ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ

November 26, 2019
4:15 PM

ಮುಂಬೈ: ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ತೀವ್ರ ಬದಲಾವಣೆ ಕಾಣುತ್ತಿದ್ದು , ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜಿನಾಮೆ ನೀಡಿದ್ದಾರೆ. ಫಡ್ನವಿಸ್ ಸುದ್ದಿಗೋಷ್ಠಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

Advertisement
Advertisement

 

Advertisement
ಅಜಿತ್ ಪವಾರ್

 

ಶನಿವಾರ ರಾತೋರಾತ್ರಿ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಿದ್ದ ಬಿಜೆಪಿಗೆ ಸುಪ್ರೀಂಕೋರ್ಟ್ ಬುಧವಾರವೇ ಬಹುಮತ ಸಾಬೀತುಪಡಿಸಲು ಆದೇಶಿಸಿತ್ತು. ಬಹುಮತ ಸಾಬೀತಿಗೆ ಮೊದಲೇ ಮುಖ್ಯಮಂತ್ರಿ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ಆದರೆ ನಾವು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸಿದ್ದರಿಂದ ಕೆಲವು ಸೀಟುಗಳ ಕೊರತೆ ಉಂಟಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದ್ದರೆ ಅದರ ಕಥೆ ಬೇರೆನೇ ಇರುತ್ತಿತ್ತು. ಫಲಿತಾಂಶದ ಬಳಿಕ ಶಿವಸೇನೆ ಅಧಿಕಾರ ಹಂಚಿಕೆಯ ಪ್ರಸ್ತಾಪ ಮಾಡಿತು. ಆದರೆ ಯಾವತ್ತೂ ಶಿವಸೇನೆಗೆ ಅಂತಹ ಭರವಸೆಯನ್ನು ನಾವು ನೀಡಿರಲಿಲ್ಲ ಎಂದು ಹೇಳಿದರು.

Advertisement

ನಾವು ಅಜಿತ್ ಪವಾರ್​ ಬೆಂಬಲ ನೀಡಿದ್ದನ್ನು ನೋಡಿ ಇಡೀ ಎನ್​ಸಿಪಿ ಪಕ್ಷ ನಮ್ಮೊಂದಿಗೆ ಇದೆ ಎಂದು ಭಾವಿಸಿದೆವು. ಆದರೆ ಹಾಗಾಗಲಿಲ್ಲ. ನಮಗೆ ಸಂಖ್ಯೆಯ ಕೊರತೆ ಇದೆ. ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಎನ್​ಸಿಪಿ-ಕಾಂಗ್ರೆಸ್​-ಶಿವಸೇನೆ ಮೈತ್ರಿ ಸರ್ಕಾರ ರಚನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಎನ್​ಸಿಪಿಯ ಅಜಿತ್​ ಪವಾರ್​ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ದೇವೇಂದ್ರ ಫಡ್ನವೀಸ್​ ಹಾಗೂ ಅಜಿತ್ ಪವಾರ್​ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ರಾತ್ರೋರಾತ್ರಿ ಸರ್ಕಾರ ರಚನೆಗೆ ಆಹ್ವಾನ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಎನ್​ಸಿಪಿ-ಕಾಂಗ್ರೆಸ್​-ಶಿವಸೇನೆ ಪಕ್ಷಗಳು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದವು. ಎರಡು ದಿನಗಳ ವಿಚಾರಣೆಯ ಬಳಿಕ, ನ.27 ಸಂಜೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಮಹಾ ಸರ್ಕಾರಕ್ಕೆ ಸುಪ್ರೀಂ ಆದೇಶ ನೀಡಿತ್ತು. ಸುಪ್ರೀಂ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಅಜಿತ್ ಪವಾರ್​ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸಿಎಂ ಸ್ಥಾನಕ್ಕೆ ಫಡ್ನವೀಸ್ ರಾಜಿನಾಮೆ ನೀಡುವುದರೊಂದಿಗೆ ಸರಕಾರ ಪತನವಾಗಿದೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿನ್ನದ ದರದಲ್ಲಿ ಭಾರಿ ಇಳಿಕೆ | ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ..!
May 1, 2024
4:10 PM
by: The Rural Mirror ಸುದ್ದಿಜಾಲ
ಭಾರತವನ್ನು ಹೊಗಳಿದ ಪಾಕ್‌ ನಾಯಕ | ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ರೆ, ನಾವು ಭಿಕ್ಷೆ ಬೇಡುತ್ತಿದ್ದೇವೆ – ಫಜ್ಲುರ್ ರೆಹಮಾನ್
April 30, 2024
10:46 AM
by: The Rural Mirror ಸುದ್ದಿಜಾಲ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ | ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror