ಅರಂತೋಡು: ಮಡಿಕೇರಿ ತಾಲೂಕು ಚೆಂಬುಗ್ರಾಮದ ಊರುಬೈಲು ನಿವಾಸಿ ಹರಿಜನ ಗುರುವ ಅವರ ಪತ್ನಿ 65 ವರ್ಷ ವಯಸ್ಸಿನ ಬೆಳ್ಳಚ್ಚಿ ಗುರುವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಮರುದಿನ ಬೆಳಿಗ್ಗೆ 10 ಗಂಟೆಯಾದರೂ ಮೃತರ ಕುಟುಂಬದವರಾಗಲೀ,ಬಂಧುಗಳಾಗಲಿ ಯಾರೂ ಕೂಡ ಅಂತ್ಯಸಂಸ್ಕಾರ ಕಾರ್ಯಗಳಿಗೆ ಸ್ಪಂದಿಸದೆ ಪಾರ್ಥಿವ ಶರೀರ ಅನಾಥವಾಗಿ ಉಳಿಯಿತು.
ಈ ಪರಿಸ್ಥಿತಿ ಮನಗಂಡ ಪಯಸ್ವಿನಿ ಕೃ ಪ ಸ ಸಂಘದ ಅಧ್ಯಕ್ಷರಾದ ಅನಂತ್.ಯನ್.ಸಿ ಅವರು ತಮ್ಮ ಸಮಾಜ ಸೇವಾ ಸಂಘಟನೆಯಾದ ಶ್ರೀ ಭಗವಾನ್ ಸಂಘದ ಸ್ವಯಂಸೇವಕರು ಮತ್ತು ಕೆಲವು ಯುವಕರನ್ನು ಸೇರಿಸಿಕೊಂಡು ಅಂತ್ಯಸಂಸ್ಕಾರ ಕೈಗೊಳ್ಳಲು ನಿರ್ಧರಿಸಿದರು.
ಮಳೆಯನ್ನು ಲೆಕ್ಕಿಸದೆ, ಸಂಘದ ವೆಚ್ಚದಲ್ಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಅಂತ್ಯಸಂಸ್ಕಾರ ಮಾಡಿದ್ದಲ್ಲದೆ,ಜಾತಿಭೇದವಿಲ್ಲದೆ,ಸ್ವತಃ ನಿರ್ಗತಿಕ ವೃದ್ದೆ ದಲಿತ ಮಹಿಳೆಯ ಶವಯಾತ್ರೆಗೆ ಹೆಗಲು ಕೊಟ್ಟು ಮಾನವೀಯತೆ ಮೆರೆದರು. ನೊಂದವರಿಗೆ ನೆರವಾಗುವ ಹೃದಯ ವೈಶಾಲತೆ ಮೆರೆದ ಸಂಘದ ಸದಸ್ಯರು ಜನರ ಮೆಚ್ಚುಗೆಗೆ ಪಾತ್ರರಾದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel