“ಮಹಾ”ಮಳೆಯಾಯಿತು….. ಆಡಳಿತದ ಜೊತೆ ಕೈಜೋಡಿಸಿದರು ಸೇವಾ ಸಂಘಟನೆಗಳು….

August 7, 2019
10:44 AM

ಕಳೆದ 3 ದಿನಗಳಿಂದ ಮಹಾಮಳೆ. ದಕ್ಷಿಣ ಕನ್ನಡ ಸೇರಿದಂತೆ ಕೊಡಗು, ಉಡುಪಿ ಜಿಲ್ಲೆಗಳಲ್ಲಿ  ಸಣ್ಣಪುಟ್ಟ ಸಂಕಷ್ಟ ಎದುರಾಯಿತು. ಜಿಲ್ಲಾಡಳಿತ, ತಾಲೂಕು ಆಡಳಿತ ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಆಡಳಿತದ ಜೊತೆ ವಿವಿಧ ಸಂಘಸಂಸ್ಥೆಗಳೂ ಕೈಜೋಡಿಸಿದವು. ಸುಳ್ಯದಲ್ಲಿ ಯುವಬ್ರಿಗೆಡ್ , ವಿಶ್ವಹಿಂದೂ ಪರಿಷದ್ ,  ವಿಖಾಯ ತಂಡ, ಎಸ್ ಎಸ್ ಎಫ್, ಸೇರಿದಂತೆ ವಿವಿಧ ಸಂಘಟನೆಗಳು ತುರ್ತು ಸೇವೆಗಾಗಿ ಸಿದ್ಧರಾದರು. ಕರೆದಲ್ಲಿಗೆ ಬರುವುದಾಗಿ ಹೇಳಿದರು. ಅದಕ್ಕೆ ಬೇಕಾದ ತಂಡವನ್ನೂ ಸಿದ್ಧ ಮಾಡಿದ್ದರು. ಈ ಕಡೆಗೆ ನಮ್ಮ ಬೆಳಕು…

Advertisement

 

ಸುಳ್ಯ:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮಳೆಯ ಅಬ್ಬರ ಹೆಚ್ಚಾಗಿದೆ. ಗಾಳಿ ಸಹಿತ ಬುಧವಾರ ಮಳೆ ಇದೆ. ಬೆಳಗ್ಗಿನಿಂದಲೇ ಮಳೆಯಾಗುತ್ತಿದೆ. ಈ ನಡುವೆ ಸುಳ್ಯ ತಾಲೂಕು ಆಡಳಿತ ಮಳೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಬುಧವಾರ ಸಾರ್ವಜನಿಕರ ಸಭೆ ಕೂಡಾ ನಡೆಯಲಿದೆ. ಈ ನಡುವೆ ಸುಳ್ಯ ತಾಲೂಕಿನ ವಿವಿಧ ಸಂಘಟನೆಗಳೂ ತಾಲೂಕು ಆಡಳಿತದ ಜೊತೆ ಕೈಜೋಡಿಸಲಿದೆ. ಶಾಸಕ ಅಂಗಾರ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯದ ಯುವಬ್ರಿಗೆಡ್ ಸದಾ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇವರ ತಂಡದ 22 ಯುವಕರು ಸರ್ವ ರೀತಿಯಿಂದಲೂ ಸಿದ್ಧವಾಗಿದ್ದು ಯಾವುದೇ ಸಂದರ್ಭದಲ್ಲಿ ತುರ್ತು ಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂದು ಯುವಬ್ರಿಗೆಡ್ ಮುಖಂಡ ಶರತ್ ಪರಿವಾರ್ ಹೇಳಿದ್ದಾರೆ. ಯುವಬ್ರಿಗೆಡ ಗ್ರೂಪ್ ಮೂಲಕ ತಾಲೂಕು ಪರಿಸ್ಥಿತಿಯನ್ನು ಗಮನಿಸುತ್ತಿದೆ. ತಂಡದ ಸದಸ್ಯರು ಸ್ಥಳಿಯವಾಗಿ ಮಾಡಬಹುದಾದ ಕೆಲಸಗಳಿದ್ದರೆ, ಸಾರ್ವಜನಿಕರಿಗೆ ನೆರವು ನೀಡಬಹುದಾದರೇ ಅವರೇ ಮಾಡುತ್ತಾರೆ ಅಗತ್ಯ ಬಿದ್ದರೆ 22 ಮಂದಿಯೂ ಸೇರಿಕೊಳ್ಳಲಿದ್ದಾರೆ.

ತುರ್ತು ಸಹಾಯಕ್ಕಾಗಿ ಯುವಬ್ರಿಗೆಡ್  ಸಂಪರ್ಕ ಮಾಡಬಹುದು – ಶರತ್- 9686893808

Advertisement

ಮಳೆಯ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸಿದ್ಧ:

  ಸುಳ್ಯದಲ್ಲಿ ಮಳೆ ಮುಂದುವರಿದಲ್ಲಿ ಪರಿಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ ಎಂದು ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ತಿಳಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಯಾವುದಾದರೂ ಪ್ರದೇಶದಲ್ಲಿ  ಮಳೆ ತೊಂದರೆ ಉಂಟಾದರೆ ಕೂಡಲೇ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.
ಮಳೆ ಹಾನಿ ಪ್ರದೇಶಗಳಲ್ಲಿ  ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಹಾನಿಗೊಳಗಾದ ಉಬರಡ್ಕ ಮಿತ್ತೂರು, ಕುರುಂಜಿ ಗುಡ್ಡೆ, ಬೆಳ್ಳಾರೆ, ಕಳಂಜ ಮೊದಲಾದ ಪ್ರದೇಶಗಳಿಗೆ ಅವರು ಭೇಟಿ ನೀಡಿದರು.
ತಾಲೂಕಿನಾದ್ಯಾಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕೊಲ್ಲಮೊಗ್ರ ಹಾಗೂ ಕಲ್ಲುಗುಂಡಿಯಲ್ಲಿ ಸಂತಸ್ತ್ರರ ಪರಿಹಾರ ಕೇಂದ್ರ ಆರಂಭಿಸಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ. ಯಾವುದಾದರು ಕುಟುಂಬಗಳು ಮಳೆಯಿಂದ ಸಂತ್ರಸ್ಥರಾಗಿ ಮನೆಯಿಂದ ಬಿಟ್ಟು ನಿಲ್ಲುವ ಅನಿವಾರ್ಯತೆ ಉಂಟಾದರೆ ಅವರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಳಿಸಲಾಗುವುದು.
ತಹಶೀಲ್ದಾರ್ ಕುಂಞಿ ಅಹಮದ್‌ ತಾಲೂಕು ಕಚೇರಿಯಲ್ಲಿ ಮಂಗಳವಾರ  ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.   ಪಾಕೃತಿಕ ವಿಕೋಪ ಸಂಭವಿಸಿದರೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯ ನೀಡಬೇಕು ಎಂದು ಸೂಚಿಸಿದರು.
ಪ್ರತೀ ಗ್ರಾ.ಪಂ ಮಟ್ಟದಲ್ಲಿ ಅಧಿಕಾರಿಗಳು, ಗ್ರಾಮಕರಣಿಕರು ಜಾಗೃತರಾಗಿರಬೇಕು ಎಂದು ತಹಶೀಲ್ದಾರ್ ಸೂಚಿಸಿದರು.  ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಉಪತಹಶೀಲ್ದಾರ್ ದೀಪಕ್, ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ, ಆಹಾರ ನಿರೀಕ್ಷಕ ಶಂಕರ್, ಅಕ್ಷರ ದಾಸೋಹ ಅಧಿಕಾರಿ ದೇವರಾಜ್ ಮುತ್ಲಾಜೆ, ಗ್ರಾಮಕರಣೀಕರು ಸಭೆಯಲ್ಲಿ ಭಾಗವಹಿಸಿದ್ದರು.
ಸುಳ್ಯ ತಾಲೂಕು  ರೆಡ್ ಅಲರ್ಟ್ – ತುರ್ತು ಸಹಾಯಕ್ಕಾಗಿ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ನ ಸ್ವಯಂ ಸೇವಕರು ಸಿದ್ಧ:
  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಬರೆಗಳು ಕುಸಿತಗೊಂಡಿದೆ, ಮರಗಳು ರಸ್ತೆಗೆ ಅಡ್ಡಲಾಗಿಯೂ, ಮನೆಗಳ ಹಾಗೂ ಇತರ ಕಟ್ಟಡಗಳ ಮೇಲೂ ಬಿದ್ದದ್ದೂ ಇನ್ನೂ ಬೀಳುವ ಹಂತದಲ್ಲಿರುವಂತಹದ್ದೂ ಹಾಗೂ ಅನೇಕಾರು ಅಪಾಯಗಳು ತೆರೆದು ನಿಂತಿವೆ. ಮಳೆ ನೀರು ತುಂಬಿ ಹರಿಯುತ್ತಿರುವುದರಿಂದ ಇನ್ನಷ್ಟು ಅಪಾಯಗಳು ಕಾದು ನಿಂತಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸುಳ್ಯ ತಾಲೂಕಿನಾದ್ಯಂತ ತುರ್ತು ಸಹಾಯಕ್ಕಾಗಿ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ನ ಸ್ವಯಂ ಸೇವಕರು ಸಹಾಯಕ್ಕಾಗಿ ತಯಾರಾಗಿದ್ದಾರೆ. ಅದೇ ರೀತಿಯಲ್ಲಿ ನಾಡಿನ ಎಲ್ಲಾ ಸಂಘ ಸಂಸ್ಥೆಗಳು ಕೂಡ ಈ ತುರ್ತು ಸಂದರ್ಭಗಳಲ್ಲಿ ಜನರ ಸೇವೆಗಾಗಿ ತಯಾರಾಗಬೇಕೆಂದು ಸಾರ್ವಜನಿಕವಾಗಿ ಸುನ್ನೀ ಸಂಘ ಕುಟುಂಬದ ವತಿಯಿಂದ ಎಲ್ಲರಲ್ಲೂ ಕೇಳಿಕೊಳ್ಳುತ್ತಿದ್ದೇವೆ. ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ  – ರಫೀಕ್  – 9448501703 , ಸಿದ್ದೀಖ್ –  8970752505
ಸಿ.ಎಫ್.ಸಿ (ರಿ.) ಜಟ್ಟಿಪಳ್ಳದಿಂದ ಕೆಲಸ ಕಾರ್ಯ:
ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ (ರಿ.) ಜಟ್ಟಿಪಳ್ಳ ಇದರ ಸ್ವಚ್ಚ ವಾರ್ಡ್ ಜಟ್ಟಿಪಳ್ಳ ಅಭಿಯಾನದ ಎರಡನೇ ಹಂತವಾಗಿ  ಸ್ವಚ್ಛತಾ ಕಾರ್ಯಕ್ರಮ ಜರಗಿತು.
ಜಟ್ಟಿಪಳ್ಳ ನದಿಯಲ್ಲಿ ಬಾರಿ ಮಳೆಗೆ ಕೊಚ್ಚಿಬಂದು ಸಿಳುಕಿ ಕೊಂಡಿರುವ ಮರದ ದಿಮ್ಮಿಗಳನ್ನು ಕಸ ಕಡ್ಡಿಗಳನ್ನು ತೆರವುಗೊಳಿಸಿದರು. ರಸ್ತೆಯ ಬದಿಯ ಚರಂಡಿಗಳ ಬ್ಲಾಕ್ ತೆರವು ಮಾಡಿ ಸ್ವಚ್ಚಗೊಳಿಸಿ ಮಳೆ ನೀರು ಹರಿಯುವಂತೆ ಮಾಡಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ
July 6, 2025
10:34 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group