ಮೀಸಲಾತಿ ಮುಕ್ತಿ ಅಭಿಯಾನ ಮುಂದುವರಿಕೆ: ಮೀಸಲಾತಿ ಮುಕ್ತಿ ಹೋರಾಟ ಸಮಿತಿ

December 6, 2019
6:38 PM

ಸುಳ್ಯ: 2020ರಲ್ಲಿ ಕೊನೆಗೊಳ್ಳಬೇಕಾದ ದೇಶದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ಕ್ಯಾಬಿನೆಟ್‌ನಲ್ಲಿ ನಿರ್ಧರಿಸಿ 10 ವರ್ಷಗಳ ಕಾಲ ಅದೇ ರೀತಿಯಲ್ಲಿ ಮುಂದುವರಿಸುವ ನಿರ್ಧಾರ ಸರಿಯಲ್ಲ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ಮೀಸಲಾತಿ ಮುಕ್ತಿ ಸಮಿತಿಯ ಸಂಚಾಲಕ ಪ್ರದೀಪ್‌ಕುಮಾರ್ ಕೆ.ಎಲ್ ಹೇಳಿದ್ದಾರೆ.

Advertisement
Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಮೀಸಲಾತಿ ನೀಡುವುದಕ್ಕೆ ನಾವು ವಿರೋಧವಿಲ್ಲ. ಅದರೆ ಮೀಸಲಾತಿ ಕಾಲ ಕಾಲಕ್ಕೆ ಬದಲಾವಣೆಯಾಗಬೇಕು, ಎಲ್ಲಾ ಕ್ಷೇತ್ರದ ಜನರಿಗೂ ಮೀಸಲಾತಿಯ ಅವಕಾಶ ದೊರೆಯುವಂತಾಗಬೇಕು. ಒಂದೊಂದೇ ಕ್ಷೇತ್ರದಲ್ಲಿ 60-70 ವರ್ಷಗಳ ಕಾಲ ಮೀಸಲಾತಿ ನೀಡಿದರೆ ಉಳಿದ ಕ್ಷೇತ್ರದ ಜನರು ಅವಕಾಶದಿಂದ ವಂಚಿತರಾಗುತ್ತಾರೆ ಮತ್ತು ಮೀಸಲಾತಿ ನೀಡುವ ಉದ್ದೆಶ ಈಡೇರುವುದಿಲ್ಲ. ಮೀಸಲಾತಿ ಬದಲಿಸಲು ಅಥವಾ ಮುಂದುವರಿಸಲು ಅದಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಿ ಅವರು ನೀಡಿದ ತೀರ್ಮಾನದ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಈ ಹಿಂದೆ ಮೂರು ಬಾರಿ ನಿಯೋಜಿತ ಸಮಿತಿಯ ವರದಿಯ ಆಧಾರದಲ್ಲಿಯೇ ದೇಶದಲ್ಲಿ ಶೇ.20ರಷ್ಟು ಬದಲಾವಣೆಯನ್ನು ಮಾಡುತ್ತಿದ್ದರು. ಆದರೆ ಚುನಾವಣಾ ಸಮಿತಿಯ ತೀರ್ಮಾನದಂತೆ 2020ರಲ್ಲಿ ಕೊನೆಗೊಳ್ಳಬೇಕಾದ 20 ವರ್ಷದ ಮೀಸಲಾತಿಯ ಅವಧಿಯನ್ನು 10 ವರ್ಷಗಳ ಕಾಲ ಅದೇ ರೀತಿ ವಿಸ್ತರಿಸುವುದು ಎಂಬ ನಿರ್ಧಾರ ಸರಿಯಲ್ಲ ಎಂದರು.

Advertisement

2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಳ್ಯದಲ್ಲಿ ಮೀಸಲಾತಿ ಮುಕ್ತಿ ಅಭಿಯಾನವನ್ನು ಮಾಡಿ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮೀಸಲಾತಿ ಮುಕ್ತಿ ಸಮಿತಿಯ ವತಿಯಿಂದ ನಡೆಸಲಾಗಿತ್ತು. ಮೀಸಲಾತಿ ಮುಕ್ತಿಗಾಗಿ ಅಭಿಯಾನ ಮತ್ತು ಕಾನೂನು ರೀತಿಯ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಶೋಕ್ ಎಡಮಲೆ, ಪ್ರವೀಣ್ ಮುಂಡೋಡಿ, ಚೆನ್ನಕೇಶವ ನಾಯಕ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!
April 30, 2024
9:03 PM
by: ಕುಮಾರ್ ಪೆರ್ನಾಜೆ
ಆರೋಗ್ಯ ಕವಚ ಸಿಬಂದಿಗಳಿಗೆ ವೇತನವಾಗಿಲ್ಲ..! | ಗ್ರಾಮೀಣ ಭಾಗದ ಜೀವ ರಕ್ಷಕರು ಅತಂತ್ರದಲ್ಲಿ..!
April 30, 2024
7:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?
April 30, 2024
2:28 PM
by: ಮುರಳಿಕೃಷ್ಣ ಕೆ ಜಿ
Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
April 30, 2024
11:19 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror