ಸುಳ್ಯ: ಅಂತೂ ಕೊನೆಗೂ 14 ವರ್ಷಗಳ ಹಿಂದೆ ರೂಪುಗೊಂಡ ಯೋಜನೆಯೊಂದು ಪ್ರಾಯೋಗಿಕವಾಗಿ ಚಾಲನೆಗೆ ಸಿದ್ಧವಾಗಿದೆ. ಇದು ವಿದ್ಯುತ್ ಬಳಕೆದಾರರಿಗೆ ಬಹುದೊಡ್ಡ ಕೊಡುಗೆ..!.
ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಕಲೆದ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿತ್ತು. ಆದರೆ ಕುಂಟುನೆಪ ಮುಂದುವರಿದಿತ್ತು. ಇದೀಗ ಮೇ.16 ರಂದು ಪ್ರಾಯೋಗಿಕ ಚಾಲನೆಗೆ ಸಿದ್ಧತೆ ನಡೆಯುತ್ತಿದೆ. ಬೆಳ್ಳಾರೆ ವಿದ್ಯುತ್ ಬಳಕೆದಾರರ ವೇದಿಕೆ 14 ವರ್ಷಗಳ ಹಿಂದೆ ರೂಪುಗೊಂಡ ಯೋಜನೆ ಶೀಘ್ರವಾಗಿ ಮುಕ್ತಾಯಗೊಳ್ಳಲು ಕಳೆದ ಒಂದು ವರ್ಷಗಳಿಂದ ನಿರಂತರ ಹೋರಾಟ ಮಾಡಿತ್ತು, ಅಗತ್ಯವಾಗಿ ಆಗಬೇಕಾದ ಕೆಲಸಗಳ ಕಡೆಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದು ಸುಲಲಿತವಾಗುವಂತೆ ಮಾಡಿತ್ತು.
ಕಳೆದ ಒಂದು ವರ್ಷಗಳಿಂದ ವೇಗ ಪಡೆದ ಮಾಡಾವು 110 ಕೆವಿ ಸಬ್ ಸ್ಟೇಶನ್ ಇನ್ನೂ ಉದ್ಘಾಟನೆಗೆ ಕಾಯುತ್ತಿರುವುದರ ಬಗ್ಗೆ ಹಾಗೂ ವರ್ಷಗಳಿಂದ ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಹೋರಾಟ ಹಾಗೂ ಫಾಲೋಅಪ್ ಬಗ್ಗೆ ಸುಳ್ಯನ್ಯೂಸ್.ಕಾಂ ಸಮಗ್ರ ವರದಿ ಮಾಡಿತ್ತು.
ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಅವರ ನೇತೃತ್ವದ ಹೋರಾಟಕ್ಕೆ ಕೃಷಿಕರು, ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ ಗ್ರಾಮ ಪಂಚಾಯತ್ ಗಳು, ಇನ್ನಿತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.
110 ಕೆವಿ ಲೈನ್ ನಿರ್ಮಾಣಕ್ಕೆ ಅರಣ್ಯ ಅನುಮತಿ : ಅಂಗಾರ
Advertisement