ಮಾಧ್ಯಮಗಳು ವಾಸ್ತವಿಕತೆಯ ಪ್ರಚಾರಕ್ಕೆ ಒತ್ತು ನೀಡಬೇಕು- ಶಾಸಕ ಅಂಗಾರ ಕರೆ

November 3, 2019
1:48 PM

ಸುಳ್ಯ: ವಾಸ್ತವಿಕ ಸತ್ಯದ ಪ್ರಚಾರಕ್ಕೆ ಒತ್ತು ನೀಡಬೇಕು. ವಾಸ್ತವವನ್ನು ಮಾತ್ರ ಬಿಂಬಿಸಿದರೆ ಮಾಧ್ಯಮಗಳ ಬಗ್ಗೆ ಜನರಿಗೆ ನಂಬಿಕೆ ಬರುತ್ತದೆ. ಜನರ ನಂಬಿಕೆ ಗಳಿಸಿದ ಮಾಧ್ಯಮಗಳು ಎತ್ತರಕ್ಕೆ ಬೆಳೆಯುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.

Advertisement

ಸುಳ್ಯದಲ್ಲಿ ಆರಂಭಗೊಂಡ ‘ಫಾರ್ಚ್ಯೂನ್ ಟಿವಿ’ ಲೋಕಾರ್ಪಣೆ ಸಮಾರಂಭದಲ್ಲಿ ಟಿವಿಯ ಲೋಗೋ ಬಿಡುಗಡೆ ಮಾಡಿ ಅವರು ‌ಮಾತನಾಡಿದರು. ಬೆಳವಣಿಗೆಯ ಪ್ರತಿ ಹಂತದಲ್ಲಿ ಟೀಕೆಗಳು, ವಿರೋಧಗಳು, ಸ್ಪರ್ಧೆಗಳು ಸಹಜ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಬೆಳೆಯಬೇಕು. ಸುಂದರ ಸುಳ್ಯ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.

ಮಾಧ್ಯಮಗಳು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರಲಿ- ಭಾರದ್ವಾಜ್: ಮಾಧ್ಯಮಗಳು ಜನರ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಪದ್ಮಶ್ರೀ ಪುರಸ್ಕೃತ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಹೇಳಿದರು. ನೈಜತೆಯನ್ನು ಬಿಂಬಿಸುವುದರ ಜೊತೆಗೆ ಮಾನವ ಪ್ರೀತಿಯನ್ನು ಬೆಳೆಸಲು ಮಾಧ್ಯಮಗಳು ಸೇತುವೆಯಾಗಬೇಕು ಎಂದರು.

ವಿಶ್ವಾಸಾರ್ಹತೆ ಜೀವಾಳ-ಶ್ರಿನಿವಾಸ್ ಇಂದಾಜೆ: ಪ್ರತಿಯೊಂದು ಮಾಧ್ಯಮಕ್ಕೂ ವಿಶ್ವಾಸಾರ್ಹತೆಯೇ ಜೀವಾಳ ಎಂದು ದ.ಕ‌.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹೇಳಿದ್ದಾರೆ ನವ ಮಾಧ್ಯಮಗಳ ಯುಗದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿ ಬೆಳೆಯುವುದು ಪ್ರತಿಯೊಂದು ಮಾಧ್ಯಮಕ್ಕೂ ದೊಡ್ಡ ಸವಾಲು. ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮತ್ತು ಜವಾಬ್ದಾರಿ ದೊಡ್ಡದು ಎಂದರು.

Advertisement

ನಾಡಿನ ಪ್ರಗತಿಯ ಸಂಕೇತ-ಖಾದರ್ ಶಾ: ಮಾಧ್ಯಮಗಳು ಆರಂಭವಾಗುವುದು ಒಂದು ನಾಡಿನ ಬೆಳವಣಿಗೆಯ ಸಂಕೇತ ಎಂದು ವಾರ್ತಾಧಿಕಾರಿ ಖಾದರ್ ಶಾ ಅಭಿಪ್ರಾಯಪಟ್ಟರು. ಊರಿನ ಬೆಳವಣಿಗೆಯ ಜೊತೆಗೆ ಮಾಧ್ಯಮಗಳೂ ಬೆಳೆಯಬೇಕು ಎಂದು ಅವರು ಕರೆ ನೀಡಿದರು.

ಜಯರಾಮ ಶೆಟ್ಟಿ ಕಂಬಳಪದವು ದೀಪ ಬೆಳಗಿಸಿ ಫಾರ್ಚ್ಯೂನ್ ಟಿವಿಯನ್ನು ಲೋಕಾರ್ಪಣೆ ಮಾಡಿದರು. ಸುಳ್ಯ ಪೊಲೀಸ್ ಉಪನಿರೀಕ್ಷಕ ಎಂ.ಆರ್.ಹರೀಶ್, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ‌.ಸುಧಾಕರ ರೈ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ ಪೆರಾಜೆ, ಪ್ರಗತಿಪರ ಕೃಷಿಕ ಸೀತಾರಾಮ ಕೊಲ್ಲರಮೂಲೆ, ಆರ್ ಜೆ ತ್ರಿಶೂಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫಾರ್ಚ್ಯೂನ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಆಭಿಲಾಷ್ ಕಂಬಳಪದವು ಉಪಸ್ಥಿತರಿದ್ದರು. ಪ್ರಧಾನ ಸಂಪಾದಕ ವಿಖ್ಯಾತ್ ಬಾರ್ಪಣೆ ಸ್ಚಾಗತಿಸಿ, ಪ್ರಸ್ತಾವನೆಗೈದರು.
ಪ್ರಸಾದ್ ಕಾಟೂರು ಮತ್ತು ಸುಶ್ಮಿತ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಗುಡ್ಡೆಮನೆ ಸಹಕರಿಸಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ | ಮೇಘಸ್ಫೋಟದಿಂದ ದಿಢೀರ್ ಪ್ರವಾಹ-ಭೂಕುಸಿತ
August 31, 2025
10:08 PM
by: The Rural Mirror ಸುದ್ದಿಜಾಲ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ವಿಮೆ | ಬೆಳೆ ವಿಮೆಯಿಂದಾಗಿ ರೈತರಲ್ಲಿ ಸಂತಸ
August 31, 2025
9:59 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 31-08-2025 | ವಾಯುಭಾರ ಕುಸಿತ – ಸೆ.2 ರಿಂದ ಎಲ್ಲೆಲ್ಲಾ ಮಳೆ..?
August 31, 2025
8:55 PM
by: ಸಾಯಿಶೇಖರ್ ಕರಿಕಳ
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸದುಪಯೋಗ ಪಡಿಸಿಕೊಳ್ಳಲು  ಮಹಿಳೆಯರಿಗೆ ಕರೆ
August 31, 2025
7:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group