ಮಹಾರಾಷ್ಟ್ರ, ಹರಿಯಾಣದ ವಿಧಾನಸಭೆ ಚುನಾವಣೆ ಅಕ್ಟೋಬರ್‌ 21ಕ್ಕೆ, 24ಕ್ಕೆ ಫಲಿತಾಂಶ ಪ್ರಕಟ

September 21, 2019
3:52 PM

ನವದೆಹಲಿ: ಸದ್ಯದಲ್ಲಿಯೇ ಅವಧಿ ಮುಕ್ತಾಯಗೊಳ್ಳಲಿರುವ ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಯು ಒಂದೇ ಹಂತದಲ್ಲಿ ಅಕ್ಟೋಬರ್‌ 21ರಂದು ನಡೆಯಲಿದ್ದು, 24ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಆಯೋಗದ ಮುಖ್ಯಸ್ಥ ಸುನಿಲ್‌ ಅರೋರಾ ತಿಳಿಸಿದ್ದಾರೆ.

Advertisement
Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ದಿನಾಂಕ ಜಾರಿಯಾಗಿರುವುದರಿಂದಾಗಿ ಇಂದಿನಿಂದಲೇ ಈ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಹರಿಯಾಣದಲ್ಲಿ ಸುಮಾರು 1.82 ಕೋಟಿ ಮತದಾರರ ನೋಂದಣಿಯಾಗಿದ್ದು, ಮಹಾರಾಷ್ಟ್ರದಲ್ಲಿ 8.94 ಕೋಟಿ ಮತದಾರರು ಇದ್ದಾರೆ. ವಿಧಾನಸಭೆ ಚುನಾವಣೆಗಾಗಿ ಚುನಾವಣೆ ವೆಚ್ಚದ ಮೇಲೆ ನಿಗಾ ಇಡಲು ಇಬ್ಬರು ವೀಕ್ಷಕರನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿವಿಧ ರಾಜ್ಯಗಳ ಉಪಚುನಾವಣೆ ಅ. 21ಕ್ಕೆ

ಇನ್ನುಳಿದಂತೆ ಅರುಣಾಚಲ್‌ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಅಸ್ಸಾಂ, ಗುಜರಾತ್‌, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರಧೇಶ, ಮೇಘಾಲಯ, ಒಡಿಶಾ, ಪಾಂಡಿಚೆರಿ, ಪಂಜಾಬ್‌, ರಾಜಸ್ತಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಉಪಚುನಾವಣೆಯು ಅ. 21ರಂದು ನಡೆಯಲಿದ್ದು, ಅ. 24ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಟಿ ಅಂದರೇ ಪರಿಸರ….! ; ತುಳುನಾಡಿನ ವಿಶೇಷ ಆಚರಣೆ
July 24, 2025
6:39 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ | ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ
July 24, 2025
6:19 AM
by: The Rural Mirror ಸುದ್ದಿಜಾಲ
ಗೋವುಗಳಿಂದ ಖಂಡಿತಾ ಅರಣ್ಯಕ್ಕೆ ಅಪಾಯವಿಲ್ಲ – ರಾಘವೇಶ್ವರ ಶ್ರೀ
July 23, 2025
11:31 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಮಳೆ ಮುಂದುವರಿಕೆ | ಉತ್ತರ ಭಾರತದ ಹಲವೆಡೆ ಭಾರಿ ಮಳೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ |
July 23, 2025
10:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group