ಮಡಿಕೇರಿ: ಕಟ್ಟಡದ ಎರಡನೇ ಮಹಡಿಯಿಂದ ಮೂರೂವರೆ ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ಪಟ್ಟಣದ ಮಲಬಾರ್ ರಸ್ತೆಯ ಹೆಚ್.ಎಂ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ ಅಝರುದ್ದೀನ್-ಝಾಹಿರಾ ದಂಪತಿಗಳ ಪುತ್ರ ಜವಾದುದ್ದೀನ್ ಮೃತ ಮಗು. ಕಟ್ಟಡದ ಮೇಲೆ ಆಟವಾಡುತ್ತಿರುವಾಗ ಆಯತಪ್ಪಿ ಕಿಟಕಿಯ ಮೂಲಕ ಕೆಳಗೆ ಬಿದ್ದ ಮಗು ತೀವ್ರವಾಗಿ ಗಾಯಗೊಂಡಿತು. ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು. ತಂದೆ ಅಝರುದ್ದೀನ್ ದುಬೈನಲ್ಲಿ ಕೆಲಸದಲ್ಲಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel