ತುಂಬಿಕೊಂಡು ನೋಡಲೂ ನಾವು ಭಯಪಡುವಂತಿದೆ.ಅನಾದಿ ಕಾಲದಲ್ಲಿ ಮಳೆ ಹೇಗಿತ್ತೋ ನಮ್ಮ ಊಹೆಗೂ ನಿಲುಕದು. ಮೊನ್ನೆ ಮೊನ್ನೆವರೆಗೂ ಇನ್ನೇನು ಮಳೆಗಾಲದ ವೈಭವ ಇನ್ನಿಲ್ಲ ಅಂದುಕೊಂಡಿದ್ದೆವು. ಯಾವಾಗ ಆಶ್ಲೇಷನ ಪಾದಾರ್ಪಣೆ ಆಯಿತೋ ಚಿತ್ರಣವೇ ಬದಲಾಯಿತು.

Advertisement

ಸಹೋದರರೆಂದೇ ಮಲೆನಾಡಿನಲ್ಲಿ ಗುರುತಿಸಲ್ಪಟ್ಟಿರುವ ಪುನರ್ವಸು, ಪುಷ್ಯ ನಕ್ಷತ್ರಗಳದ್ದು ಯಾವತ್ತೂ ಭರ್ಜರಿ ಆಟ.ಪುನರ್ವಸು ಹಿಂದೆ ಬೀಳದಿದ್ದರೂ,ಯಾಕೋ ಪುಷ್ಯ ಕಳೆದೈದು ವರ್ಷದಿಂದ ತನ್ನ ವೈಭವವನ್ನು ಕಳೆದುಕೊಂಡದ್ದನ್ನು ನಾವು ಗಮನಿಸುತ್ತಿದ್ದೇವೆ. ಆದರೆ ಕಳೆದೆರಡು ವರ್ಷದಿಂದ ಆಶ್ಲೇಷನ ( ಆಗಸ್ಟ್ 3 ರಿಂದ 16) ಆಟದ ವೈಖರಿಗೆ ನಾಡಿನ ಜನ ಕಂಗಾಲು!
ಕಳೆದ ವರ್ಷ ಗರಿಷ್ಟ ಪ್ರಮಾಣದ ಮಳೆ ಸತತ 5 ದಿನ 100 ಮಿ.ಮೀ.ಗಳಿಂದಲೂ ಹೆಚ್ಚು ಸುರಿಯುವ ಮೂಲಕ ಒಟ್ಟಾರೆ 958 ಮಿ.ಮೀ.ನಷ್ಟು ದಾಖಲಾಯಿತು.ಅದು ( 933 ಮಿ.ಮೀ..1982 ರಲ್ಲಿ ) ಆ ವರೆಗಿನ ಅತ್ಯಧಿಕ ಮಳೆಯಾಗಿ ಇತಿಹಾಸದ ಪುಟ ಸೇರಿತ್ತು.

ಈ ಸಲ ಹಿಂದಿನೆಲ್ಲ ದಾಖಲೆಗಳನ್ನು ಮುರಿಯಲೇ ಬೇಕೆಂದು ಹಠ ತೊಟ್ಟಂತಿದ್ದಾನೆ ಆಶ್ಲೇಷ. ಸತತ ಆರು ಶತಕಗಳು,ಮೂರು ಅರ್ಧ ಶತಕಗಳು. ಯಾವುದೇ ಒಂದು ಮಹಾ/ಮಳೆ ನಕ್ಷತ್ರದ ಅವಧಿಯಲ್ಲಿ ದಾಖಲಾದ ಗರಿಷ್ಟ ಮಳೆ ತನ್ನ ಹೆಸರಿಗೆ ಬರೆಯಿಸಿಕೊಳ್ಳಲು ಈತನಿಗೆ ಇನ್ನು ಬಾಕಿಯಿರುವುದು 1998 ರ ಆರ್ದ್ರಾ ನಕ್ಷತ್ರದ (ಜೂನ್ 22 ರಿಂದ ಜುಲೈ 5) 1319 ಮಿ.ಮೀ. ಮಾತ್ರ. ಕಾದು ನೋಡೋಣ  ಇವನಾಟ…

Advertisement

ನಮ್ಮ ಪೂರ್ವಜರು ಪ್ರಕೃತಿಯನ್ನು ಆರಾಧಿಸುತ್ತಿದ್ದರು.ಆದರೆ ನಾವು….? ಈಗ ಯೋಚಿಸಿ ಪ್ರಕೃತಿಯ ಈ ಆಟದಲ್ಲಿ ಗೆದ್ದವರಾರು ? ಸೋತವರಾರು ?

ನೆಲ ಜಲ ಕಾಡಿನ ಸಂಬಂಧ 

Advertisement

ಬಿಟ್ಟರೂ ಬಿಡಲಾಗದ ಬಂಧ
ನೀರಿದ್ದರೆ ಮಣ್ಣಿನ ಗಂಧ
ಹಸುರಿನ ಹೊದಿಕೆಯ ಆ ಚೆಂದ
                                                                 … ಸುಬ್ರಾಯ ಚೊಕ್ಕಾಡಿ

( ಅಂಕಿ ಅಂಶಗಳು ….ಸುಳ್ಯ ತಾಲೂಕಿನ ಬಾಳಿಲದಲ್ಲಿ ದಾಖಲಾದ ಮಳೆಯದ್ದು.)

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ
20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror