ಮಾ.22 : ಜನತಾ ಕರ್ಫ್ಯೂ | ನಾಗರಿಕರು ಬೆಂಬಲಿಸಲು ಹಿಂದೂ ಜನಜಾಗೃತಿ ಸಮಿತಿ ಮನವಿ

March 21, 2020
7:55 PM

ಮಂಗಳೂರು: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಕೋವಿಡ್-19 (ಕೊರೋನಾ 19 ರೋಗಾಣು) ವಿರುದ್ಧ ಹೋರಾಡಲು ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಈ ಕರೆಗೆ ಬೆಂಬಲಿಸಿ ಇಡೀ ಜಗತ್ತಿನಾದ್ಯಂತ ಇದೇ ಮೊದಲ ಬಾರಿ ಜನತೆಯು ರಾಷ್ಟ್ರಹಿತಕ್ಕಾಗಿ ತೆಗೆದುಕೊಂಡಿರುವ ಬಂದ್ ಆಗಿರಬಹುದು. ಹೀಗಾಗಿ ನಾಗರಿಕರೆಲ್ಲರು ಬೆಂಬಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.

Advertisement
Advertisement

ಕೊರೋನಾದಂತಹ ರಾಷ್ಟ್ರೀಯ ಆಪತ್ತಿನ ಸಮಯದಲ್ಲಿ ಜನಜಾಗೃತಿಯನ್ನು ಮಾಡಲು ಹಿಂದೂ ಜನಜಾಗೃತಿ ಸಮಿತಿ ಕಾರ್ಯಪ್ರವೃತ್ತವಾಗಿದೆ . ಮಂಗಳೂರು  ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ ಅಸುಪಾಸಿನಲ್ಲಿ ಹಾಗೂ ಜ್ಯೋತಿ ಸರ್ಕಲ್ ನ ಆಸುಪಾಸಿನಲ್ಲಿ ಅದೇ ರೀತಿ ಪುತ್ತೂರಿನ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ , ಬೆಳ್ತಗಂಡಿ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ ಹತ್ತಿರವೂ ಸಹ ಸಮಿತಿಯ ಕಾರ್ಯಕರ್ತರು ಕೈಯಲ್ಲಿ ಪ್ರಬೋಧನಾ ಫಲಕವನ್ನು ಹಿಡಿದು ನಿಂತಿದ್ದರು. ಈ ಮೂಲಕ ನಾಗರಿಕರಿಗೆ ‘ಕರೋನಾ 19’ ರೋಗಾಣು ವಿರುದ್ಧ ಹೋರಾಡಲು ಸರಕಾರ ಹಾಗೂ ಅದಕ್ಕೆ ಸಂಬಂಧಪಟ್ಟ ಖಾತೆಯು ಹೇಳಿದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅದೇ ರೀತಿ ಸಂಘಟಿತವಾಗಿ ಈ ಮಹಾಮಾರಿಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿರಬೇಕು ಎಂದು ಕರೆ ನೀಡಲಾಯಿತು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವೈಷ್ಣವಿ ಕೆ ಆರ್
July 25, 2025
8:13 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಜಾಹ್ನವಿ, ಬೆಂಗಳೂರು
July 25, 2025
8:07 AM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳನ್ನು ಬಿಡಾಡಿಯಾಗಿ ರಸ್ತೆಗಳಲ್ಲಿ ಬಿಡಬಾರದು
July 25, 2025
7:41 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ರಸಗೊಬ್ಬರ, ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಿಲ್ಲ
July 25, 2025
7:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group